ಸಂಜೂ ಹಜೇರಿಗೆ ಬೆಳ್ಳಿ ಪದಕ
ಟಿಎಲ್ಕೆ-17-4 ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಶಿಯೇಶನ್ ಪಾರ್ ದಿವ್ಯಾಂಗ್ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ಟಿಟಿ ರಾಜ್ಯ ಚಾಂಪಿಯನ್ ಶಿಪ್ ಕ್ಲಾಸ್ 7 ಕೆಟಗರಿಯಲ್ಲಿ ತಾಳಿಕೋಟೆ ಪಟ್ಟಣದ ಸಂಜೂ ಹಜೇರಿ ಬೆಳ್ಳಿ ಪದಕವನ್ನು ಗೆದ್ದರು. ಇವರು ತಾಳಿಕೋಟೆ ತಾಲ್ಲೂಕಿನ ಬಿಳೇಭಾವಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಚಿನ್ನ ಸೇರಿದಂತೆ ಹಲವು ಪದಕ ಗಳಿಸಿದ್ದಾರೆ.