ಬೆಳಗಾವಿ

ಡಾ. ಸಿ. ರಾಮರಾವ್‌ಗೆ ಸ್ಪೋರ್ಟ್‌ ಇಂಡಿಯಾ ಅವಾರ್ಡ್‌

ಡಾ. ಸಿ. ರಾಮರಾವ್‌ಗೆ ಸ್ಪೋರ್ಟ್‌ ಇಂಡಿಯಾ ಅವಾರ್ಡ್‌

ಲೋಕದರ್ಶನ ವರದಿ 

  ಡಾ. ಸಿ. ರಾಮರಾವ್‌ಗೆ ಸ್ಪೋರ್ಟ್‌ ಇಂಡಿಯಾ ಅವಾರ್ಡ್‌  

ಬೆಳಗಾವಿ   11: ಕೆಎಲ್‌ಇ ಸೊಸೈಟಿಯ ಲಿಂಗರಾಜ ಕಾಲೇಜು (ಸ್ವಾಯತ್ತ)ದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶಕ ಡಾ. ಸಿ. ರಾಮರಾವ್** ಅವರಿಗೆ ‘ಎಕ್ಸಲೆನ್ಸ್‌ ಇನ್ ಸ್ಪೋರ್ಟ್ಸ ಲೀಡರಿ​‍್ಶಪ್ ಅಂಡ್ ಅಡ್ಮಿನಿಸ್ಟ್ರೇಷನ್ ಅವಾರ್ಡ’ ನೀಡಿ ಗೌರವಿಸಲಾಯಿತು.  

ನವದೆಹಲಿಯ ಭಾರತ್ ಮಂಟಪಂ, ಪ್ರಗತಿ ಮೈದಾನದಲ್ಲಿ ಆಗಸ್ಟ್‌ 21ರಂದು ನಡೆದ ಸ್ಪೋರ್ಟ್‌ ಇಂಡಿಯಾ  2026 ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕ್ರೀಡಾ ಕ್ಷೇತ್ರದ ಅಭಿವೃದ್ಧಿ, ಉತ್ತೇಜನ ಹಾಗೂ ಕ್ರೀಡಾ ಆಡಳಿತಕ್ಕೆ ಡಾ. ರಾಮರಾವ್ ಅವರು ನೀಡಿರುವ ವಿಶಿಷ್ಟ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.  

‘ವಿಷನ್ 2036: ಪವರಿ​‍್ಯಂಗ್ ಇಂಡಿಯಾಸ್ ರೈಸ್ ಅಸ್ ಎ ಗ್ಲೋಬಲ್ ಸ್ಪೋರ್ಟಿಂಗ್ ಸೂಪರ್‌ಪವರ್‌’ ಆಶಯದೊಂದಿಗೆ ನಡೆದ  ಸ್ಪೋರ್ಟ್‌ ಇಂಡಿಯಾ   ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವ **ಡಾ. ಮನ್ಸುಖ್ ಮಾಂಡವೀಯ** ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.  

ಮಧ್ಯಪ್ರದೇಶದ ಸಹಕಾರ, ಕ್ರೀಡೆ ಮತ್ತು ಯುವ ಕಲ್ಯಾಣ ಸಚಿವ **ವಿಶ್ವಾಸ್ ಕೈಲಾಶ್ ಸಾರಂಗ**, ಹರಿಯಾಣದ ಯುವ ಸಬಲೀಕರಣ, ಉದ್ಯಮಶೀಲತೆ ಮತ್ತು ಕ್ರೀಡಾ ಸಚಿವ **ಗೌರವ್ ಗೌತಮ್** ಹಾಗೂ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ಬದ್ಲಾಪುರ ಕ್ಷೇತ್ರದ ಶಾಸಕ **ರಮೇಶ್ ಚಂದ್ರ ಮಿಶ್ರಾ** ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.  

ಡಾ. ರಾಮರಾವ್ ಅವರಿಗೆ ದೊರೆತ ಈ ಪ್ರತಿಷ್ಠಿತ ಪ್ರಶಸ್ತಿ ಲಿಂಗರಾಜ ಕಾಲೇಜು ಹಾಗೂ ಕೆಎಲ್‌ಇ ಸೊಸೈಟಿಗೆ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆಗೆ ಕೆಎಲ್‌ಇ ಸೊಸೈಟಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ