ವೈದ್ಯರ ಮನೋಬಲ ಹೆಚ್ಚಿಸಿದ ಕ್ರೀಡಾಕೂಟ
ಮಹಾಲಿಂಗಪುರ 01; ಕಳೆದೆರಡು ವರ್ಷಗಳ ಕರೊನಾ ಸಂಕಷ್ಟ ಸಮಯದಲ್ಲಿ ಸಾರ್ವಜನಿಕರ ಆರೋಗ್ಯ ಕಡೆ ನಿರತರಾಗಿದ್ದ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರು ಕೊಂಚ ಬಿಡುವು ಮಾಡಿಕೊಂಡು ಕ್ರೀಡೆಗಳಲ್ಲಿ ತೊಡಗಿ ಖುಷಿ ಹಂಚಿಕೊಳ್ಳುವ ಮೂಲಕ ಮನೋಬಲವನ್ನೂ ಹೆಚ್ಚಿಸಿಕೊಂಡರು.
ನಿತ್ಯವೂ ಏಕಾಂಗಿಯಾಗಿ ದುಡಿದು ದಣಿದ ಇಡೀ ನಗರದ ವೈದ್ಯರು ಇಂದು ಒಂದೇ ಕಡೆ ಸೇರಿ ಸ್ಥಳೀಯ ಡಾಕ್ಟರ್ ಅಸೋಸಿಯೇಷನ್ ವತಿಯಿಂದ ಸ್ಥಳೀಯ ಜೆ. ಸಿ. ಶಾಲೆಯ ಆವರಣದಲ್ಲಿ ವ್ಹಾಲಿಬಾಲ್, ಥ್ರೋಬಾಲ್ ಕ್ರೀಡಾಕೂಟದಲ್ಲಿ ಭಾಗವಹಿಸಿ ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು
ತಜ್ಞ ವೈದ್ಯರ 5 ಪುರುಷ ತಂಡಗಳು, 2 ಮಹಿಳಾ ತಂಡಗಳು ಸೆಣಸಿದ ಕ್ರೀಡಾ ಕೂಟದಲ್ಲಿ ವ್ಹಾಲಿಬಾಲ್ ನಲ್ಲಿ ಡಾ. ಅಜಿತ್ ಕನಕರೆಡ್ಡಿ ನಾಯಕತ್ವದ ತಂಡ ಚಾಂಪಿಯನ್ ಸ್ಥಾನ, ಡಾ. ವಿ. ಎಸ್. ಮಮದಾಪುರ ತಂಡ ರನ್ನರ್ ಅಪ್ ಹಾಗೂ ಮಹಿಳಾ ವಿಭಾಗದ ಥ್ರೋಬಾಲ್ ನಲ್ಲಿ ಡಾ. ಉಷಾ ಬೆಳಗಲಿಯವರ ತಂಡ ಚಾಂಪಿಯನ್, ಡಾ. ಉಮಾ ಅರಿಶಿಣಗೋಡಿ ತಂಡ ರನ್ನರ್ ಅಪ್ ಸ್ಥಾನ ಗಳಿಸಿದವು.
ಅಸೋಸಿಯೇಷನ್ ಅಧ್ಯಕ್ಷ ಡಾ. ವಿಶ್ವನಾಥ ಗುಂಡಾ, ಡಾ. ಅಶೋಕ ದಿನ್ನಿಮನಿ, ಡಾ. ಎಂ. ಎಸ್. ಚೆನ್ನಾಳ, ಡಾ.ಮಾರುತಿ ಮೇದಾರ, ಡಾ. ಜಬ್ಬಾರ್ ಯಕ್ಸಂಬಿ ಇವರ ನೇತೃತ್ವದಲ್ಲಿ ನಡೆದ ಕ್ರೀಡಾಕೂಟವನ್ನು ಡಾ. ಎ. ಆರ್. ಬೆಳಗಲಿ, ಡಾ. ಬಿ. ಡಿ. ಬಾಳಿಗಿಡದ, ಡಾ. ಬಿ. ಡಿ. ಸೋರಗಾಂವಿ, ಡಾ. ಅಜಿತ್ ಕನಕರೆಡ್ಡಿ,ಡಾ.ವಿ.ಎಸ್.ಮಮದಾಪುರ ಉದ್ಘಾಟಿಸಿದರು. ಡಾ. ವಿಶ್ವನಾಥ ಗುಂಡಾ ಅಧ್ಯಕ್ಷತೆ ವಹಿಸಿದ್ದರು, ಡಾ. ಅಶೋಕ ದಿನ್ನಿಮನಿ ಸ್ವಾಗತಿಸಿ, ನಿರೂಪಿಸಿ, ಡಾ.ಮಾರುತಿ ಮೇದಾರ ವಂದಿಸಿದರು. ಈಶ್ವರ ಮಠಪತಿ, ಶಿಕ್ಷಕರಾದ ನೇಮಗೌಡ, ಬಿರಾದಾರ, ಆರ್. ಎಂ. ಪಾಟೀಲ, ಈಶ್ವರ ಜಿಡ್ಡಿನ ನಿರ್ಣಾಯಕರಾಗಿದ್ದರು.
ಸಮಾಜದ ಆರೋಗ್ಯ, ಸಂತೋಷಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುವ ವೈದ್ಯರಿಗೆ ನವ ಚೈತನ್ಯ, ಮನೋಬಲ ತುಂಬುವಲ್ಲಿ ಯಶಸ್ವಿಯಾದ ಕ್ರೀಡಾಕೂಟಕ್ಕೆ ಸಹಕರಿಸಿದ ಜೆ. ಸಿ. ಶಾಲಾ ಆಡಳಿತ ಮಂಡಳಿ ಹಾಗೂ ಸರ್ವರಿಗೂ ಧನ್ಯವಾದಗಳು
- ಡಾ. ಅಶೋಕ ದಿನ್ನಿಮನಿ,
ಕಾರ್ಯದರ್ಶಿ, ಮಹಾಲಿಂಗಪುರ ಡಾಕ್ಟರ್ ಅಸೋಸಿಯೇಷನ್.