10 ದಿನಗಳಲ್ಲಿ ಕುಸಿತ ಕಂಡ ರಸ್ತೆ ಮೇಲಿನ ಸ್ಲ್ಯಾಬ್ : ಕಳಪೆ ಕಾಮಗಾರಿ ಯಾರು ಹೊಣೆ
ಸಂಕೇಶ್ವರ : ಕಳೆದ 10 ದಿನಗಳ ಹಿಂದೆ ರಸ್ತೆ ಮೇಲಿನ ಚರಂಡಿಗೆ ಹಾಕಲಾಗಿದ್ದ ಸ್ಲ್ಯಾಬ್ ಕುಸಿತ ಕಂಡಿದೆ. ಈ ಕಳಪೆ ಕಾಮಗಾರಿಗೆ ಹೊಣೆ ಯಾರು ಎಂಬ ಪ್ರಶ್ನೆಯನ್ನು ಪಟ್ಟಣದ ನಾಗರಿಕರು ಕೇಳುವಂತಾಗಿದೆ.

ಸಂಕೇಶ್ವರ ಪಟ್ಟಣದ ಪ್ರಮುಖ ರಸ್ತೆಯಾದ ಹಳೆ ಪಿಬಿ ರಸ್ತೆಯಿಂದ ಕಬ್ಬೂರಿ ಚಾಳಗೆ ಸಂಪರ್ಕ ಜೊಡಿಸುವ ರಸ್ತೆಯ ಮೇಲಿನ ಚರಂಡಿಯ ಮೇಲೆ ಹಾಕಲಾದ ಸ್ಲ್ಯಾಬ್ ಕಳೆದ 10 ದಿನಗಳ ಹಿಂದಷ್ಟೇ ಹಾಕಲಾಗಿತ್ತು.
ಆದರೆ ಈ ಸ್ಲ್ಯಾಬ್ 10 ದಿನಗಳಲ್ಲಿ ಕುಸಿತ ಕಂಡಿದೆ. ಈ ಕಳಪೆ ಕಾಮಗಾರಿಗೆ ಖರ್ಚು ಮಾಡಲಾದ ದುಡ್ಡು ರಸ್ತೆ ಮೇಲೆ ಸುರಿದಂತಾಗಿದ್ದು, ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ವೆ ಇದಕ್ಕೆ ಕಾರಣ ಎನ್ನಲಾಗಿದೆ.