ಬಳ್ಳಾರಿ

ಜ್ಞಾನದ ಜತೆ ಕೌಶಲ್ಯವೂ ಮುಖ್ಯ: ಪೂಜಾರ

ಜ್ಞಾನದ ಜತೆ ಕೌಶಲ್ಯವೂ ಮುಖ್ಯ: ಪೂಜಾರ

ಬಳ್ಳಾರಿ 07: ವಿದ್ಯಾರ್ಥಿಗಳು ಜ್ಞಾನಾರ್ಜನೆ ಜತೆಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಂಡಾಗ ಮಾತ್ರ ಹೆಚ್ಚಿನು ಉದ್ಯೋಗಾವಕಾಶಗಳು ಅರಸಿ ಬರುತ್ತವೆ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಕನಕಪ್ಪ ಪೂಜಾರ ಹೇಳಿದರು. 

ಸ್ಥಳೀಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಅಧ್ಯಯನ ವಿಭಾಗದಿಂದ ಗುರುವಾರ ಏರಿ​‍್ಡಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಸಮಾರಂಭ ಉದ್ಘಾಟಿಸಿ ಮಾತನಾಡಿದರು ವಿದ್ಯಾರ್ಥಿಗಳು ಉತ್ತಮ ಕೌಶಲ್ಯ ಮತ್ತು ವೃತ್ತಿಪರತೆ  ರೂಢಿಸಿಕೊಳ್ಳಬೇಕು ಎಂದು ಹೇಳಿದರು.  

ವಿಶ್ವವಿದ್ಯಾಲಯದ ಕುಲಪತಿ ಡಾ.ಸಾಹೇಬ್ ಅಲಿ ಎಚ್‌. ನಿರಗುಡಿ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸುವ ಗುಣವಿರಬೇಕು. ವಿದ್ಯಾರ್ಥಿಗಳ ಉತ್ತಮ ನಡೆ-ನುಡಿ ಹಾಗೂ ಸಾಧನೆಯೇ ಅವರು ತಮ್ಮ ಶಿಕ್ಷಕರಿಗೆ ನೀಡುವ ಕೊಡುಗೆ ಎಂದು ಅಭಿಪ್ರಾಯಪಟ್ಟರು. 

ಸನ್ಮಾನ: ರಾ​‍್ಯಂಕ್ ಪಡೆದ ವಿದ್ಯಾರ್ಥಿ ಎಂ.ಕಾರ್ತಿಕ್ ಹಾಗೂ ನೂರೆ ಐನ್ ಅವರಬ್ಬಯ ಸನ್ಮಾನಿಸಲಾಯಿತು. 

ಪ್ರಾಧ್ಯಾಪಕ ಡಾ.ಪ್ರಶಾಂತ್ ಕುಮಾರ್, ಡಾ.ಗೋಪಾಲ್, ಡಾ.ಸುಷ್ಮಾ ಜೋಗನ್ ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ