ಮೂಡಲಗಿ

ದಿ.22 ರಂದು ಬೆಳ್ಳಿ ಹಬ್ಬ ಸಮಾರಂಭ

ದಿ.22 ರಂದು ಬೆಳ್ಳಿ ಹಬ್ಬ ಸಮಾರಂಭ

ಮೂಡಲಗಿ 21: ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ನಿಜಗುಣ ದೇವರ ವಿದ್ಯಾಸಂಸ್ಥೆಯ 25ನೇ ವರ್ಷದ ಬೆಳ್ಳಿ ಹಬ್ಬ ಸಮಾರಂಭ ಹಾಗೂ ಸಿದ್ಧಲಿಂಗೇಶ್ವರ ಪ್ರಾಥಮಿಕ ಶಾಲೆ ಹಾಗೂ ಶಿವಾನಂದ ಕೌಜಲಗಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರವು ದಿ.22 ರಂದು ಸಂಜೆ 5 ಗಂಟೆಗೆ ಜರುಗಲಿದ್ದು ಸಾನಿಧ್ಯವನ್ನು ನಿಜಗುಣ ದೇವರು ವಹಿಸುವರು. ಅಧ್ಯಕ್ಷತೆಯನ್ನು ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್‌ ಗೋಕಾಕದ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ವಹಿಸುವರು. ಉದ್ಘಾಟನೆಯನ್ನು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದಜೀ ಮುತಾಲಿಕ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮೂಡಲಗಿ ಕ್ಷೇತ್ರಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಸಿಆರ್‌ಪಿ ಆನಂದ ಹಮ್ಮನವರ, ಗ್ರಾ.ಪಂ ಸದಸ್ಯ ಆರ್‌.ಬಿ.ನಾಯಕ ಆಗಮಿಸುವರು ಎಂದು ಸಂಸ್ಥೆಯ ಅಧ್ಯಕ್ಷ ನಿಜಗುಣ ದೇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ