ಮುಂದಗೋಡ

ಶ್ರೀಕರಿಯಮ್ಮ(ಕಾಳಿಕಾ)ದೇವಿಗೆ ವಿಶೇಷ ಪೂಜೆ

ಶ್ರೀಕರಿಯಮ್ಮ(ಕಾಳಿಕಾ)ದೇವಿಗೆ ವಿಶೇಷ ಪೂಜೆ

ಮುಂಡಗೋಡ 12: ಪ್ರತಿ ವರ್ಷದಂತೆ ಶ್ರಾವಣ ಮಾಸದ ನಿಮಿತ್ತ ಪಟ್ಟಣದ ಕಿಲ್ಲೆ ಓಣಿಯಲ್ಲಿರುವ ಪುರಾತನ ಇತಿಹಾಸ ಪ್ರಸಿದ್ಧ ಶ್ರೀಕರಿಯಮ್ಮ(ಕಾಳಿಕಾ) ದೇವಿಯ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಂಗಳವಾರ ಜರುಗಿದವು. 

ಸೇವಂತಿ, ಮಲ್ಲಿಗೆ ಹೂವು, ಚೆಂಡು ಹೂವು, ತುಳಸಿ ನಾನಾ ತರದ ಹಾರಗಳಿಂದ ಶ್ರೀದೇವಿಯನ್ನು ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಪಂಚಾಮೃತ ಅಭಿಷೇಕ, ವಿಶೇಷ ಹೋಮ ಹವನ ಪೂಜಾ ಕೈಂಕರ್ಯ ಗೈಯ್ಯಲಾಯಿತು. ನಂತರ ಮಧ್ಯಾಹ್ನ ಅನ್ನಸಂತರೆ​‍್ಣ ಕಾರ್ಯಕ್ರಮ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಿ ದರ್ಶನ ಪಡೆದರು. 


ಸುದ್ದಿ ಓದಿ