ಆರೋಗ್ಯ ಸ್ಥಿರತೆಗೆ ಕ್ರೀಡೆ ಸಹಕಾರಿ: ಕಾರ್ತೀಕ್
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 16: ಮನುಷ್ಯನು ಉತ್ತಮ ಆರೋಗ್ಯ ಹೊಂದಬೇಕಾದರೆ ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು, ಉತ್ತಮ ಆರೋಗ್ಯ ಮತ್ತು ಆರೋಗ್ಯ ಸ್ಥಿರತೆಗೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ತಹಶೀಲ್ದಾರ್ ಕಾರ್ತೀಕ್ ಹೇಳಿದರು.
ನಗರದ ಸರಕಾರಿ ಗಂ.ಭೀ. ಕಾಲೇಜು ಕ್ರೀಡಾಂಗಣದಲ್ಲಿ ನಡೆದ ದಸರಾ ಕ್ರೀಡಕೂಟ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರು ದೇಶದ ಶಕ್ತಿಯಾಗಿದ್ದಾರೆ ಕೈಹಿಕವಾಗಿ ಮನುಷ್ಯನನ್ನು ಕ್ರಿಯಾಶೀಲರನ್ನಾಗಿ ಮಾಡುವುದರ ಜೊತೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರೀಡೆಗಳು ಸಹಕಾರಿಯಾಗಿವೆ, ಪ್ರಸ್ತುತ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದನ್ನು ಕಂಡು ಕ್ರೀಡೆಗಳ ಮೇಲೆ ಇರುವ ಅಭಿಮಾನ ಎಷ್ಟಿದೆ ಎಂಬುದು ತಿಳಿಯುತ್ತದೆ, ಸಾರ್ವಜನಿಕರಿಗೆ ದಸರಾ ಹಬ್ಬ ಇನ್ನು ಹೆಚ್ಚಿನ ಹುಮ್ಮಸ್ಸು ನೀಡಲೆಂದು ಕ್ರೀಡೆಗಳು ಏರಿ್ಡಸಿದ್ದು ಭಾಹವಹಿಸಿದ ಎಲ್ಲರಿಗೂ ಶುಭಾಶಯ ತಿಳಿಸಿದರು.
ತಾಲೂಕು ದೈಹಿಕ ಪರೀವೀಕ್ಷಕ ಸಿ.ಕೊಟ್ರೇಶ ಮಾತನಾಡಿ ದಸರಾ ಕ್ರೀಡಾಕೂಟದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಯುವಕರು ಪಾಲ್ಗೊಂಡು ಕ್ರೀಡಾ ಉತ್ಸಹ ಇಮ್ಮಡಿಗೊಳಿಸಿದ್ದಿರಿ, ಕ್ರೀಡೆಗಳ ನಿರ್ಣಾಯಕರಾದ ತಾಲೂಕು ದೈಹಿಕ ಶಿಕ್ಷಕರು ಪಾರದರ್ಶಕತೆಯಿಂದ ನಿರ್ಣಯ ಕೈಗೋಲ್ಳುವಂತೆ ಕರೆ ನೀಡಿದರು. ಬಿಇಒ ಎಂ.ಸಿ.ಆನಂದ ಮಾತನಾಡಿದರು.
ವಿಜೇತರು : ಗುಂಪು ಆಟಗಳಾದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ 20ವಾಲಿಬಾಲ್ ತಂಡಗಳು ಪಾಲ್ಗೊಂಡಿದ್ದವು, ಪೈನಲ್ ಪಂದ್ಯದಲ್ಲಿ ನಾರಾಯಣದೇವರಕೆರೆ ತಂಡ ವಿಜೇತವಾಯಿತು. ಕಬಡ್ಡಿಯಲ್ಲಿ ತಿರಂಗಾ ತಂಡ ಹಗರಿಬೊಮ್ಮನಹಳ್ಳಿ ವಿಜೇತರು, ಖೋಖೋ ವಿಬಾಯ್ಸ್ ಹಗರಿಬೊಮ್ಮನಹಳ್ಳಿ ತಂಡ ವಿಜೇತರು, ಅಥ್ಲೆಟಿಕ್ಸ್ 100ಮೀಟರ್ ಓಟದಲ್ಲಿ ಪಟ್ಟಣದ ಟಿ.ಎಸ್.ಕಿರಣ್ ಪ್ರಥಮ ಸ್ಥಾನ ಪಡೆದು ವಿಜಯನಗರದಲ್ಲಿ ನಡೆಯುವ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಥ್ರೋಬಾಲ್, ಬಾಲ್ಬ್ಯಾಡ್ಮಿಂಟನ್, ಪುಟ್ಬಾಲ್, ಅಥ್ಲೆಟಿಕ್ಸ್ ಇತರೆ ಕ್ರೀಡೆಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಕ್ರೀಡಾಕೂಟದಲ್ಲಿ ಪ್ರಭಾರಿ ಇಒ ರಮೇಶ ಮಹಾಲಿಂಗಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂಪಿಎಂ ಮಂಜುನಾಥ, ಕಂದಾಯ ಅಧಿಕಾರಿ ರಾಜೀವ್ಸ್ವಾಮಿ, ತಾಲೂಕಿನ ದೈಹಿಕ ಶಿಕ್ಷಕರುಗಳು ಇದ್ದರು.