ಹಗರಿಬೊಮ್ಮನಹಳ್ಳಿ

ಶ್ರೀ ಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ

ಶ್ರೀ ಬಂಡೆ ರಂಗನಾಥೇಶ್ವರ ಸ್ವಾಮಿ ರಥೋತ್ಸವ

ಹಗರಿಬೊಮ್ಮನಹಳ್ಳಿ 20: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಶ್ರೀ ಬಂಡೆರಂಗನಾಥೇಶ್ವರ ಸ್ವಾಮಿಯ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. 

ಬೆಟ್ಟದಲ್ಲಿ ನೆಲೆಸಿರುವ ಶ್ರೀ ರಂಗನಾಥೇಶ್ವರ ಮತ್ತು ಲಕ್ಷ್ಮೀ ದೇವಿಗೆ ಕಳೆದ ಒಂದು ವಾರದಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು, ರಥೋತ್ಸವ ನಿಮಿತ್ಯ ದೇವಸ್ಥಾನಕ್ಕೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು, ಸ್ವಾಮಿಗೆ ಪಂಚಾಭಿಷೇಕ ನೇರವೇರಿಸಲಾಯಿತು.  

ಬೆಟ್ಟದ ಮೇಲಿನ ಶ್ರೀಬಂಡೆರಂಗನಾಥೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಲಾಯಿತು. ಬಳಿಕ ನಂದಿಪುರದ ಮಹೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ರಥದ ಸುತ್ತ 5 ಭಾರಿ ಉತ್ಸವ  ಮೂರ್ತಿಯನ್ನು ಪ್ರದಕ್ಷಣಿ ಹಾಕಲಾಯಿತು. ಪಟಾಕ್ಷಿ ಹರಾಜಿನಲ್ಲಿ ಜೆಡಿಎಸ್‌ನ ಮುಖಂಡ ಕೊಟ್ಟೂರಿನ ವಿ,ತಿಪ್ಪೆಸ್ವಾಮಿ ವೆಂಕಟೇಶ್ 1.ಲಕ್ಷದ 51 ಸಾವಿರ ರೂಪಾಯಿಗೆ ಪಡೆದರು. 

ಬಳಿಕ ಭಕ್ತರಿಂದ ರಥಕ್ಕೆ ಪೂಜೆ ಸಲ್ಲಿಸಿ ತೇರಿನ ಗಾಲಿಗಳಿಗೆ ಈಡುಗಾಯಿ ಒಡೆಯಲಾಯಿತು,  ಗ್ರಾಮದ ಅಪ್ಪು ಅಭಿಮಾನಿಗಳಿಂದ ರಥಕ್ಕೆ ಬೃಹತ್ ಹೂವಿನಹಾರ ಅರ​‍್ಿಸಿ ಪುನೀತರಾದರು. ಲಕ್ಷ್ಮೀ ವೆಂಕಟರಮಣಾ..ಗೋವಿಂದ...ಗೋವಿಂದ ಎನ್ನುವ ಜಯಘೋಷಗಳ ಮಂತ್ರಗಳ ನಡುವೆ ರಥೋತ್ಸವವು ಮುಂದೆ ಸಾಗಿತು, ನೆರದ ಭಕ್ತರು ತೇರಿಗೆ ಬಾಳೆಹಣ್ಣು ಉತ್ತತ್ತಿ ಎಸೆದು ಸ್ವಾಮಿಗೆ ಧನ್ಯತೆ ಮೆರೆದರು.  ಈ ವೇಳೆ ಹೆಚ್ಚಿನ ಯುವಕರು  ಅತೀ ಉತ್ಸಾಹದಿಂದ ತೇರು ಎಳೆದು ಸಂಭ್ರಮಿಸಿದರು.  

ನಂದಿಪುರದ ಮಹೇಶ್ವರ ಸ್ವಾಮಿಜಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ನೂತನ ಕಮಿಟಿಯ ಅಧ್ಯಕ್ಷ ಬಿ.ಲಕ್ಷ್ಮಣ, ಹೆಚ್‌ಬಿ ಗಂಗಾಧರಗೌಡ, ಸರಾಯಿ ಮಂಜುನಾಥ, ಸುಣಗಾರ ಮಂಜುನಾಥ್, ಸುಣಗಾರ ಪರುಶುರಾಮ, ಮಂಜುನಾಥ ಪಾಟೀಲ್, ಬಣಕಾರ ಕೊಟ್ರೇಶ್, ಅಕ್ಕಿ ಶಿವುಕಮಾರ್, ಟಿ.ಉದಯಭಾಸ್ಕರ್‌ರಾವ್, ಕಿನ್ನಾಳ ಸುಭಾಷ, ಬಿ. ಗಂಗಾಧರ, ಕಡ್ಡಿ ಚನ್ನಬಸಪ್ಪ, ಟಿ.ವೆಂಕೋಬಪ್ಪ, ಬಿ.ದೇವಿಪ್ರಸಾದ್, ಆರ್ಚಕ ರಂಗನಗೌಡ ಪೂಜಾರ್ ಹಾಗೂ ದೇವಸ್ಥಾನ ಕಮಿಟಿಯ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 

ಹಗರಿಬೊಮ್ಮನಹಳ್ಳಿಯ ವರ್ತಕ ಬಿ. ಗಂಗಾಧರ ಹಾಗೂ ಸಹೋದರರು ಮತ್ತು  ಜೆಸಿಐ ಸನ್‌ಪ್ಲವರ್ ಇವರಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು,  ಸ್ಥಳೀಯ ಪೋಲಿಸರು ರಥೋತ್ಸವ ನಿಮಿತ್ಯ ಬಂದೋಬಸ್ತ ವ್ಯವಸ್ಥೆ ಮಾಡಿದ್ದರು. 


ಸುದ್ದಿ ಓದಿ