ಸುಕೋ ಬ್ಯಾಂಕಿನಿಂದ ಪರಿಹಾರದಿಂದ ಸಾಲ ಮರುಪಾವತಿ ಒಡಂಬಡಿಕೆಗೆ ಸಹಿ
ಬಳ್ಳಾರಿ 11: ಬ್ಯಾಂಕುಗಳು ಗ್ರಾಹಕರಿಂದ ಠೇವಣಿ ಸ್ವೀಕಾರ, ಅವರಿಗೆ ಸಾಲದ ಸಹಾಯ, ಹಣ ವರ್ಗಾವಣೆ ಸೇವೆಗಳ ಜೊತೆಗೆ ಕಳೆದ ಒಂದುದಶಕದಿಂದಜೀವ ವಿಮೆ ಹಾಗೂ ಸ್ಥಿರ ಮತ್ತು ಚರಾಸ್ತಿಗಳ ವಿಮೆ ಯೋಜನೆಗಳನ್ನು ಒದಗಿಸುತ್ತಿವೆ. ವಿಮಾ ಕಂಪನಿಗಳು, ಬ್ಯಾಂಕುಗಳು ಹೊಂದಿರುವ ಅಪಾರ ಗ್ರಾಹಕರ ವೃಂದವನ್ನು ಸುಲಭವಾಗಿ ತಲುಪುವ ಅವಕಾಶಗಳನ್ನು ಗಮನಿಸಿರುವ ವಿಮಾ ಕಂಪನಿಗಳು ಬ್ಯಂಕುಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಠೇವಣಿದಾರ ಬ್ಯಾಂಕಿನ ಸಾಲ ಹೊಂದಿರುವ ಗ್ರಾಹಕರಿಗೂ ಆಯಾ ಯೋಜನೆಗಳ ಮೂಲಕ ವಿಮಾ ಸೌಲಭ್ಯ ಪೂರೈಸುತ್ತಲಿವೆ.
ಸುಕೋ ಬ್ಯಾಂಕ್, ಹೈದ್ರಾಬಾದ್ ಮೂಲದ ಶ್ರೀರಾಮ ಲೈಫ್ಇನ್ಶೂರೆನ್ಸ್ ಕಂಪನಿಯ ವಿಮಾ ಯೋಜನೆಗಳ ಪೂರೈಕೆಗಾಗಿ ದಿನಾಂಕ 09 ರಂದು ಬಳ್ಳಾರಿಯಲ್ಲಿ ಒಡಂಬಡಿಕೆ ಮಾಡಿಕೊಂಡಿತು. ಸುಕೋ ಬ್ಯಾಂಕಿನ ಅಧ್ಯಕ್ಷರಾದ ಮೋಹಿತ್ ಮಸ್ಕಿ ಅವರ ಉಪಸ್ಥಿತಿಯಲ್ಲಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ಜಿ ಎಸ್ ರವಿಸುಧಾಕರ ಮತ್ತು ಶ್ರೀರಾಮ ಇನ್ಸೂರೆನ್ಸ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷರಾದ ಲಿಯೋನೆಲ್ ಫರ್ನಾಂಡಿಸ್ ಅವರು ಒಡಂಬಿಡಿಕೆಗೆ ಸಹಿ ಮಾಡಿದರು.
ವಿಮಾ ಕಂಪನಿ ಗ್ರಾಹಕರಿಗೆ ನೀಡುವ ವಿವಿಧ ಯೋಜನೆಗಳಲ್ಲಿ ನೂತನ ಮತ್ತು ಪ್ರಮುಖಯೋಜನೆಅಂದರೆ, ಬ್ಯಾಂಕಿನಿಂದ ಸಾಲ ಪಡೆದಿರುವಗ್ರಾಹಕರಿಗೆಜೀವ ವಿಮೆ ಮಾಡುವುದರ ಮೂಲಕ ಅಕಸ್ಮಾತ ಜೀವ ಹಾನಿ ಆದಾಗಅವರ ಸಾಲದ ಸಂಪೂರ್ಣ ಬಾಕಿ ಮೊತ್ತವನ್ನು ಬ್ಯಾಂಕಿಗೆ ಒದಗಿಸಿ, ಮೃತರ ಪರಿವಾರವನ್ನು ಋಣ ಮುಕ್ತರನ್ನಾಗಿಸುವುದು ಎನ್ನುವುದನ್ನು ಬ್ಯಾಂಕಿನ ಅಧ್ಯಕ್ಷರು ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ತಿಳಿಸಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾದ ಜಿ ಎಸ್ ರವಿಸುಧಾಕರ ಅವರು ವಿಮಾ ಯೋಜನೆಗಳು ಹೇಗೆ ಗ್ರಾಹಕರ ಹಿತರಕ್ಷಣೆಗೆ ಒತ್ತು ನೀಡುತ್ತವೆ ಅನ್ನುವುದನ್ನು ಸಭೆಗೆ ತಿಳಿಸಿದರು.
ಶ್ರೀರಾಮ ಇನ್ಸೂರೆನ್ಸ್ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷರಾದ ಲಿಯೋನೆಲ್ ಫರ್ನಾಂಡಿಸ್ ಅವರು ಉತ್ತರ ಕರ್ನಾಟಕದ ಜನತೆಗೆ ಸುಕೋ ಬ್ಯಾಂಕ ಮೂಲಕ ವಿಮಾ ಯೋಜನೆಗಳನ್ನು ತಲುಪಿಸುವ ಅವಕಾಶದ ಸದ್ಬಳಕೆ ಮಾಡಿಕೊಂಡು ಗ್ರಾಹಕರ ಹಿತೈಷಿಯಾಗುವ ಆಶಯ ವ್ಯಕ್ತಪಡಿಸಿದರು.
ನಗರದ ನಕ್ಷತ್ರ ಹೋಟೆಲಿನಲ್ಲಿ ನಡೆದ ಸರಳ ಸಮಾರಂಭದ ವೇದಿಕೆಯಲ್ಲಿ ಸುಕೋ ಬ್ಯಾಂಕಿನ ನಿರ್ದೇಶಕರಾದ ಸಾವಿತ್ರಿ ಮಸ್ಕಿ, ಸುಕೋ ಬ್ಯಾಂಕಿನ ಸಲಹೆಗಾರಾದ ಎಂ.ಆರ್.ಗೀರೀಶ್, ಶ್ರೀರಾಮ ಇನ್ಶೂರೆನ್ಸ್ನ ಹಿರಿಯ ಅಧಿಕಾರಿಗಳಾದ ರಾಮಕುಮಾರ, ರಾಜೇಶಗೋಪುರಾಜ, ಆದೇಶ, ವಸಂತರೆಡ್ಡಿ, ಗೌರವ, ಕಲ್ಯಾಣ, ಮೀನು ಚೋಪ್ರ ಉಪಸ್ಥಿತರಿದ್ದರು.
ಶ್ರೀರಾಮ ವಿಮಾಕಂಪನಿಯ ರಾಜೇಂದ್ರ ಅವರು ಸ್ವಾಗತಿಸಿದರು, ಆದೇಶ ಅವರು ವಂದನಾರೆ್ಣ ಸಲ್ಲಿಸಿದರು.