ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿಗಾಗಿ ಬೆಳಗಾವಿಯಲ್ಲಿ ಕರವೇಯಿಂದ ಗಣಪನಿಗೆ ವಿಶೇಷ ಪೂಜೆ
ಬೆಳಗಾವಿ : ರವಿವಾರ ದಿ. 20ರಂದು ನಡೆಯಲಿರುವ ವಿಶ್ವಕಪ್ ಕ್ರಿಕೇಟ್ ಪಂದ್ಯದಲ್ಲಿ ಸತತವಾಗಿ ಎಲ್ಲ ಲೀಗ್ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ಸ್ ಪಂದ್ಯವನ್ನೂ ಗೆಲ್ಲುವ ಮೂಲಕ ಪೈನಲ್ ಗೆ ಲಗ್ಗೆ ಇಟ್ಟಿರುವ ಭಾರತ ಕ್ರಿಕೆಟ್ ತಂಡವು ಅಂತಿಮ ಪೈನಲ್ ಪಂದ್ಯ ಗೆಲುವಿಗಾಗಿ ಕರವೇ ಕಾರ್ಯಕರ್ತರು ಬೆಳಗಾವಿಯ ಶ್ರೀ ಗಣೇಶ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಭಾರತ ಕ್ರಿಕೆಟ್ ತಂಡವು ಭಾನುವಾರ ನಡೆಯಲಿರುವ ಫೈನಲ್ ಪಂದ್ಯವನ್ನು ಗೆಲ್ಲಲು ವಿಶೇಷ ಪೂಜೆ ಸಲ್ಲಿಸಲಾಯಿತು.
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಇರುವ ಶ್ರೀ ಗಣೇಶ ಮಂದಿರದಲ್ಲಿ ಶನಿವಾರ ಸಂಜೆ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ಮುಂದಾಳತ್ವದಲ್ಲಿ ಸೇರಿದ ಕರವೇ ಕಾರ್ಯಕರ್ತರು ಗಣೇಶ್ ಮಂದಿರದಲ್ಲಿ ಭಾರತೀಯ ಕ್ರಿಕೆಟ್ ತಂಡ ನಾಳೆ ದಿ. 20ರಂದು ನಡೆಯುವ ಫೈನಲ್ ಪಂದ್ಯದಲ್ಲೂ ವಿಜಯಶಾಲಿಯಾಗಿ, ವಿಶ್ವಕಪ್ ನಮ್ಮದಾಗಲಿ ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥನೆ ಮಾಡಿದರು.
ಇದೇ ವೇಳೆ ಮಾತನಾಡಿದ ದೀಪಕ ಗುಡಗನಟ್ಟಿ, ಭಾರತದ ಕ್ರಿಕೆಟ್ ತಂಡವು ವಿಶ್ವಕಪ್ ನಲ್ಲಿ ಉತ್ತಮ ಸಾಧನೆ ಮಾಡಿದೆ. ಪ್ರತಿಯೊಬ್ಬ ಆಟಗಾರನ ಶ್ರಮದಿಂದ ತಂಡ ಫೈನಲ್ ತಲುಪಿದೆ. ಎಲ್ಲ ಆಟಗಾರರ ಶ್ರಮಕ್ಕೆ ಫಲ ಸಿಗಲಿದೆ. ವಿಶ್ವಕಪ್ ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಕರವೇ ರಾಜ್ಯಸಂಚಾಲಕ ಮಹಾದೇವ ತಳವಾರ, ಗಣೇಶ್ ರೋಕಡೆ, ಸುರೇಶ ಗವಣ್ಣವರ, ಹೊಳೆಪ್ಪ ಸುಳದಾಳ, ಶಿವಾನಂದ ತಂಬಾಕಿ, ವಿನಾಯಕ ಬೋವಿ, ನಾಗರಾಜ್ ಲಕ್ಕಪ್ಪಗೋಳ, ಗಿರೀಶ್ ಪಾಟೀಲ, ಅಮೀತ್ ಕಿತ್ತೂರು, ಅರ್ಜುನ್ ಕಾಂಬಳೆ, ವಿರೇಶ್ ಹುಣಶೀಮರದ, ಮೊದಲಾದವರು ಉಪಸ್ಥಿತರಿದ್ದರು.