ಬೆಳಗಾವಿ

ಕರ್ತವ್ಯದಲ್ಲಿದ್ದ ಯೋಧ ಹೃದಯಾಘಾತದಿಂದ ನಿಧನ

ಕರ್ತವ್ಯದಲ್ಲಿದ್ದ ಯೋಧ ಹೃದಯಾಘಾತದಿಂದ ನಿಧನ

ಲೋಕದರ್ಶನ ವರದಿ 

ಯಮಕನ ಮರಡಿ 01 : ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ವೀರಯೋಧ ರಮೇಶ ಪರಗೌಡ ಪಾಟೀಲ (28) ಅವರು ರಾಜಸ್ಥಾನದಲ್ಲಿ ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದರು.  

ಅವರ ಪಾರ್ಥಿವ ಶರೀರ ಅ.1ರಂದು ಸ್ವಗ್ರಾಮ ಕುಂದ್ರಿಗೆ ತಲುಪುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ದುಃಖಭರಿತರಾಗಿ ಅಂತಿಮ ದರ್ಶನ ಪಡೆದರು. ಹುಕ್ಕೇರಿ ತಾಲೂಕಿನ ದಂಡಾಧಿಕಾರಿ, ಶಾಸಕರು, ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ಪ್ರಮುಖರು ಮತ್ತು ಶಾಲಾ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಅಂತಿಮ ಯಾತ್ರೆ ನೆರವೇರಿಸಿದರು. ಸ್ವಗ್ರಾಮದ ಪಾಟೀಲ ಅವರ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. 


ಸುದ್ದಿ ಓದಿ