ಶ್ರೀ ದುರದುಂಡೀಶ್ವರ ಸೌಹಾರ್ದ ಅಧ್ಯಕ್ಷರಾಗಿ ಸಂಸುದ್ದಿ, ಉಪಾಧ್ಯಕ್ಷರಾಗಿ ಕಣಗಲಿ ಅವಿರೋಧ ಆಯ್ಕೆ
ಸಂಕೇಶ್ವರ : ನಗರದ ಶ್ರೀ ದುರದುಂಡೀಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತನ ನೂತನ ಅಧ್ಯಕ್ಷರಾಗಿ ಶಿವಾನಂದ ಸಂಸುದ್ದಿ ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ ಕಣಗಲಿ ಇವರುಗಳು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಸಂಸ್ಥೆಯಲ್ಲಿ ಹಿರಿಯ ನಿರ್ದೇಶಕ ಅಪ್ಪಾಸಾಹೇಬ (ಶಿವಪುತ್ರ) ಶಿರಕೋಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸನ್ 2024-2029ರ ಅವಧಿಗಾಗಿ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಯು ನಡೆಯಿತು.
ಸಭೆಯ ಅಧ್ಯಕ್ಷ ಶಿವಪುತ್ರ ಶಿರಕೋಳಿ ಇವರ ಅಧ್ಯಕ್ಷತೆಯಲ್ಲಿ ಶಿವಾನಂದ ಗುರುಪಾದಪ್ಪಾ ಸಂಸುದ್ದಿ ಇವರು ನೂತನ ಅಧ್ಯಕ್ಷರಾಗಿ ಹಾಗೂ ಪ್ರಕಾಶ ಗಂಗಾಧರ ಕಣಗಲಿ ಇವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಇದೇ ವೇಳೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರನ್ನು ಸಂಸ್ಥೆಯ ಪರವಾಗಿ ಹೂಗುಚ್ವ ನೀಡಿ ಸತ್ಕರಿಸಲಾಯಿತು.
ಸಭೆಯಲ್ಲಿ ಸ್ವಾಗತ ಹಾಗೂ ವಂದನಾರ್ಪಣೆಯನ್ನು ಸಹಕಾರಿಯ ಮುಖ್ಯ ಕಾರ್ಯ ನಿರ್ವಾಹಕ ಅಮರ ಜರಳಿ ಅವರು ನೇರವೇರಿಸಿದರು.
ಅದೇ ರೀತಿಯಾಗಿ ಶ್ರೀ ದುರದುಂಡೀಶ್ವರ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ನಿರ್ದೇಶಕ ಮಂಡಳಿ ಸದಸ್ಯರುಗಳಾಗಿ ಅಣ್ಣಾಸಾಹೇಬ ಬಾ. ಪರ್ವತರಾವ, ಶಿವಪುತ್ರ ಶಂ ಶಿರಕೋಳಿ, ದುಂಡಪ್ಪಾ ಗು. ಗಾಡವಿ, ದುಂಡಪ್ಪಾ ಶಿ ಸುಣಧಾಳಿ, ಬಾಬುರಾವ ಭೀ ಹಾಲಗಡಗಿ, ರಾಮು ಸಿ ಆಡಿ, ಜಯಕುಮಾರ ಶೆ ಪಾಟೀಲ, ಮಾರುತಿ ಬೀ ಹೆಗಡೆ, ಶಂಕರ ನಿ ಕೊಳ್ಳಿ, ಶ್ರೀಮತಿ ಸುಲೋಚನಾ ದುಂ ಸುಣದಾಳಿ, ಶ್ರೀಮತಿ ಶೈಲಾ ಅ ಶಿರಕೋಳಿ, ಶ್ರೀಮತಿ ಲಲೀನಾ ಶಂ. ರಾಯಣ್ಣವರ, ಸಂಜೀವ ಮಾ ಘಸ್ತಿ ಇವರುಗಳು ಆಯ್ಕೆಯಾದರು.