ನಾಗರಿಕರ ಪಾಲಿಗೆ ಅಕ್ಷರಶಃ ಹುಳಿಯಾದ ಟೊಮ್ಯಾಟೊ : ಬೆಲೆ ಏರಿಕೆಯಿಂದ ಗ್ರಾಹಕನ ಜೇಬಿಗೆ ಕತ್ತರಿ, ಬೆಳೆಗಾರನ ಮೊಗದಲ್ಲಿ ಮಂದಹಾಸ

ನಾಗರಿಕರ ಪಾಲಿಗೆ ಅಕ್ಷರಶಃ ಹುಳಿಯಾದ ಟೊಮ್ಯಾಟೊ : ಬೆಲೆ ಏರಿಕೆಯಿಂದ ಗ್ರಾಹಕನ ಜೇಬಿಗೆ ಕತ್ತರಿ, ಬೆಳೆಗಾರನ ಮೊಗದಲ್ಲಿ ಮಂದಹಾಸ

ಪಾರೇಶ ಭೋಸಲೆ

ಬೆಳಗಾವಿ : ಮಳೆ ಇಲ್ಲ, ಬೆಳೆ ಬೆಳೆದಿಲ್ಲ, ಬೆಳೆ ಬಂದರೂ ಬೆಲೆ ಸಿಗತಾ ಇಲ್ಲ ಹೀಗೆ ಒಂದಿಲ್ಲ ಒಂದು ಸಮಸ್ಯೆಗಳಲ್ಲಿ ಸಿಕ್ಕು ನರಳುತ್ತಿರುವ ರೈತರ ಪಾಲಿಗೆ ಟೊಮ್ಯಾಟೊ ಬೆಳೆಯು ಸಿಹಿಯನ್ನುಂಟು ಮಾಡಿದ್ದು, ಬೆಲೆ ಏರಿಕೆಯಿಂದ ಜನರಿಗೆ ಕಹಿ ಉಂಟು‌ಮಾಡಿದೆ. ಇದರಿಂದ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೊಂಡುಕೊಳ್ಳುವ ಗ್ರಾಹಕರ ಪಾಲಿಕೆ ಟೊಮ್ಯಾಟೊ ಅಕ್ಷರಶಃ ಹುಲಿಯಾಗಿ ಪರಿಣಮಿಸಿದೆ. 


   ಹೌದು ಓದುಗರೇ ಮಳೆ ಇಲ್ಲದೆ ರೈತ ತಲೆ ಮೇಲೆ ಕೈಹೊತ್ತು ಕುಳಿತು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಬಾವಿ, ಕೋಳವೆಬಾವಿಗಳ ಮುಖಾಂತರ ತಮ್ಮ ಜಮೀನುಗಳಲ್ಲಿ ಟೊಮ್ಯಾಟೊ ಬೆಳೆದ ರೈತರ ಮುಖದಲ್ಲಿ ಅಲ್ಪಮಟ್ಟಿಗೆ ಮಂದಹಾಸ ಮೋಡಿದೆ. 

  ಆದರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಏಕಾಏಕಿ ಯಾಗಿ ಟೊಮ್ಯಾಟೊ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಕಂಗಾಲಾಗಿದ್ದಾರೆ. 

   ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮ್ಯಾಟೊಗೆ 100 ರಿಂದ 120 ಬೆಲೆ ನಿಗಧಿಯಾಗಿರುವದಿಂದ ಗ್ರಾಹಕರು ಟೊಮ್ಯಾಟೊ ಕೊಂಡು ಕೊಳ್ಳಲು ಮೇಲೆ ಕೆಳಗೆ ನೋಡುವಂತಾ ಪರಿಸ್ಥಿತಿ ಎದುರಾಗಿದೆ. 

    ಕಳೆದ ಕೆಲವು ತಿಂಗಳುಗಳ ಹಿಂದೆ 10 ರೂಪಾಯಿಗೆ ಇದ್ದ ಟೊಮ್ಯಾಟೊ ಯಾರು ಕೊಂಡಲು ಮುಂದೆ ಬಾರದ ಹಿನ್ನಲೆಯಲ್ಲಿ ಬೆಳೆಗಾರರು ಮತ್ತು ವ್ಯಾಪಾರಸ್ಥರು ನಡುರಸ್ತೆಯಲ್ಲಿ ಟೊಮ್ಯಾಟೊ ಸುರಿದು ಮನೆಗೆ ಹೋಗಿರುವ ಸನ್ನಿವೇಶಗಳನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ. 

   ಸದ್ಯ ಬೆಳಗಾವಿ ಜಿಲ್ಲೆಯ ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿ ಟೊಮ್ಯಾಟೊಗೆ 100ರಿಂದ 120 ಬೆಲೆ ಆಕರಣೆ ಆಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿಳುವಂತಾಗಿದೆ. 

   ರೈತರು ಹಾಗೂ ವ್ಯಾಪಾರಸ್ಥರ ಪ್ರಕಾರ ಟೊಮ್ಯಾಟೊ ಬೆಳೆ ಕಡಿಮೆ ಪ್ರಮಾಣದಲ್ಲಿ ಇರುವದರಿಂದ ಮಾರುಕಟ್ಟೆಗಳಿಗೆ ಟೊಮ್ಯಾಟೊ ಕಡಿಮೆ ಪ್ರಮಾಣದಲ್ಲಿ ಬರತಾ ಇರುವದರಿಂದ ಬೆಲೆ ದುಪ್ಪಟ್ಟು ಆಗಿದೆ ಎನ್ನುವ ಮಾತುಗಳು ಕೇಳಿಬರತೊಡಗಿವೆ.

ಸುದ್ದಿ ಓದಿ