ಸಮಾಜವನ್ನು ಉತ್ತುಂಗಕ್ಕೇರಿಸುವಲ್ಲಿ ಶ್ರೀಗಳ ಪಾತ್ರ ಅನನ್ಯ: ಬಸವರಾಜ್
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 05: ತಾಲೂಕು ಕುರುಬರ ಸಂಘದಿಂದ ಕಲ್ಬುರ್ಗಿ ವಿಭಾಗದ ತಿಂಥಿಣಿ ಬ್ರಿಡ್ಜ್ನ ಶ್ರೀ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಗಳ ಹುಟ್ಟು ಹಬ್ಬದ ನಿಮಿತ್ತ ಪಟ್ಟಣದ ಗಂಗಾವತಿ ವೆಂಕೋಬಣ್ಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಿದರು.
ಕುರುಬ ಸಂಘದ ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ್ ಮತನಾಡಿ ಸ್ವಾಮಿಜೀಗಳು ನಮ್ಮ ಸಮಾಜದ ಮಾರ್ಗದರ್ಶಕರಾಗಿದ್ದು ಸಮಾಜವನ್ನು ಉತ್ತುಂಗಕ್ಕೇರಿಸುವಲ್ಲಿ ಶ್ರೀಗಳ ಪಾತ್ರ ಅನನ್ಯವಾಗಿದೆ ಹಾಗೂ ಸಮಾಜದ ಬಂಧುಗಳನ್ನು ಒಗ್ಗೂಡಿಸಿ ಏಳ್ಗೆಯತ್ತ ಸಾಗಿಸುವಲ್ಲಿ ಮತ್ತು ಮೂಂಚೂಣಿಯಲ್ಲಿ ತರುವಲ್ಲಿ ಶ್ರೀಗಳ ಸೇವೆ ಅಪಾರವಾಗಿದೆ, ಮುಂದಿನ ದಿನಗಳಲ್ಲಿ ಇವರ ಆಶಿರ್ವಾದ ಸದಾ ಸಮಾಜಕ್ಕೆ ಅವಶ್ಯಕವಾಗಿದ್ದು ನೂರಾರು ವರ್ಷಗಳ ಕಾಲ ಬಾಳುವಂತೆ ಭಗವಂತ ಅವರಿಗೆ ಆಯಸ್ಸು ಇಮ್ಮಡಿಗೊಳಿಸಿ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲಿ ಎಂದರು.
ಈ ಸಂಧರ್ಭದಲ್ಲಿ ಧರ್ಮದರ್ಶಿ ಬಣಕಾರ ಗೋಣೆಪ್ಪ, ಮುಖಂಡ ಮುಟುಗನಹಳ್ಳಿ ಕೊಟ್ರೇಶ್, ಮೈಲಾರ್ಪ, ಗಾಂಜಿ ಅಜ್ಜಪ್ಪ, ಹ್ಯಾಳ್ದ ಚನ್ನಬಸಪ್ಪ, ಬಿ.ಕೆ.ಬಸವರಾಜ, ಕೋಗಳಿ ಮಾಲತೇಶ್, ಕೊಟ್ರಯ್ಯ, ವಡೆಯರ ಆಂಜನೇಯ, ಕೆಚ್ಚಿಬಂಡಿ ಹನುಮಂತಪ್ಪ, ಬೀರ್ಪ, ಜಂಬಣ್ಣ, ತಿಪ್ಪೆಗುಂಡಿ ಮಂಜುನಾಥ್, ಮಲ್ಲೇಶ್, ಪಂಪಾಪತಿ, ಹಳ್ಳಿ ಚಂದ್ರ್ಪ, ಕೆ.ಕುಮರ್, ಹುಡೇದ್ ಹುಲುಗಪ್ಪ, ಉಲವತ್ತಿ ಕೊಟ್ರೇಶ್, ಎಂ.ಎಸ್.ಕಲ್ಗುಡಿ ಸೇರಿದಂತೆ ಇನ್ನಿತರರು ಇದ್ದರು.