ಮಹಲಿಂಗಪುರ

ಮೇರು ಸಾಧನೆಗೆ ಕ್ರೀಡೆ ರಹದಾರಿ: ಎಸ್. ಎಂ. ಕುರಣಿ

ಮೇರು ಸಾಧನೆಗೆ ಕ್ರೀಡೆ ರಹದಾರಿ: ಎಸ್. ಎಂ. ಕುರಣಿ

ಮಹಾಲಿಂಗಪುರ : ಮಗುವಿನ ಪ್ರತಿಭೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಸರಳ ಮಾರ್ಗ ಕ್ರೀಡೆಯಾಗಿದೆ ಆದ್ದರಿಂದ ಮಕ್ಕಳು ಕ್ರೀಡಾ ಪ್ರತಿಭೆ ಮೆರೆದು ನಾಡಿನ ಕೀರ್ತಿ  ಹೆಚ್ಚಿಸಿ ಎಂದು ತಾಲೂಕು ದೈಹಿಕ ಪರಿವೀಕ್ಷಕ ಎಸ್. ಎಂ. ಕುರಣಿ ಹೇಳಿದರು. 

ಕೆಜಿಎಸ್ ಕ್ಲಸ್ಟರ್ ಸಹಯೋಗದಲ್ಲಿ ಸ್ಥಳೀಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ವಿಭಾಗದ ವಲಯ ಮಟ್ಟದ ಕ್ರೀಡಾಕೂಟ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 

ಸಿಆರ್ ಪಿ ಎಸ್.ಎನ್.ಬ್ಯಾಳಿ ಮಾತನಾಡಿ, ಸೋಲು ಗೆಲುವನ್ನು ಮೆಟ್ಟಿನಿಂತು ನಾಯಕತ್ವ, ಕಷ್ಟ ಸಹಿಷ್ಣುತೆಗಳಿಂದ ಸದೃಢವಾಗಲು ಕ್ರೀಡೆ ಅಗತ್ಯ ಕ್ರೀಡಾಕೂಟದ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿರುವ ಕೆಎಎಸ್ ಅಧಿಕಾರಿ ಉಮೇಶ ಸಿದ್ನಾಳ ಹಾಗೂ ಪದಕ, ಟ್ರೋಫಿ ಮುಂತಾದ ವ್ಯವಸ್ಥೆ ಮಾಡಿರುವ ಶಂಕರ ಎಲೆಕ್ಟ್ರಿಕಲ್ಸ್ ಅಂಡ್ ದುಗರ್ಾ ಪ್ಲೈವುಡ್ ಮಾಲೀಕರ ಕಾರ್ಯ ಅನುಕರಣನೀಯ ಎಂದರು. 

ಬಿ ಆರ್ ಪಿ ಎಸ್. ಎನ್. ಗಣಿ ಮಾತನಾಡಿದರು, 

ಸ್ಥಳೀಯ ಸಕರ್ಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಸ್. ಜಿ .ಚಿಪ್ಪಾಡಿ ಕ್ರೀಡಾ ಜ್ಯೋತಿ ಬೆಳಗಿಸಿ, ವೈ.ಎ.ಮುಗದುಮ್ ಪ್ರತಿಜ್ಞಾವಿಧಿ ಬೋಧಿಸಿದರು. 

ಸ್ಥಳೀಯ ಮಕ್ಕಳು ವ್ಹಾಲಿಬಾಲ್ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಬೆಳೆಯಲು ಶ್ರಮಿಸಿದ ಶಿಕ್ಷಕ ಮಹಾಂತೇಶ ಬುರಕಲೆಯವರನ್ನು ಸನ್ಮಾನಿಸಲಾಯಿತು. 

ಸಿ ಆರ್ ಪಿ ಗಳಾದ ವೈ ಎಸ್ ಲಮಾಣಿ ನವೀನ್ ಜನಚನೆಗೆ ಟಿಎಂ ನಾಯಕವಾಡಿ ಹಾಗೂ ವಲಯ ಮುಖ್ಯಸ್ಥ ಪಿ ಸಿ ಫಕೀರನವರ ಶಿಕ್ಷಕ ಕೆ.ಎಸ್.ಹಿರೇಮಠ ಇದ್ದರು. ಕು. ಐಶ್ವರ್ಯ ಕರಿಗಾರ ಮತ್ತು ಸಂಗಡಿಗರು ಪ್ರಾರ್ಥಿಸಿ, ಶಿಕ್ಷಕ ಹುಮಾಯೂನ್ ಸುತಾರ್ ನಿರೂಪಿಸಿದರು 

ಸುದ್ದಿ ಓದಿ