ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆ
ಶಿಗ್ಗಾವಿ 22: ಪಟ್ಟಣದ ಅಂಚೆ ಕಚೇರಿ ಹತ್ತಿರವಿರುವ ನೇರ ದೃಷ್ಠಿ ಆಂಜನೇಯ ದೇವಸ್ಥಾನದಲ್ಲಿ ಅಯೋದ್ಯೆಯ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ನಡೆದ ಶ್ರೀರಾಮನ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಶ್ರೀ ನೇರ ದೃಷ್ಠಿ ಆಂಜನೇಯನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಪ್ರಸಾದ ಸೇವೆಯನ್ನು ಸಲ್ಲಿಸಲಾಯಿತು.
ಸಮಿತಿ ಸದಸ್ಯರಾದ ಸಿ.ವ್ಹಿ.ಚಿಕ್ಕಮಠ, ಸುಧಾಕರ ದೈವಜ್ಙ, ಚಂದ್ರು ಸೊಲಭಕ್ಕನವರ, ಮಹಾದೇವ ಆಡರಕಟ್ಟಿ, ಜಗದೀಶ ಶೇಜವಾಡಕರ, ಮಂಜುನಾಥ ಶೇಜವಾಡಕರ, ಮಂಜುನಾಥ ಭಜಂತ್ರಿ, ಸಿದ್ದು ಮೆಳ್ಳಳ್ಳಿ, ಓಂಕಾರೇಶ್ವರ ಆಲೂರ, ಪುರಸಭೆ ಸದಸ್ಯ ಸುಭಾಸ ಚವ್ಹಾಣ, ನಂದೀಶ ಬಾಣದ, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.