ಗೆಲ್ಲಲು ಕೌಶಲ್ಯಗಳು ಬೇಕು : ಶಿವಲಿಂಗ ಸಿದ್ನಾಳ
ಮಹಾಲಿಂಗಪುರ 03: ಪರೀಕ್ಷೆಗಳಲ್ಲಿ ಎಲ್ಲರಿಗೂ ಒಂದೇ ಪ್ರಶ್ನೆ ಪತ್ರಿಕೆ ಇರುತ್ತದೆ ಆದರೆ ಜೀವನದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಒಂದೇ ಆಗಿರುವುದಿಲ್ಲ ಆ ಪರೀಕ್ಷೆಯಲ್ಲಿ ಗೆಲ್ಲುವ ಕೌಶಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಪ್ರೊ.ಶಿವಲಿಂಗ ಸಿದ್ನಾಳ ಹೇಳಿದರು.
ಸ್ಥಳೀಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ದೀಪದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆತ್ತವರ ಕಷ್ಟ ಅರಿತು ಏಕಾಗ್ರತೆಯಿಂದ ಓದಿ ಸಾಧನೆ ಮಾಡಿ ಎಂದರು.
10 ನೇ ತರಗತಿಯ ಪ್ರತಿ ವಿದ್ಯಾರ್ಥಿಯೂ ತನ್ನ ಜೀವನದ ಗುರಿಯನ್ನು ಹೇಳಿ ಮೇಣದ ಬತ್ತಿ ಬೆಳಗಿಸಿ ಪ್ರತಿಜ್ಞೆ ಮಾಡಿ ಗುರು ಹಿರಿಯರ ಆಶೀರ್ವಾದ ಕೋರಿದ್ದು ವಿಶೇಷವೆನಿಸಿತು. ನಂತರ 9 ನೇ ತರಗತಿ ಮಕ್ಕಳಿಗೆ ದೀಪದಾನ ಮಾಡಿದರು.
ಸಂಸ್ಥೆಯ ನಿರ್ದೇಶಕರಾದ ರಾಜು ಘಟ್ಟೆಪ್ಪನವರ, ಈಶ್ವರ ಮುರಗೋಡ, ಪತ್ರಕರ್ತ ನಾರನಗೌಡ ಉತ್ತಂಗಿ, ಮುಖ್ಯ ಶಿಕ್ಷಕ ಎಸ್.ಜಿ.ಕೌಜಲಗಿ, ಶಿಕ್ಷಕಿಯರಾದ ಸುಧಾ ಕೊಂಗವಾಡ, ಸುಜಾತ ಹೊಸಕೇರಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಗದೀಶ ನಾಗನೂರ, ಪಲ್ಲವಿ ಸಿಂಗಾಡಿ ಮಾತನಾಡಿದರು, 10 ನೇ ತರಗತಿಯ ಶ್ರೇಯಸ್ ಸಾವಳಗಿಮಠ, ಆರ್ಯನ್ ಶುಕ್ಲಾ , ಸಾಧಿಕ್ ಬರಗಿ, ಅಂಕಿತಾ ರಾಥೋಡ, ಸವಿತಾ ಹುದ್ದಾರ, ತೈಬಾ ನಂದಗಡ್ಕರ್, ಸುಪ್ರೀತ್ ಕೋಳಿ ಇತರರು ಅನಿಸಿಕೆ ಹಂಚಿಕೊಂಡರು.
ಸಂಸ್ಥೆಯ ಅಧ್ಯಕ್ಷ ಶಾಂತಿಲಾಲ ಪಟೇಲ ಉದ್ಘಾಟಿಸಿದರು, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎಸ್.ಎಸ್.ಈಶ್ವರ್ಪಗೋಳ, ಶಿಕ್ಷಕ ಎಸ್.ಪಿ. ಸುತಾರ ಇದ್ದರು. ನಂದಿನಿ ರಂಜನಗಿ ಮತ್ತು ಸಿಂಚನಾ ಬಾಗೇವಾಡಿ ಗಣ್ಯರನ್ನು ಆಹ್ವಾನಿಸಿ, ಸಾಕ್ಷಿ ಗೊಂದಿ ಮತ್ತು ಮಹಾಲಕ್ಷ್ಮೀ ಗುಳದಳ್ಳಿ ಪ್ರಾರ್ಥಿಸಿ, ವರ್ಷಿತಾ ಉತ್ತಂಗಿ ಸ್ವಾಗತಿಸಿ, ರೆಹನುಮಾ ಮುಜಾವರ ಪ್ರಾಸ್ತಾವಿಕ ಮಾತುಗಳನ್ನಾಡಿ, ನೀಲಕಂಠ ಪುಳ್ಯಾಗೋಳ, ವಿಶಾಲ ಮುರಗೋಡ, ಸಿದ್ಧಾರೂಢ ಪುಳ್ಯಾಗೋಳ, ಉದಯ ಮುಂಡಾಸ, ಸುಮಯ್ಯಾ ಕಡಕೋಳ, ನೆಹರಾ ಮಾಹುತ್, ಭೂಮಿ ಕಾಕಡೆ, ಅರ್ಫಾ ಖಲೀಫಾ, ಅನುಶ್ರಿ ಹುದ್ದಾರ, ಶ್ರೇಯಾ ಸಗರಿ, ಲಕ್ಷ್ಮಿ ಅಮಾತಿ, ವೇದಿಕಾ ಜಾನಕೂನವರ ನಿರೂಪಿಸಿ, ಸೃಷ್ಠಿ ಮುಗಳಖೋಡ, ಅಲ್ಫಿಯಾ ಮರೇಗುದ್ದಿ ವಂದಿಸಿದರು.