ಸಿಂದಗಿರಿ ಗುರುಗಳ ಕರ್ತವ್ಯ ಪ್ರಜ್ಞೆ ಅನುಕರಣೀಯ

ಸಿಂದಗಿರಿ ಗುರುಗಳ ಕರ್ತವ್ಯ ಪ್ರಜ್ಞೆ ಅನುಕರಣೀಯ

ತಾಳಿಕೋಟಿ 02: ಇಂದು ನಿವೃತ್ತಿ ಹೊಂದುತ್ತಿರುವ ಸಿಂದಗಿರಿ ಗುರುಗಳು ತಮ್ಮ ಸೇವಾ ಅವಧಿಯ ಉದ್ದಕ್ಕೂ ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆ ಯೊಂದಿಗೆ ಸೇವೆಯನ್ನು ಸಲ್ಲಿಸುವುದವರಾಗಿದ್ದಾರೆ ಎಂದು ಗುರುಮಾತೆ ಎಂ.ಜಿ.ಬಿರಾದಾರ ಹೇಳಿದರು.

ಸಮೀಪದ ಹಿರೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ  ಶಿಕ್ಷಕ ಎಚ್‌.ಡಿ. ಸಿಂದಗಿರಿ ಹಾಗೂ ಅಡುಗೆ ಮೇಲ್ವಿಚಾರಕಿ ಕಸ್ತೂರಬಾಯಿ ಭಜಂತ್ರಿ ಸೇವಾ ನಿವೃತ್ತಿ ಗೊಂಡಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು. ಸಹೊದ್ಯೋಗಿಗಳಾದ ಸಿಂದಗಿರಿ ಗುರುಗಳು ವಿದ್ಯಾರ್ಥಿಗಳಿಗೆ ಒಬ್ಬ ಮಾದರಿ ಶಿಕ್ಷಕ ಆಗಿದ್ದರು ತಮ್ಮ ಕರ್ತವ್ಯ ಕುರಿತು ಅವರೆಂದು ನಿಷ್ಕಾಳಜಿ ತೋರಿದವರಲ್ಲ ಅದೇ ರೀತಿಯಾಗಿ ಮುಖ್ಯ ಅಡುಗೆ ಮೇಲ್ವಿಚಾರಕಿಯಾದ ಭಜಂತ್ರಿ ಅವರು ಕೂಡ ಪ್ರಮಾಣಿಕತೆಯಿಂದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ ಇವರಿಬ್ಬರ ವಿಶ್ರಾಂತ ಬದುಕು ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು. ಶಿಕ್ಷಕ ಎನ್‌. ಎಸ್‌. ನೀರಲಗಿ ಮಾತನಾಡಿ ಸಿಂಧಗಿರಿಯವರು 29 ವರ್ಷಗಳವರೆಗೆ ಶಿಕ್ಷಣ ಇಲಾಖೆಯಲ್ಲಿ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದಾರೆ ಅವರು ಸಹೋದ್ಯೋಗಿಗಳೊಂದಿಗೆ ಒಳ್ಳೆ ಸಂಬಂಧಗಳನ್ನು ಹೊಂದಿದವರು ಹಾಗೂ ಸಹಕಾರದ ಮನೋಭಾವದವವರಾಗಿದ್ದರು ಎಂದರು.  ನಿವೃತ್ತ ಶಿಕ್ಷಕ ಸಿಂದಗಿರಿಯವರು ತಮ್ಮ ಸೇವಾ ಅನುಭವವನ್ನು ಹಂಚಿಕೊಂಡರು. ಶಿಕ್ಷಕ ಸಿ.ಡಿ.ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಗುರುಗಳಾದ ಪಿ.ವೈ. ಛಲವಾದಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಸಂಗನಗೌಡ ಅಸ್ಕಿ. ಗ್ರಾಮ ಗಣ್ಯರಾದ ಗುರಣ್ಣ ಚೌದರಿ ಮಾನಪ್ಪ ಬಡಿಗೇರ ಎಂಪಿಎಸ್ ಹಾಗೂ ಉರ್ದು ಶಾಲೆಯ ಮುಖ್ಯ ಗುರುಗಳು ಶಿಕ್ಷಕರು. ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು. 


ಸುದ್ದಿ ಓದಿ