ಮಹಾಲಿಂಗಪುರವನ್ನು ತಾಲುಕು ಘೋಷನೆ ಮಾಡಲು ಸರ್ಕಾರದ ಮೀನಾಮೇಷ
ಮಹಾಲಿಂಗಪುರ ತಾಲೂಕು ಘೋಷಣೆಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದ : ಸಿದ್ದು ಸವದಿ
ಮಹಾಲಿಂಗಪುರ 08: ಕಳೆದ 603 ದಿನಗಳಿಂದ ನಡೆಯುತ್ತಿರುವ ತಾಲೂಕಾ ಬೇಡಿಕೆಗಾಗಿ ನಡೆಯುತ್ತಿರುವ ಹೋರಾಟದ ಕುರಿತು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಎರಡನೆಯ ದಿನವಾದ ಭುಧವಾರ ದಿನ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದು ಮಹಾಲಿಂಗಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಪ್ರಶ್ನಿಸಿದರು.
ಅವರು ಕೇಳಿದ ಪ್ರಶ್ನೆಗೆ ಸರಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರು ಉತ್ತರಿಸುತ್ತಾ ಹಿಂದೆ ಘೋಷಣೆ ಮಾಡಿದ ಸುಮಾರು ನಲ್ವತ್ತಕ್ಕೂ ಹೆಚ್ಚು ತಾಲೂಕುಗಳಿಗೆ ಇನ್ನು ಮೂಲ ಸೌಲಭ್ಯ ಒದಗಿಸಿಲ್ಲ ಆದ್ದರಿಂದ ಈಗ ಹೊಸ ತಾಲೂಕು ರಚನೆ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ ಮುಂಭರುವ ದಿನಗಳಲ್ಲಿ ಬಂದರೆ ನೋಡೋಣ ಈಗಾಗಲೇ ಜಮಖಂಡಿಯನ್ನು ಒಡೆದು ಎರಡು ತಾಲೂಕುಗಳನ್ನು ಮಾಡಲಾಗಿದೆ ಆದ್ದರಿಂದ ಆ ವ್ಯಾಪ್ತಿಯಲ್ಲಿ ಬರುವ ಮಹಾಲಿಂಗಾಪುರ ಮಾಡುವುದು ಕಷ್ಟ ಅದೇ ಎಂದು ಉತ್ತರಿಸಿದರು.
ಅದಕ್ಕೆ ಮತ್ತೆ ಎದ್ದ ಸಿದ್ದು ಸವದಿಯವರು ಮಹಾಲಿಂಗಪುರ ಜಮಖಂಡಿ ತಾಲೂಕಿಗೆ ಬರುವುದಿಲ್ಲ ಇದು ಸಚಿವರ ತಪ್ಪು ಕಲ್ಪನೆ ಅದು ಮುಧೋಳ ತಾಲೂಕಿನ ಭಗವಾಗಿದ್ದು, ಮುಧೋಳ ತಾಲೂಕನ್ನು ಒಡೆದು ಮಹಾಲಿಂಗಪುರ ತಾಲೂಕ ಮಾಡಬೇಕು, ಮಹಾಲಿಂಗಪುರ ಪುರಸಭೆಯನ್ನು ಹೊಂದಿದ್ದು, ಮತ್ತು ಒಂದು ಪಟ್ಟಣ ಪಂಚಾಯತಿಯನ್ನು ಒಳಗೊಂಡಿದ್ದು ಮತ್ತು 14 ಹಳ್ಳಿಗಳು ಸೇರಿ ಸುಮಾರು 160000 ಹೆಚ್ಚು ಜನಸಂಖ್ಯೆ ಹೊಂದಿದೆ ಎಂದು ಮನವರಿಕೆ ಮಾಡಿದರು.ಕಳೆದ ಐದಾರು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಅದರಲ್ಲಿ ಜೀವ ಹಾನಿಯಗಬಾರದು.
ಹಿಂದಿನ ಬೊಮ್ಮಾಯಿ ಸರ್ಕಾರ ಮಹಾಲಿಂಗಪುರವನ್ನು ತಾಲೂಕು ಕೇಂದ್ರ ಮಾಡಿ ಆದೇಶ ಹೊರಡಿಸಿದೆ ಅದನ್ನು ಗೆಜೆಟ್ ಮಾಡಿ ಅಧಿಕೃತ ಘೋಷಣೆ ಮಾಡಬೇಕೆಂದು ಕೇಳಿದರು.ಸಂಪೂರ್ಣ ಅರ್ಹತೆ ಹೊಂದಿದ ನಗರವಾಗಿದೆ,ಎಂದರು
ಮತ್ತೆ ಉತ್ತರಿಸಿದ ಕಂದಾಯ ಸಚಿವರು ವರದಿ ತರಿಸಿಕೊಂಡು ಪರೀಶೀಲನೆ ಮಾಡುತ್ತೇವೆ,ಮುಂದಿನ ದಿನಗಳಲ್ಲಿ ಮಾಡುವ ಮೌಕಿಕ ಭರವಸೆ ನೀಡಿ ಹೋರಾಟಗಾರರು ಹೋರಾಟವನ್ನು ಮೋಟಕುಗೊಳಿಸಬೇಕೆಂದು ಕೇಳಿದರು.
ಮಾನ್ಯ ಕಂದಾಯ ಸಚಿವರಿಗೆ ಇರುವ ಸಂದೇಹ ಮಹಾಲಿಂಗಪುರ ಜಮಖಂಡಿ ತಾಲೂಕಿಗೆ ಒಳಪಟ್ಟಿದೆ ಎಂಬುದು ಆದರೆ ವಾಸ್ತವ ಮುಧೋಳ ತಾಲೂಕಿನ ಬಾಗವಾಗಿದ್ದು, ಮುಧೋಳ ಅತೀ ದೊಡ್ಡ ತಾಲೂಕಿದ್ದು ಸುಮಾರು 80 ತ್ತಕ್ಕೂ ಹೆಚ್ಚು ಹಳಿಗಳನ್ನು ಒಳಗೊಂಡಿದೆ, ಆದ್ದರಿಂದ ಮುಧೋಳ ತಾಲೂಕನ್ನು ಒಡೆದು ನೂತನ ಮಹಾಲಿಂಗಪುರ ತಾಲೂಕು ಕೇಂದ್ರ ಘೋಷಣೆ ಮಾಡುವುದು ಅತೀ ಸುಲಭವಾಗಿದೆ, ಹಿಂದಿನ ತಾಲೂಕು ರಚನಾ ಸಮಿತಿಗಳು ಸುಮಾರು ಎರಡು ಮೂರು ಸಮಿತಿಗಳು ಮಹಾಲಿಂಗಪುರದ ಹೆಸರನ್ನು ಸಿಫಾರಸ್ಸು ಮಾಡಿದರೂ ಹಿಂದಿನ ಸರ್ಕಾರಗಳು ನಗರವನ್ನು ಕಡೆಗಣಿಸಿವೆ ಈಗಲಾದರೂ ಸರ್ಕಾರ ಎಚೆತ್ತುಕೊಂಡು ಅರ್ಹತೆ ಇರುವ ಬೇಡಿಕೆ ಈಡೇರಿಸಬೇಕು ಎಂಬುದು ಈ ಭಾಗದ ಎಲ್ಲ ಜನರ ಕೂಗಾಗಿದೆ.