ಮಹಲಿಂಗಪುರ

ಮಹಾಲಿಂಗಪುರ ಪುರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆ

ಮಹಾಲಿಂಗಪುರ ಪುರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆ

ಮಹಾಲಿಂಗಪುರ,23 ;  ಪುರಸಭೆಯಲ್ಲಿ ಸೋಮವಾರ ಮುಂಜಾನೆ 11 ಗಂಟೆಗೆ ನೂತನ ಅಧ್ಯಕ್ಷರಾದ ಯಲ್ಲನ್ನಗೌಡ ಪಾಟೀಲ್ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಜರುಗಿತು. 

ಸನ್ 2023-24, 2024-25 ನೇ ಸಾಲಿನ ಮಹಾಲಿಂಗಪುರ ಪುರಸಭೆಯ 15ನೇ ಹಣಕಾಸು, ಎಸ್ ಎಫ್ ಸಿ ಮುಕ್ತ ನಿಧಿ ಮತ್ತು ಸ್ಥಳೀಯ ನಿಧಿ ಅಡಿಯಲ್ಲಿಯ ಒಟ್ಟು ಹಂತ ಹಂತದ ಮೀಸಲು ಮೊತ್ತ ರೂಂ 2.34 ಕೋಟಿ ಕಾಮಗಾರಿಗಳ ಪೈಕಿ ಅಂದಾಜು ಟೆಂಡರ್ ರಕಂ 1.80 ಕೋಟಿ ಆಗಿದ್ದು ಅಂದಾಜು 50 ಲಕ್ಷ ರೂಗಳ ಉಳಿತಾಯವಾಗಿದೆ. ಇದೆ ಯೋಜನೆ ಅಡಿ ಮುಂದಿನ ಕ್ರಿಯಾ ಯೋಜನೆಯಲ್ಲಿ ಉಳಿತಾಯ ಹಣ ಬಳಸಕ್ಕೊಳ್ಳಲಾಗುವುದು ಎಂದು ಕಿರಿಯ ಅಭಿಯಂತರ ಎಂ ಎಂ ಕಲ್ಬುರ್ಗಿ ಸಭೆಗೆ ತಿಳಿಸಿದರು.. 

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮೋಟಾರ್ ಸಮೇತ ಕೊಳವೆ ಬಾವಿಗೆ ಮೀಸಲು 5.30ಲಕ್ಷ, ಟೆಂಡರ್ 3.39ಲಕ್ಷ, ವಡ್ಡರ ಸ್ಮಶಾನ ಅಭಿವೃದ್ಧಿ ಮೀಸಲು 3.00 ಲಕ್ಷ, ಟೆಂ 1.27ಲಕ್ಷ, ಮುಸ್ಲಿಂ ಕಬ್ರಸ್ತಾನ್ ಗೋಡೆಗೆ ಮೀಸಲು 12 ಲಕ್ಷ, ಟೆಂ 12.70 ಲಕ್ಷ, (ವಾರ್ಡ್‌ 02 ಘಟ್ನಟ್ಟಿ ಪ್ಲಾಟ್ ಸಿಸಿ ರಸ್ತೆಗೆ ಮೀಸಲು 5ಲಕ್ಷ, ವಾರ್ಡ್‌ 4 ಪೂಜಾರಿ ದವಾಖಾನೆ ಹತ್ತಿರ ಸಿಸಿ ಹಾಕಲು ಮೀಸಲು 3 ಲಕ್ಷ, ವಾರ್ಡ್‌ 23 ಕಲ್ಪಡ ತಾಳಿಕೋಟಿ ಮನೆಯಿಂದ ಕೊಳಚಿ ಮನೆ ವರೆಗೆ ಸಿಸಿ ರಸ್ತೆ ಮೀಸಲು 4 ಲಕ್ಷ ಟೆಂ 10.11ಲಕ್ಷ ). 

ವಾರ್ಡ್‌ 7 ನಾಗರಾಳ ಮನೆಯಿಂದ ನುಚ್ಚಿ ಮನೆ ವರೆಗೆ 3.5ಲಕ್ಷ, ವಾರ್ಡ್‌ 8 ರಲ್ಲಿ ಚರಂಡಿ ನಿರ್ಮಾಣ 5 ಲಕ್ಷ, ವಾರ್ಡ್‌ 12 ಸಿಡಿ ಮತ್ತು ಚರಂಡಿಗೆ 1.5 ಲಕ್ಷ, ವಾರ್ಡ್‌ 13 ಸಿಡಿ ನಿರ್ಮಾಣಕ್ಕೆ 75 ಸಾವಿರ, ( ವಾರ್ಡ್‌ 15 ಚರಂಡಿಗೆ ಮೀಸಲು 3 ಲಕ್ಷ, ವಾರ್ಡ್‌ 17 ಚರಂಡಿ ನಿರ್ಮಾಣ ಮೀಸಲು 3ಲಕ್ಷ, ವಾರ್ಡ್‌ 19 ಗಟಾರ್ ಗೆ ಮುಚ್ಚಳ ಮೀಸಲು 3 ಲಕ್ಷ, ವಾರ್ಡ್‌ 21 ರಲ್ಲಿ ಚರಂಡಿಗೆ ಮೀಸಲು 2.5 ಲಕ್ಷ ಒಟ್ಟು ಟೆಂಡರ್ 9.68ಲಕ್ಷ ). 

ವಾರ್ಡ್‌ 18 ರಲ್ಲಿ ಚರಂಡಿ, ಇಂಟರ್ ಲಾಕ್ ಫೆವರ್ ಬ್ಲಾಕ್ ಮೀಸಲು 6ಲಕ್ಷ, ( ವಾರ್ಡ್‌ 12 ರಲ್ಲಿ ಪೆವರ್ ಬ್ಲಾಕ್ ಮೀಸಲು 2 ಲಕ್ಷ, ವಾರ್ಡ್‌ 16 ಪೆವರ್ ಬ್ಲಾಕ್ ಮೀಸಲು 3 ಲಕ್ಷ, ವಾರ್ಡ್‌ 20 ಪೆವರ್ ಬ್ಲಾಕ್ ಮೀಸಲು 3ಲಕ್ಷ, ವಾರ್ಡ್‌ 22 ಸಿಸಿ ಹಾಗೂ ಪೆವರ್ ಬ್ಲಾಕ್ ಮೀಸಲು 3.05 ಲಕ್ಷ, ಟೆಂಡರ್ ಒಟ್ಟು ಮೊತ್ತ 9.23 ಲಕ್ಷ ).(ಉರ್ದು ಶಾಲೆ ಹತ್ತಿರ ಸಿಡಿ ಮೀಸಲು 35 ಸಾವಿರ, ಕೆಂಗೇರಿಮಡ್ಡಿ ಹತ್ತಿರ ಸಿಡಿಗೆ ಕಾಂಕ್ರೀಟ್ ಮೀಸಲು 30 ಸಾವಿರ, ವಾರ್ಡ್‌ 13 ಸಿಡಿ ಮತ್ತು ಚರಂಡಿಗೆ ಮೀಸಲು 1.03 ಲಕ್ಷ, ಟೆಂಡರ್ 1.39 ಲಕ್ಷ) ವಾರ್ಡ್‌ 23 ಕಲ್ಪಡ ಸಿಸಿ ರಸ್ತೆ ಮೀಸಲು 2.81 ಲಕ್ಷ, ವಾರ್ಡ್‌ 11 ಸಿಡಿ ನಿರ್ಮಾಣ ಮೀಸಲು 50 ಸಾವಿರ ಟೆಂಡರ್ 2.59 ಲಕ್ಷ,  

(ಎಸ್ ಎಫ್ ಸಿ ಮುಕ್ತ ನಿಧಿ ವಾರ್ಡ್‌ 13 ರಲ್ಲಿ ಕೆಂಗೇರಿಮಡ್ಡಿ ಚನ್ನದಾಸರ ಗಲ್ಲಿ ಪೈಪ್ ಅಳವಡಿಸಿ ಸಿಡಿ ನಿರ್ಮಾಣ ಮೀಸಲು 3.07 ಲಕ್ಷ ಟೆಂಡರ್ 2.59 ಲಕ್ಷ ), ( ಇತರೆ ಬಡ ಜನತೆಗೆ ಸೋಲಾರ್ ಲೈಟ್ ಮೀಸಲು 2.20ಲಕ್ಷ, ವಾರ್ಡ್‌ 13 ಕೆಂಗೇರಿಮಡ್ಡಿ ಎಲ್ ಇ ಡಿ ಲೈಟ್ ಮೀಸಲು 1.90 ಲಕ್ಷ, ಒಟ್ಟು ಟೆಂಡರ್ 3.71ಲಕ್ಷ, ಸೋಲಾರ್ ಲೈಟಿಂಗ್ ಪೋಲ್ಸ್‌ ಮೀಸಲು 5 ಲಕ್ಷ, ಟೆಂಡರ್ 4.04 ಲಕ್ಷ. 

( ವಾರ್ಡ್‌ 21 ರ ವಿವಿಧೆಡೆ ವಿಧ್ಯುತ್ ಲೈಟ್ ಮೀಸಲು 2 ಲಕ್ಷ, ವಾರ್ಡ್‌ 7, 13,14 ರಲ್ಲಿ ಎಲ್ ಇಡಿ ಮೀಸಲು 3 ಲಕ್ಷ, ವಾರ್ಡ್‌ 05 ಎಲ್ ಇಡಿ ಮೀಸಲು 4.85 ಲಕ್ಷ ಒಟ್ಟು ಟೆಂಡ 8 .34 ಲಕ್ಷ) (ವಾರ್ಡ್‌ 17 ಬುದ್ನಿ ಸಿಡಿ, ಪೆವರ್ ಬ್ಲಾಕ್ ಮೀಸಲು 1.08 ಲಕ್ಷ, ವಾರ್ಡ್‌ 13 ಕೆಂಗೇರಿಮಡ್ಡಿ ಟಿಸಿ ಸುತ್ತ ಪೆವರ್ ಬ್ಲಾಕ್, ಸಿಡಿ ನಿರ್ಮಾಣ ಮತ್ತು ತಂತಿ ಬೇಲಿ ಮೀಸಲು 1.58 ಲಕ್ಷ, ವಾರ್ಡ್‌ 14 ಪೆವರ್ ಬ್ಲಾಕ್ ಮೀಸಲು 1 ಲಕ್ಷ ಟೆಂಡರ್ 3.01 ಲಕ್ಷ),  

(ಪರಿಶಿಷ್ಟ ಜಾತಿ ಸೋಲಾರ್ ಲೈಟ್ ಮೀಸಲು 1.58 ಲಕ್ಷ, ಪಂಗಡ ಮೀಸಲು 67 ಸಾವಿರ, ಇತರೆ ಬಡವರಿಗೆ ಸೋಲಾರ್ ಲೈಟ್ 72 ಸಾವಿರ ಟೆಂಡರ್ 2.64 ಲಕ್ಷ,,) (ವಾರ್ಡ್‌ 6 ಸೌಚಾಲಯ ಮೀಸಲು 4 ಲಕ್ಷ, ವಾರ್ಡ್‌ 18 ಸಿಡಿ, ಪೆವರ್ ಬ್ಲಾಕ್ ಮತ್ತು ಬುದ್ನಿ ಧರ್ಮಶಾಲೆ ಮೇಲೆ ಕೋಬಾ ಮೀಸಲು 4.10 ಲಕ್ಷ ಟೆಂಡರ್ 6.85 ಲಕ್ಷ) ವಾರ್ಡ್‌ 4 ವಿದ್ಯುತ್ ಕಂಬಕ್ಕೆ 35 ಸಾವಿರ, ಟೆಂಡರ್ 29.62 ಸಾವಿರ, ( ವಾರ್ಡ್‌ 04 ರಸ್ತೆ ನಿರ್ಮಾಣ 7 ಲಕ್ಷ, ವಾರ್ಡ್‌ 15 ಸಿಸಿ ರಸ್ತೆ 3 ಲಕ್ಷ, ವಾರ್ಡ್‌ 16 ರಸ್ತೆ ಡಾಂಬರೀಕರಣ ಮತ್ತು ಸಿಡಿ 8 ಲಕ್ಷ, ವಾರ್ಡ್‌ 23 ಕಲ್ಪಡ ಡಾಂಬರೀಕರಣ ಮತ್ತು ಸಿಡಿ ಮೀಸಲು 5.90 ಲಕ್ಷ ಟೆಂಡರ್ 20.18 ಲಕ್ಷ ಹೀಗೆ ಮಹಾಲಿಂಗಪುರ ಪಟ್ಟಣದಲ್ಲಿ ಒಟ್ಟು ಕಾಮಗಾರಿಗಳು ನಡೆಯಲಿವೆ. 

ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶೀಲಾ ರಾಜೇಶ ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲರಜಾಕ ಭಾಗವಾನ, ಸದಸ್ಯರಾದ ಶೇಖರ ಅಂಗಡಿ, ಮುಸ್ತಾಕ್ ಚಿಕ್ಕೋಡಿ, ಬಲವಂತಗೌಡ ಪಾಟೀಲ್, ಚನಬಸು ಯರಗಟ್ಟಿ, ಬಸವರಾಜ ಹಿಟ್ಟಿನಮಠ, ಸಜನಸಾಬ ಪೆಂಡಾರಿ, ಬಸಪ್ಪ ಬುರುಡ, ರಾಜು ಗೌಡಪ್ಪಗೋಳ, ಶ್ರೀಮತಿಯರಾದ ಭಾವನಾ ಪಾಟೀಲ್, ಚಾಂದನಿ ನಾಯಿಕ, ಸವಿತಾ ಹುರಕಡ್ಲಿ, ಸುಜಾತಾ ಮಾಂಗ, ಸರಸ್ವತಿ ರಾಮೋಜಿ ಮತ್ತು ಪುರಸಭೆ ಅಧಿಕಾರಿಗಳಾದ ಎಸ್ ಎನ್ ಪಾಟೀಲ, ಸಿ ಎಸ್ ಮಠಪತಿ, ಎಂ ಎಂ ಮುಗಳಖೋಡ, ಪಿ ಆರ್ ಸೊನ್ನದ, ಎಸ್ ಎಂ ಕಲ್ಬುರ್ಗಿ, ಸಿದ್ದು ಅಳ್ಳಿಮಟ್ಟಿ ಮುಂತಾದವರಿದ್ದರು. 

ನನ್ನ ಅವಧಿಯಲ್ಲಿ ಸರ್ಕಾರದ ಎಷ್ಟೆ ಅನುದಾನ ಬಿಡುಗಡೆಯಾಗಲಿ ಯಾವುದೇ ಪಕ್ಷಪಾತ ಧೋರಣೆ ತೋರದೆ ಎಲ್ಲ ವಾರ್ಡ್‌ ಗಳಿಗೆ ಸಮನಾಗಿ ಹಂಚುತ್ತೇನೆ.ನಮಗೆ ಪಟ್ಟಣದ ಅಭಿವೃದ್ಧಿ ಮುಖ್ಯ. 

ಯಲ್ಲನ್ನಗೌಡ ಪಾಟೀಲ್

ಮಹಾಲಿಂಗಪುರ ಪುರಸಭೆ ಅಧ್ಯಕ್ಷ. 


ಸುದ್ದಿ ಓದಿ