ಹೆತ್ತ ಪುತ್ರನ ಸುಪಾರಿ ನೀಡಿ ಹತ್ಯೆ ಮಾಡಿಸಿದ ಪಾಪಿ ತಂದೆ : ರಕ್ತದಲ್ಲಿ ಬಿದ್ದಿದ್ದ ವೈದ್ಯರ ಕಾಗದದಿಂದ ಹತ್ತೆಯ ಪತ್ತೆ : 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಮುರಗೋಡ ಪೊಲೀಸರು

ಹೆತ್ತ ಪುತ್ರನ ಸುಪಾರಿ ನೀಡಿ ಹತ್ಯೆ ಮಾಡಿಸಿದ ಪಾಪಿ ತಂದೆ : ರಕ್ತದಲ್ಲಿ ಬಿದ್ದಿದ್ದ ವೈದ್ಯರ ಕಾಗದದಿಂದ ಹತ್ತೆಯ ಪತ್ತೆ : 24 ಗಂಟೆಯಲ್ಲಿ ಪ್ರಕರಣ ಭೇದಿಸಿದ ಮುರಗೋಡ ಪೊಲೀಸರು

ಬೆಳಗಾವಿ : ತಾನು ಜನ್ಮ ನೀಡಿದ್ದ ಮದ್ಯ ವೇಸನಿ ಪುತ್ರನನ್ನೆ ಪಾಪಿ ಅಪ್ಪನೋರ್ವ ಸುಪಾರಿ ಕೊಡಿಸಿ ಕೊಲೆ ಮಾಡಿಸಿರುವ ಘಟನೆ ವರದಿಯಾಗಿದ್ದು, ಈ ಹತ್ಯೆಯ ಜಾಡು ಹೀಡಿದ ಜಿಲ್ಲೆಯ ಮುರಗೋಡ ಪೊಲೀಸರು ಹತ್ಯೆಯಾದ 24 ಗಂಟೆಯಲ್ಲಿ ಪ್ರಕರಣ ಭೇದಿಸಿ ಇಬ್ಬರು ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತನನ್ನು ಈರುಳ್ಳಿ ವ್ಯಾಪಾರಿ ಸಂಗಮೇಶ್ ಮಾರುತಿ ತಿಗಡಿ (35) ಎಂದು ಆತನ ಸಹೋದರ ಗುರುತು ಪತ್ತೆ ಮಾಡಿದ್ದಾರೆ. ತಾನು ಜನ್ಮ ನೀಡಿದ ಪುತ್ರ ದಿನನಿತ್ಯ ಕುಡಿದು ಬಂದು ಮನೆಯಲ್ಲಿ ಜಗಳವಾಡುತ್ತಾ ಹಣ ಮಾತ್ರವಲ್ಲದೆ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತಿದ್ದ ಎಂಬ ಕಾರಣದಿಂದ ಸುಪಾರಿ ನೀಡಿ ಪುತ್ರನ ಗೆಳೆಯರಿಮಂಲೇ ಹತ್ಯೆ ಮಾಡಿಸಿರುವದು ತನಿಖೆಯಲ್ಲಿ ಬೆಳೆಕಿಗೆ ಬಂದಿದೆ.

ಮೃತ ವ್ಯಕ್ತಿಯ ಗುರುತು ಪತ್ತೆಯಾದ ಕೇವಲ 24 ಗಂಟೆಯೊಳಗೆ ಹತ್ತೆಯ ಸತ್ಯೆತೆಯನ್ನು ಕಂಡು ಹಿಡಿದ ಮುರಗೋಡ ಪೊಲೀಸರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ಕಳುಹಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಮಾಹಿತಿ ನೀಡಿದ್ದಾರೆ. 

ಆ. 20ರ ಮುಂಜಾನೆ ಮುರಗೋಡ ಠಾಣಾ ವ್ಯಾಪ್ತಿಯ ರಸ್ತೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಮೃತದೇಹದ ಪಕ್ಕದಲ್ಲಿ ಸಿಕ್ಕಿದ ರಕ್ತಸಿಕ್ತ ದಂತವೈದ್ಯರ ಕಾಗದದಲ್ಲಿ ಸಿಕ್ಕಿದ ಮೊಬೈಲ್ ನಂಬರ್‌ನ ಸುಳಿವು ಹಿಡಿದ ಪೊಲೀಸರು ಕರೆ ಮಾಡಿದಾಗ ಮೃತನ ಗುರುತು ಪತ್ತೆಯಾಗಿದೆ. 

ಮೃತನನ್ನು ಈರುಳ್ಳಿ ವ್ಯಾಪಾರಿ ಸಂಗಮೇಶ್ ಮಾರುತಿ ತಿಗಡಿ (35) ಎಂದು ಆತನ ಸಹೋದರ ಗುರುತು ಪತ್ತೆ ಮಾಡಿದ್ದಾರೆ. ಡಿಎಸ್ಪಿ ರಾಮನಗೌಡ ಹಟ್ಟಿ ನೇತೃತ್ವದ ತಂಡ ತನಿಖೆ ಮಾಡಿ, ಮಗನನ್ನು ಸ್ನೇಹಿತನಿಗೆ ಕೊಲೆ ಮಾಡಲು ಸುಪಾರಿ ಕೊಟ್ಟು ತಂದೆ ಮಾರುತಿ ಮಂಜುನಾಥ ಹೊಂಗಲ(43) ಮಾರುತಿ ಅಡಿವೆಪ್ಪ ಬೊಳತ್ತಿನ (38) ಅವರನ್ನು ವಿಚಾರಣೆಗೆ ಒಳಪಡಿಸಿದಾಗ ತಾವು ಕೊಲೆ ಮಾಡಿದ್ದನ್ನು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. 

ಈರುಳ್ಳಿ ವ್ಯಾಪಾರಿಗಳಾಗಿದ್ದ ಮೃತ ಸಂಗಮೇಶ ಹಾಗೂ ಆರೋಪಿ ಮಂಜುನಾಥ ಹೊಂಗಲ. ಆರೋಪಿ ತನ್ನ ಅಪ್ತ ಅಡಿವೆಪ್ಪ ಬೊಳತ್ತಿನ ಜೊತೆಗೂಡಿ ಕೊಲೆ ಮಾಡಿದ್ದಾರೆ. ಸಂಗಮೇಶ್‌ಗೆ ಕಂಠಪೂರ್ತಿ ಕುಡಿಸಿ ಬೈಕ್ ಮೇಲೆ ಕರೆದುಕೊಂಡು ಹೋಗಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಶವದ ಗುರುತು ಸಿಗದ ಹಾಗೆ ಸಾಕ್ಷಿ ನಾಶಪಡಿಸಲು ಯತ್ನಿಸಿದ್ದರು ಎನ್ನಲಾಗಿದೆ. ಬಳಿಕ ಕುಟರನಟ್ಟಿ ಗ್ರಾಮದ ಸಮೀಪದಲ್ಲಿ ಶವ ಎಸೆದು ಪರಾರಿಯಾಗಿದ್ದ ಆರೋಪಿಗಳು ಈಗ ಖಾಕಿ ಬಲೆಗೆ ಬಿದ್ದಿದ್ದಾರೆ.

ರಾಮದುರ್ಗ ಡಿಎಸ್ ಪಿ ರಾಮನಗೌಡ ಹಟ್ಟಿ ಇವರ ಮಾರ್ಗದರ್ಶನದಲ್ಲಿ ಈ ಪ್ರಕರಣವನ್ನು 24 ಗಂಟೆಗಳ ಒಳಗಾಗಿ ಕೊಲೆ ಮಾಡಿದ ಆರೋಪಿಗಳ ಸುಳವು ಪತ್ತೆ ಮಾಡಿದ ಮುರಗೋಡ ಸಿಪಿಐ ಐ.ಎಮ್.ಮಠಪತಿ, ಮುರಗೋಡ ಪೊಲೀಸ ಠಾಣೆಯ ಪಿಎಸ್ ಐಗಳಾದ  ಎಸ್.ಎಮ್.ಕಾರಜೋಳ, ಐ.ಎಮ್.ಹಿರೇಗೌಡ್ರ ಮತ್ತು ಸಿಬ್ಬಂದಿಗಳಾದ ಎಚ್. ಆರ್.ನ್ಯಾಮಗೌಡ, ಎನ್.ಸಿ.ತಲ್ಲೂರ, ಎಸ್.ಎಮ್ ಜೈನರ, ಎಮ್.ಬಿ.ಸಾಯಿಕ, ಎಸ್.ಎಮ್.ಹುಂಬಿ,ಐ.ಎಸ್.ವಕ್ಕುಂದ, ಕೆ.ಬಿ.ಅಲಗರಾವುತ, ಎಮ್.ಎಸ್.ಅವರಾದಿ, ಕೆ.ಆರ್.ಮುನವಳ್ಳಿ, ಎಮ್.ಬಿ.ಗುಡಗನಟ್ಟಿ, ಹಾಗೂ ಮುರಗೋಡ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಪ್ರಕರಣ ಭೇದಿಸುವಲ್ಲಿ ಶ್ರಮ ವಹಿಸಿದ್ದಾರೆ.

ಆರೋಪಿ ಗುರುತು ಪತ್ತೆಯಾದ 24 ಗಂಟೆಯಲ್ಲಿ ಆರೋಪಿತರನ್ನು ಹೆಡೆಮುರಿ ಕಟ್ಟಿದ ಜಿಲ್ಲೆ ಮುರಗೋಡು ಠಾಣಾ ಪೊಲೀಸರನ್ನು ಬೆಳಗಾವಿ ಎಸ್ಪಿ ಡಾ. ಸಂಜೀವ ಪಾಟೀಲ, ಹೆಚ್ವುವರಿ ಎಸ್ ಪಿ ಚಂದ್ರಶೇಖರ ಅವರು ಶ್ಲಾಘಿಸಿದ್ದಾರೆ. 



ಸುದ್ದಿ ಓದಿ