ಶಿಗ್ಗಾವ್

ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ: ದುಂಡಿಗೌಡ್ರ

ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ: ದುಂಡಿಗೌಡ್ರ

ಶಿಗ್ಗಾವಿ,06 :ಮಕ್ಕಳ ಸವಾಂರ್ಗೀಣ ಬೆಳವಣಿಗೆಗೆ ಕ್ರೀಡೆಗಳು ಸಹಕಾರಿ ಹಾಗೂ ದಿನವಿಡಿ ಉತ್ಸಾಹದಿಂದವಿರಲು ಕ್ರೀಡೆಗಳು ಸಹಕಾರಿಯಾಗುತ್ತದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಕ್ಕಳಿಗೆ ಕಿವಿ ಮಾತು ಹೇಳಿದರು. 

 ತಾಲೂಕಿನ ಚಿಕ್ಕಮಲ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಬನ್ನೂರ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದಅವರುಕ್ಲಸ್ಟರ್ ಮಟ್ಟದಿಂದತಾಲೂಕ ಮಟ್ಟ ,ಜಿಲ್ಲಾ ಮಟ್ಟಕ್ಕೆ, ಅಲ್ಲಿಂದರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಕ್ಕಳು ಕ್ರೀಡೆಯಲ್ಲಿ ಯಶಸ್ಸು ಗಳಿಸಲಿ ಸದೃಢದೇಹಕ್ಕೆ ಕ್ರೀಡೆ ಅವಶ್ಯಕ ಎಂದು ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಎಸ್‌.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್ ಏಗನಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಸುರೇಶ್ ಹರಿಜನ,ತಾಲೂಕರೈತ ಸಂಘದ ಅಧ್ಯಕ್ಷ ಶಂಕರಗೌಡ ಪಾಟೀಲ, ಹಿರಿಯರಾದ ಎಲ್ಲಪ್ಪ ನೀಲಮ್ಮನವರು, ಮಹದೇವಪ್ಪ ಗಂಜಿಗಟ್ಟಿ, ಗಂಗವ್ವ ಕುಂಕುರ, ಜಯವ್ವ ಸಾವಕ್ಕನವರ್, ಗದಿಗೆಪ್ಪ ನಂದಿ, ಪಕ್ಕೀರಗೌಡ ತೆಂಬದಮನಿ, ಹೆಚ್‌.ಡಿ. ಕುಂಕುರ, ಸತೀಶ ಸಾವಕ್ಕನವರ, ಹಾಗೂ ಅನೇಕ ಗುರು ಹಿರಿಯರು ಮುದ್ದು ಮಕ್ಕಳು ಶಿಕ್ಷಕರು ಉಪಸ್ಥಿತರಿದ್ದರು. 


ಸುದ್ದಿ ಓದಿ