ಗಣೇಶ ಹಬ್ಬಕ್ಕೆ ವಿಶೇಷ ಬಸ್ ವ್ಯವಸ್ಥೆ
ಬೆಳಗಾವಿ 14: ಗೌರಿ ಗಣೇಶ ಹಬ್ಬದ ಪ್ರಯುಕ್ತ ಬೆಳಗಾವಿ ವಿಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣಿಸಲು ಸೆ.15 ರಿಂದ ಸೆ. 17ರ ವರೆಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರಯಾಣಿಕರಿಗೆ ವಿವಿಧ ಮಾದರಿಯ ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಮತ್ತು ಮಲ್ಟಿ ಎಕ್ಸಲ್ ವೋಲ್ವೊ, ಪ್ರತಿಷ್ಟಿತ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆಯನ್ನು ಮಾಡಲು ಮತ್ತು ಹಬ್ಬದ ನಂತರ ಸೆ. 19ರಿಂದ ಸೆ.24ರ ವರೆಗೆ ಮರಳಿ ಬೆಂಗಳೂರಿಗೆ ಪ್ರಯಾಣಿಸಲು ಬೆಳಗಾವಿಯಿಂದ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆಗೆ ವ್ಯವಸ್ಥೆ ಮಾಡಲಾಗಿದೆ.
ಇ-ಸಾರಿಗೆಗಳಿಗೆ ಇ-ಟಿಕೇಟನ್ನು ಆನ್‌ಲೈನ್ ಹಾಗೂ ಮೊಬೈಲ್ ಮುಖಾಂತರ ಅಥವಾ ಸಂಸ್ಥೆಯಿಂದ ನಿಗದಿಪಡಿಸಿರುವ ಬೆಳಗಾವಿ ವಿವಿಧ ಸ್ಥಳದಲ್ಲಿರುವ ಸಂಸ್ಥೆಯ ಅವತಾರ ಬುಕ್ಕಿಂಗ್ ಏಜಂಟರಲ್ಲಿಯೂ ಮುಂಗಡ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ ಎಂದು ಬೆಳಗಾವಿ ವಿಭಾಗದ ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.