ರಾಣೆಬೆನ್ನೂರ

ಸಮಾಜವು ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು - ಕೆ.ಜಿ.ಮೋಹನ್

ಸಮಾಜವು ವಿಕಲಚೇತನರಿಗೆ ಅನುಕಂಪಕ್ಕಿಂತ ಅವಕಾಶ ನೀಡಬೇಕು - ಕೆ.ಜಿ.ಮೋಹನ್

ರಾಣೆಬೆನ್ನೂರು 28:  ಅಂಗವೈಕಲ್ಯತೆ ಪಾಪ ಅಥವಾ ಪಾಪ ಅಲ್ಲ ಎಲ್ಲವೂ ದೈವವಿದಿ ಲಿಖಿತ. ಇವೆಲ್ಲವೂ ವೈಜ್ಞಾನಿಕವಾಗಿ ಜೈವಿಕ ಏರುಪೇರು ಕಾರಣ ಅಷ್ಟೇ ಎಂದು ಸ್ನೇಹ ದೀಪ ಅಂಧ ಅಂಗವಿಕಲರ ಸಂಸ್ಥೆಯ ಧರ್ಮದರ್ಶಿ ಕೆ.ಜಿ ಮೋಹನ್ ಹೇಳಿದರು. ಅವರು ಶಾಲಾ ಸಭಾಂಗಣದಲ್ಲಿ ನಡೆದ 10ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಕಲಚೇತನರ ಸಮಸ್ಯೆಗಳು ಹತ್ತಾರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರು ಕೆಲವೇ ಕೆಲವರು. ಹೀಗಾಗಿ ತಮ್ಮ ಸಂಸ್ಥೆ ಅಂಗವಿಕಲಚೇತನರ ಸೇವೆಗಾಗಿ ಪ್ರಾರಂಭಿಸಿದ್ದು, ಎಲ್ಲರ ಸಹಕಾರದೊಂದಿಗೆ ಹತ್ತು ವರ್ಷ ಕಳೆಯುತ್ತಿರುವುದು ತಮಗೆ  ಅತ್ಯಂತ ಸಂತೋಷ ನೀಡಿದೆ   ಎಂದರು.  

 ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕ  ಗಳಿಸಿ ಶೈಕ್ಷಣಿಕ ಸಾಧನೆ ಮೆರೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ ಅವರು ಬಹುಮಾನ ವಿತರಿಸಿ ಗೌರವಿಸಲಾಯಿತು. ಸಂಸ್ಥೆಯ ಇನ್ನೋರ್ವ  ಧರ್ಮದರ್ಶಿ ಡಾ. ಪಾಲ್ ಮುದ್ದಾ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ನೂರಾರು ಮಕ್ಕಳಿಗೆ ಸಮವಸ್ತ್ರ ಹೊಂದಿರುವ ಟೀ ಶರ್ಟ್‌ ಗಳನ್ನು ವಿತರಿಸಲಾಯಿತು.  ಮುಖ್ಯ ಅತಿಥಿಗಳಾಗಿ ಯೂನಿಸಮ್ ಅಗ್ರಿಟೆಕ್ ಲಿ. ವ್ಯವಸ್ಥಾಪಕ ಹೆಚ್‌. ಎನ್‌. ದೇವಕುಮಾರ, ಬಿಇಒ ಶ್ಯಾಮ ಸುಂದರ ಅಡಿಗ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಮಂಜು ನಾಯಕ, ವರ್ತಕ ಜಿ.ಜಿ. ಹೊಟ್ಟಿ ಗೌಡ್ರು, ವಸಂತ ಹುಲ್ಲತ್ತಿ, ಸುಮಾ ಉಪ್ಪಿನ, ಸೇರಿದಂತೆ ಸಂಸ್ಥೆಯ ಇತರ ಧರ್ಮದರ್ಶಿಗಳು, ನೂರಾರು ವಿದ್ಯಾರ್ಥಿಗಳು ನಗರದ ಗಣ್ಯರನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ