ಮಹಲಿಂಗಪುರ

ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿಶೇಷ ಶಿಬಿರ

ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ವಿಶೇಷ ಶಿಬಿರ

ಮಹಾಲಿಂಗಪುರ 21: ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿಶೇಷ ಶಿಬಿರವನ್ನು  ದತ್ತುಗ್ರಾಮ ಮಧಬಾವಿಯಲ್ಲಿ ನಡೆಸಲಾಯಿತು.  

ಡಾ.ಎ.ಎಮ್‌.ನರೋಡೆ ಶಿಬಿರದ ಐದನೇ ದಿನದಂದು ದೇಶದ ಪ್ರಗತಿಗೆ ಶಾಂತಿ ಸೌಹಾರ್ಧತೆ ಅವಶ್ಯ ಕುರಿತು ವಿಶೇಷ ಉಪನ್ಯಾಸ ನೀಡಿ, ಪ್ರತಿಯೊಬ್ಬರು ನಾವೆಲ್ಲರೂ ಒಂದೆ ಇದು ನಮ್ಮ ದೇಶ, ನಮ್ಮ ಭಾಷೆ, ನಮ್ಮ ಸಂಸ್ಕೃತಿ ಇವೆಲ್ಲವನ್ನು ಉಳಿಸಿ ಬೆಳೆಸೊ ಹೋಣೆ ಎಲ್ಲರ ಮೇಲಿದೆ ಎಂದು ತಿಳಿದು ಸೌಹಾರ್ಧತೆಯಿಂದ ಬದುಕು ನಡೆಸಬೇಕು ಅಂದಾಗ ಮಾತ್ರ ನಮ್ಮ ದೇಶ ಸುಭದ್ರವಾಗಿ ಸಾಗಲು ಸಾಧ್ಯ. ಸ್ನೇಹ ಸೌರ್ಹಾಧತೆ ಬಂದುತ್ವದಿಂದ ವಿಶ್ವದ ಅಭಿವೃದ್ದಿ ಸಾಧ್ಯ ಎಂದರು. 

 ನಂತರ ಮಾತನಾಡಿದ ಕರ್ನಾಟಕ ಜಾನಪದ ಪರಿಷತ ವಲಯ ಅಧ್ಯಕ್ಷ ಬಸವರಾಜ ಮೇಟಿ ಭಾರತದ ಪ್ರಗತಿಗೆ ಸಂಸ್ಕ್ರತಿ ಮತ್ತು ಜಾನಪದ ಸಾಹಿತ್ಯದ  ಉಳಿಯುವಿಕೆ ಬಹಳಷ್ಟು ಅವಶ್ಯಕವಾಗಿದೆ, ನಮ್ಮ ದೇಶದ ಬಹುವಿದದ ಕಲಾವಿದರನ್ನು ಹೊಂದಿದ ದೇಶ, ಎಷ್ಟು ಕಲಾವಿದರು ಬದುಕು ನಡೆಸುತ್ತಾರೋ ಅಷ್ಟು ನಮ್ಮ ಸಂಸ್ಕೃತಿ ಬಳಕೆಗೆ ಬರುತ್ತದೆ, ಆದ್ದರಿಂದ ಕಲೆ ಉಳಿದರೆ ಮಾತ್ರ ಕಲಾವಿದರ ಬದುಕು, ಅವರು ಉಳಿದರೆ ಮಾತ್ರ ನಮ್ಮ ಸಂಸ್ಕೃತಿ ಉಳಿಸಯಲು ಸಾಧ್ಯ, ಅಂದಾಗ ಮಾತ್ರ ನಮ್ಮ ದೇಶ ಪ್ರಗತಿಪಥದತ್ತ ಸಾಗುತ್ತದೆ ಎಂದರು.  

ಸಂದರ್ಭದಲ್ಲಿ ಎನ್‌ಎಸ್‌ಎಸ್ ಸಂಯೋಜನಾ ಅಧಿಕಾರಿಗಳಾದ ಎ.ಎಮ್‌.ಉಗಾರೆ, ವಿ.ಎ.ಅಡಹಳ್ಳಿ  ಎಸ್‌.ಎಸ್‌.ಮುಗಳ್ಯಾಳ, ಆರ್‌.ವಿ.ಚೌಗಲಾ,  ಆಯ್‌.ಎಸ್‌.ಪಾಟೀಲ, ಸಂಗಪ್ಪಾ ವಡರಟ್ಟಿ, ಶಂಕರ ಉರಬಿನ್ನವರ, ಈರಾ​‍್ಪ ಮಾಳಿ, ರವಿಂದ್ರ ಕಲ್ಲೋಳಿ, ಶಿಬಿರಾರ್ಥಿಗಳು, ಹಾಗೂ ಗ್ರಾಮಸ್ತರು, ಮತ್ತು  ಉಪಸ್ಥಿತರಿದ್ದರು. 


ಸುದ್ದಿ ಓದಿ