ಸಿಂದಗಿ ಲಿಂ. ಪಿ.ಮುನಿಕುಮಾರ ಸ್ಮರಣಾರ್ಥ ದತ್ತಿ ಉಪನ್ಯಾಸ
ಸಿಂದಗಿ04:ಪಟ್ಟಣದ ವಿವೇಕಾನಂದ ಬಡಾವಣೆಯ ಶಿವಪ್ಪ ರೇವಣಸಿದ್ದಪ್ಪ ಗವಸಾನೆ ಅವರ ಮನೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಹಾಗೂ ವಚನೋತ್ಸವ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ 124ನೇ ವಚನೋತ್ಸವ ಹಾಗೂ ಶರಣ ಸಾಹಿತಿ ಲಿಂ. ಪಿ.ಮುನಿಕುಮಾರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಡಾ.ಎಮ್.ಎಮ್.ಪಡಶೆಟ್ಟಿಯವರು ಬಸವತತ್ವ ಚಿಂತನ ಪರ ಮಾತನಾಡುತ್ತಾ, ಆಗಿನ ಕಾಲದ ಶರಣ ತತ್ವನಿಷ್ಟರು ಸಾಮಾಜಿಕ ಕಾರ್ಯಕರ್ತರು ಆದ ಲಿಂ.ಪಿ.ಮುನಿಕುಮಾರ ಅಂದರೆ ಪಟ್ಟಣಶೆಟ್ಟಿ ಮುನಿಯಪ್ಪನ ಕುಮಾರ ಮಲ್ಲಿಕಾರ್ಜುನನ ಕುರಿತು ಅವರ ಧಾರ್ಮಿಕ ಕಾರ್ಯ ದಾಸೋಹ ಭಾವನೆ, ಬಸವ ತತ್ವಾಚರಣೆ ಹಾಗೂ ಸಾಹಿತ್ಯಿಕ ರಚನೆಯ ಕುರಿತು ಮಾತನಾಡಿ ಹೃದಯಗನ್ನಡಿ ಅತ್ಯದ್ಬುತ ಕೃತಿ ಎಂದು ವಿವರಿಸಿದರು.
ವಿಶ್ರಾಂತ ಪ್ರಾಧ್ಯಾಪಕರಾದ ವಿ.ಡಿ.ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯರಾದ ಸಿ.ಕೆ.ಕಟ್ಟಿಯವರು ಅಕ್ಕಮಹಾದೇವಿಯ ಕುರಿತು ಇಳೆನಿಂಬೆ, ಮಾವು ಮಾದಲಿಕೆ ಹುಳೆ ಎರೆದವರಾರು ವಚನವನ್ನು ವಿಶ್ಲೇಸಿದರು.
ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚನ್ನಪ್ಪ ಕತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿಯಾಗಿ ಶಿವಪ್ಪ ರೇವಣಸಿದ್ದಪ್ಪ ಗವಸಾನೆಯವರು ತಮ್ಮ ಮಾವನವರಾದ ಲಿಂ. ಪಿ.ಮುನಿಕುಮಾರ ರವರ ಬಗ್ಗೆ ಹಾಗೂ ಶರಣ ಸಾಹಿತ್ಯಪರಿಷತ್ತಿನ ಬಗ್ಗೆ ಅಭಿನಂದನೆ ಸಲ್ಲಿಸಿದರು.
ಮಲ್ಲಿಕಾರ್ಜುನ ಸಿಂದಗಿ ಸ್ವಾಗತಿಸಿದರು. ಶಿವಕುಮಾರ ಗು.ಶಿವಸಿಂಪಿ ಶರಣು ಸಮರೆ್ಣ ಗೈದರು. ಶಂಕರ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಶೆಟ್ಟರ್ ವಚನ ಗಾಯನ ಮಾಡಿದರು. ವೇದಿಕೆಯಲ್ಲಿ ಪ್ರಾ. ಎ.ಎಸ್.ಬಿರಾದಾರ, ಎನ.ಬಿ.ಪಾಟೀಲ, ಬಿ.ಎಸ್.ಹಣಮಶೆಟ್ಟಿ, ಎಮ್.ಎಮ್.ಸೊನ್ನದ, ವಿರೇಶ ಇವಣಿ, ಶಿವಲಿಂಗ ಕಲಬುರಗಿ, ಅಶೋಕ ವಾರದ, ಶರಣಬಸು ಜೋಗುರ, ಶ್ರೀಶೈಲ ಯಳಮೇಲಿ, ಕಲ್ಲಪ್ಪ ತಾರಾಪುರ, ಶಿವಾನಂದ ಕಲಬುರಗಿ, ದಾನಪ್ಪ ಜೋಗುರ, ಸಂಗಪ್ಪ ಕತ್ತಿ, ರವಿ ಗವಸಾನೆ, ರಾಹುಲ ಪಟ್ಟಣಶೆಟ್ಟಿ, ದಯಾನಂದ ಇವಣಿ, ಬಸವರಾಜು ಕಲಬುರಗಿ, ಮಹಾದೇವಿ ಎಸ್.ಗವಸಾನೆ, ಶಶಿಕಲಾ ಹಿರೇಮಠ, ಶೈಲಜಾ ಪಟ್ಟಣಶೆಟ್ಟಿ, ಮಲಕಮ್ಮ ಕಿಣಗಿ, ಗುರಬಸವ್ವ ಇವಣಿ, ಮಹಾನಂದ ಬಮ್ಮಣ್ಣಿ, ಪಾರ್ವತಿ ಕಿಣಗಿ, ಶೇಖವ್ವ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.