ಹೊನ್ನಳ್ಳಿಯಲ್ಲಿ ಆ.12ರಿಂದ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ 18ನೇ ವರ್ಷದ ಶ್ರಾವಣಾಚರಣೆ
ಬಳ್ಳಾರಿ 09: ಪವಾಡಗಳ ಪವಾಡ ಪುರುಷ, ನಂಬಿದವರ ಕಾಮಧೇನು ಕಲ್ಪವೃಕ್ಷವಾಗಿರುವ ಶ್ರೀ ಗುರು ಕರಿಬಸವೇಶ್ವರಸ್ವಾಮಿಯವರ 18ನೇ ವರ್ಷದ ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ ಇದೇ ಆಗಸ್ಟ್ 12 ರಿಂದ ವಿದ್ಯುಕ್ತವಾಗಿ ಜರುಗಲಿದೆ.
ಈ ಕುರಿತು ಶ್ರೀ ಗುರು ಕರಿಬಸವಜ್ಜಯ್ಯ ಮತ್ತು ಪರಮ ಗುರು ಶ್ರೀ ಹೇಮಜ್ಜಯ್ಯ ಸೇವಾ ಸಮಿತಿಯ ಧರ್ಮಾಧ್ಯಕ್ಷರು ಹಾಗೂ ವಕೀಲರಾದ ಡಿ. ಮಲ್ಲಿಕಾರ್ಜುನ ಅವರು ಮಾಹಿತಿ ನೀಡಿದ್ದು, ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನಳ್ಳಿ ತಾಂಡ ಪವಿತ್ರ ಪುಣ್ಯ ಕ್ಷೇತ್ರವೆನಿಸಿದೆ. ಇಲ್ಲಿ ಪವಾಡಗಳ ಪವಾಡ ಪುರುಷ, ನಂಬಿದವರ ಪೊರೆಯುವ ಶ್ರೀ ಗುರು ಕರಿಬಸವೇಶ್ವರಸ್ವಾಮಿ ನೆಲೆಸಿದ್ದು ಭಕ್ತರು ಬೇಡಿದ ಇಷ್ಟಾರ್ಥಗಳನ್ನು ನೀಡುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಕಳೆದ 18 ವರ್ಷಗಳಿಂದ ಭಕ್ತರಿಗಾಗಿ ಮತ್ತು ಲೋಕೋದ್ಧಾರಕ್ಕಾಗಿ ಇಲ್ಲಿ ಶ್ರಾವಣ ಮಾಸದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.
ಈ ಬಾರಿ ಆ.12 ರಂದು ಎರಡನೇ ಸೋಮವಾರದ ಪೂಜಾ ಕರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸದ್ಭಕ್ತರು ಭಾಗವಹಿಸಿ, ಧನ್ಯತೆಯೊಂದಿಗೆ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ತಿಳಿಸಿದ್ದಾರೆ. ಶ್ರಾವಣಾಚರಣೆಯ ನಿಮಿತ್ತ ಆಗಸ್ಟ್ 11 ರ ಭಾನುವಾರದಂದು ಸಂಜೆ 5 ಗಂಟೆಯಿಂದ ಭಜನಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಮತ್ತು ಬೆಂಗಳೂರಿನ ಕರ್ನಾಟಕ ಸ್ಪಾಂಜ್ ಐರನ್ ಅಧ್ಯಕ್ಷರಾದ ಟಿ ಶ್ರೀನಿವಾಸ್ರಾವ್, ಹಲಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಾಯಮ್ಮ ಬಸವರಾಜ್, ಉಪಾಧ್ಯಕ್ಷ್ಷರಾದ ಸುವರ್ಣ ಹೊನ್ನೂರಸ್ವಾಮಿ, ಹಲಕುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭಾಕರ್, ಹೊನ್ನಳ್ಳಿ ತಾಂಡಾದ ಪ್ರಮುಖರಾದ ಪಟೇಲ್ ರಾಮ ನಾಯಕ್ ಸೇರಿದಂತೆ ಕರಿಬಸವಜ್ಜಯ್ಯನ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗುಗ್ಗರಹಟ್ಟಿಯ ಶ್ರೀ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿಯಿಂದ ಭಜನಾ ಪೂಜೆಯನ್ನು ಏರಿ್ಡಸಲಾಗಿದೆ. ಆ.12ರಂದು ಎರಡನೇ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಗಂಗಾ ಪೂಜೆ, ದೊಳ್ಳು ಕುಣಿತ, ಅಜ್ಜಯ್ಯನಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ಜರುಗಲಿದೆ. ದೂರದ ಊರಿನಿಂದ ಬರುವ ಭಕ್ತರೂ ಒಳಗೊಂಡಂತೆ ಸ್ಥಳೀಯ ಎಲ್ಲ ಭಕ್ತರಿಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಕಲ ಭಕ್ತಾಧಿಗಳು ಶ್ರೀ ಗುರು ಕರಿಬಸವೇಶ್ವರ ಹಾಗೂ ಶ್ರೀ ಹೇಮಜ್ಜಯ್ಯನವರ ದರ್ಶನ ಪಡೆದು ತಮ್ಮ ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥಿಸಿ ಬಳಿಕ ಪ್ರಸಾದವನ್ನು ಸ್ವೀಕರಿಸಿ ಅಜ್ಜಯ್ಯನವರ ಕೃಪೆಗೆ ಪಾತ್ರರಾಗುವಂತೆ ಧರ್ಮದರ್ಶಿಗಳು ತಿಳಿಸಿದ್ದಾರೆ.
ಕ್ಷಿಪ್ರ ಫಲ ಪ್ರಢದಾಯಕ: ಯಾವುದೇ ಜಾತಿ, ಧರ್ಮ, ಕುಲ, ಗೋತ್ತ ಎಣಿಸದೇ ತಮ್ಮ ಸಮಸ್ಯೆಗಳು ಇದ್ದಲ್ಲಿ ಸತ್ಸಂಕಲ್ಪದಿಂದ ಇಲ್ಲಿಗೆ ಭೇಟಿ ಕೊಟ್ಟರೆ ಸಾಕು ಕಷ್ಟಗಳೆಲ್ಲಾ ಬಗೆಹರಿಯುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ, ಹೊಸಪೇಟೆ, ಕೊಪ್ಪಳ, ದಾವಣಗೆರೆ, ರಾಯದುರ್ಗ, ಕಲ್ಯಾಣದುರ್ಗ, ಚಿತ್ರದುರ್ಗ, ತುಮಕೂರು, ಬೆಂಗಳೂರು ಸೇರಿದಂತೆ ಈ ಭಾಗದ ಭಕ್ತರಿಗೆ ಸಂಪರ್ಕವಿರುವ ನಾಡಿನ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತರು ಅಜ್ಜಯ್ಯ ಸ್ವಾಮಿಯ ದರ್ಶನ ಪಡೆಯಲು ಬರುತ್ತಿರುತ್ತಾರೆ. ದೆವ್ವ, ಭೂತ, ಅಪಜಯ, ಅಪಕೀರ್ತಿ, ವ್ಯಾಜ್ಯ, ಕೋರ್ಟು ಕಚೇರಿ ಸಮಸ್ಯೆಗಳು, ಆರೋಗ್ಯ ತೊಂದರೆಗಳು ಸೇರಿದಂತೆ ಯಾವುದೇ ಸಂಕಷ್ಟಗಳಿಗೆ ಇಲ್ಲಿ ಪರಿಹಾರ ಇದೆ.
ಭಕ್ತರು ಸೋಮವಾರ, ಗುರುವಾರ, ಹುಣ್ಣಿಮೆ, ಅಮಾವಾಸ್ಯೆ ಅಥವಾ ವಿಶೇಷ ದಿನಗಳಲ್ಲಿ ಇಲ್ಲಿಗೆ ಬಂದು ಮಂಡಾಳು, ದಾಣಿ, ಲಿಂಬೆಹಣ್ಣು, ಬಾಳೆ ಹಣ್ಣು ಅರ್ಿಸಿ ಪ್ರಾರ್ಥಿಸಿದರೆ ಸಾಕು ಅಜ್ಜಯ್ಯ ಅಂತಹ ಯಾವುದೇ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾನೆ ಎಂದು ಭಕ್ತರು ಹೇಳುತ್ತಾರೆ. ಪ್ರತಿ ಅಮಾವಾಸ್ಯೆಗೆ ಹೆಚ್ಚಿನ ಭಕ್ತರು: ತಮ್ಮ ಸಮಸ್ಯೆಗಳನ್ನು ಹೊತ್ತು ಬರುವ ಭಕ್ತರು ಪ್ರತಿ ಅಮವಾಸ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೈಹಿಕ ಹಾಗೂ ಮಾನಸಿಕ ಕಾಯಿಲೆಗಳಿಂದ ಬಳಲುವ, ಆತಂಕ, ಚಿಂತೆ ಮತ್ತು ಭಯದ ಮನಸ್ಥಿತಿಯ ಜನರಿಗೆ ಇಲ್ಲಿ ಪರಿಹಾರ ದೊರೆಯುವುದೆಂಬ ನಂಬಿಕೆ ಇದೆ. ಹೀಗಾಗಿ ಸಾವಿರಾರು ಭಕ್ತರು ಪೂಜ್ಯ ಹೇಮಜ್ಜಯ್ಯ ಸ್ವಾಮಿಯ ಬಳಿ ಹೇಳಿಕೊಳ್ಳುತ್ತಿದ್ದರು.
ಹೇಮಜ್ಜಯ್ಯ ಅವರ ಗುದ್ದಿಗೆಯೂ ಇಲ್ಲಿದ್ದು, ಹೊನ್ನಳ್ಳಿ ತಾಂಡಾದ ಅಜ್ಜಯ್ಯನ ದರ್ಶನ ಪಡೆದು ಕಷ್ಟಗಳಿಂದ ಭಕ್ತರು ಮುಕ್ತರಾಗುತ್ತಿದ್ದಾರೆ. ಬೇಕೆನಿಸಿದಾಗ ಇಲ್ಲಿಗೊಮ್ಮೆ ಭೇಟಿ ನೀಡಿದರೆ ಅಜ್ಜಯ್ಯ ನಮ್ಮನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಭಕ್ತರಿಗಾಗಿ ಶ್ರೀಕ್ಷೇತ್ರದಲ್ಲಿ ಸಕಲ ವ್ಯವಸ್ಥೆಗಳನ್ನೂ ಕಲ್ಪಿಸಲಾಗಿದೆ ಎಂದು ಧರ್ಮಾಧ್ಯಕ್ಷರು ಹಾಗೂ ವಕೀಲರೂ ಆದ ಡಿ.ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.