ಮಾನವರೆಲ್ಲರೂ ಒಂದಾದಾಗ ಮಾತ್ರ ಸಮಾಜ ದೇಶ ಉದ್ಧಾರವಾಗುತ್ತದೆ: ಮಹಾವೀರ ಜೀರಗ್ಯಾಳ

ಮಾನವರೆಲ್ಲರೂ ಒಂದಾದಾಗ ಮಾತ್ರ ಸಮಾಜ ದೇಶ ಉದ್ಧಾರವಾಗುತ್ತದೆ: ಮಹಾವೀರ ಜೀರಗ್ಯಾಳ

ಬೆಳಗಾವಿ,29:ಮಾನವರೆಲ್ಲರೂ ಒಂದಾದಾಗ ಮಾತ್ರ ಸಮಾಜ ಮತ್ತು ದೇಶದ ಉದ್ಧಾರವಾಗುತ್ತದೆ. ದೇಶದ ಉದ್ದಾರ ಜಗತ್ತಿನ ಸಾಮರಸ್ಯದ ಬೆಸುಗೆಯಾಗಬಲ್ಲದು ಎಂದು ತಾಲೂಕಾ ದೈಹಿಕ ಪರೀವೀಕ್ಷಣಾಧಿಕಾರಿ ಮಹಾವೀರ ಜೀರಗ್ಯಾಳ ಹೇಳಿದರು. 

ಇಂದು ಸರಕಾರಿ ಪ್ರೌಢಶಾಲೆ, ಬಸ್ತವಾಡಲ್ಲಿ ನಡೆದ ನಾವು ಮನುಜರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ಎಲ್ಲ ಜನಾಂಗಗಳು ಯಾವುದೇ ತಾರತಮ್ಯ ಮಾಡದೇ  ನಿಜವಾಗಿಯೂ ನಾವೆಲ್ಲರೂ ಒಂದು ಎಂದು ನಡೆದರೆ ಮಾತ್ರ ದೇಶದ ಐಕ್ಯತೆ ಹಾಗೂ ಪ್ರಗತಿಗೆ ದಾರಿಯಾಗುವದು. ಸಮಾಜಮುಖಿ ಕಾಳಜಿಯೇ  ಮನುಷ್ಯನ ನಿಜವಾದ ಲಕ್ಷಣ. , ವಿದ್ಯಾರ್ಥಿಗಳೇ ಭವ್ಯ ಭಾರತದ ಹೆಬ್ಬಾಗಿಲುಗಳು, ಸರಕಾರದ ಇಂತಹ ಕಾರ್ಯಕ್ರಮಗಳು ನಾಡಿನಲ್ಲಿ ಸಮತೆಯ ಸಂದೇಶ ಸಾರುವುದರಲ್ಲಿ ಸಂದೇಹವಿಲ್ಲ ನುಡಿದರು.  

ಈ ಸಂದರ್ಭದಲ್ಲಿ ಎಸ್ ಎಸ್ ಸಂಕ್ರಟ್ಟಿ, ಮಂಗಲ ಕಾಂಬಳೆ, ಜಿ ಎಸ್ ಪಾಟೀಲ,ದೀಪಾ ಹೊಸಮನಿ, ಗಾಯತ್ರಿ ಹೋಳ್ಕರ, ಶಾಂಭವಿ ಹೋಳ್ಕರ , ಮಖ್ಯ ಶಿಕ್ಷಕ ಸುಖದೇವ  ಕಾಂಬಳೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಕಾರ್ಯಕ್ರಮವನ್ನು ಅಮರ ಬಾಬಣ್ಣವರ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ