ಕತ್ತು ಹಿಸುಕಿ ಪತ್ನಿಯನ್ನೆ ಕೊಂದ ಪಾಪಿ ಪತಿ
ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 27: ತಾಲೂಕಿನ ಬ್ಯಾಸಿಗದೇರಿ ಗ್ರಾಮದ ಎಲಿಗಾರ ರವಿಕುಮಾರ ಎಂಬಾತ ತನ್ನ ಪತ್ನಿ ದೀಪಾಳ ಶೀಲವನ್ನು ಶಂಕಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಘಟನೆಯ ವಿವಿರ: ಹಂಪಿಕಟ್ಟೆ ಗ್ರಾಮದ ನಿವಾಸಿ ದೀಪಾಳನ್ನು ಕಳೆದ 2ವರ್ಷಗಳ ಹಿಂದೆ ಬ್ಯಾಸಿಗದೇರಿಯ ಎಲಿಗಾರ ರವಿ ಎಂಬುವವರ ಜೊತೆ ವಿವಾಹವಾಗಿದ್ದು, ಪತಿ ಜೊತೆ ಪತ್ನಿ ದೀಪಾ ಬ್ಯಾಸಿಗದೇರಿಯಲ್ಲಿಯೇ ವಾಸವಾಗಿದ್ದರು, ಕಳೆದ ಕೆಲ ತಿಂಗಳಿಂದ ಪತ್ನಿಯು ಅನೈತಿಕ ಸಂಬಂಧ ಇದೆ ಎಂದು ಸತಿಪತಿಯರಲ್ಲಿ ಕೌಟುಂಬಿಕ ಕಲಹ ಮೂಡಿತ್ತು, ಸೋಮವಾರ ರಾತ್ರಿ ಪತಿ ರವಿಕುಮಾರ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದು , ಮೃತ ದೇಹವನ್ನು ಬೈಕ್ ಮೂಲಕ ನಂದೀಪುರ ಗ್ರಾಮಕ್ಕೆ ಸಾಗಿಸಿ ಸಂಭಂಧಿಕರ ಮನೆ ಮುಂದೆ ದೀಪಾಳ ಶವವನ್ನು ಎಸೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣಕ್ಕೆ ಸಂಭಂಧಿಸಿದಂತೆ ಪತಿ ರವಿ ಹಾಗೂ ಆತನ ಪೋಷಕರ ವಿರುಧ್ಧ ಹಗರಿಬೊಮ್ಮನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಪ್ರಕರಣದ ತನಿಖೆಯನ್ನು ವೃತ್ತ ನೀರೀಕ್ಷಕರಾದ ಮಂಜಣ್ಣ ವಹಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಹರೀಷ್ ರೆಡ್ಡಿ , ಪಿಎಸ್ಐ ಸರಳ ಭೇಟಿ ನೀಡಿದ್ದಾರೆ.