ಪ್ರಜಾಧ್ವನಿ ಕಾರ್ಯಕ್ರಮ: ಮಾಜಿ ಸಚಿವ ನಾಡಗೌಡರಿಂದ ಸ್ಥಳ ಪರೀಶಿಲನೆ
ಮುದ್ದೇಬಿಹಾಳ: ಇದೇ ದಿ, 21 ಮಂಗಳವಾರ ದಂದು ಪಟ್ಟಣದ ವಿಬಿಸಿ ಹೈಸ್ಕೂಲ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಾರ್ಥವಾಗಿ ಪ್ರಥಮ ಹಂತದ ಪ್ರಜಾಧ್ವನಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರು ಶನಿವಾರ ಬೆಳಿಗ್ಗೆ ಪಕ್ಷದ ಹಲವಾರು ಮುಖಂಡರು ಹಾಗೂ ಅಪಾರ ಅಭಿಮಾನಗಳೊಂದಿಗೆ ವೇದಿಕೆ ಸಿದ್ಧಪಡಿಸುತ್ತಿರುವ ಸ್ಥಳ ಪರೀಶಿಲನೆ ನಡೆಸಿದರು. ಈ ವೇಳೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗುರುನಗೌಡ ತಾತರಡ್ಡಿ, ಸಂಗಮೇಶ ಬಿರಾದಾರ, ಶರಣು ಸಜ್ಜನ, ಭರತ್ ಭೋಸಲೆ, ಪುರಸಭೆ ಸದಸ್ಯರಾದ ಅಲ್ಲಾಭಕ್ಷ ಢವಳಗಿ, ಮೈಬೂಬ ಗೊಳಸಂಗಿ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗ್ , ರಾಜು ವಡ್ಡರ, ಯುವ ಮುಖಂಡ ಕಾಮರಾಜ ಬಿರಾದಾರ, ಗೋಲಿ ಮಡಿವಾಳರ, ಸುರೇಶ ಪಾಟೀಲ, ರಾಜು ಕರಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು