ಮಹಲಿಂಗಪುರ

ದೇವರ ನಾಮಸ್ಮರಣೆಯಿಂದ ಪುಣ್ಯ ಲಭಿಸಿ, ಜೀವನದ ಕಷ್ಟಕಾರ​‍್ಪಣಯಗಳು ದೂರಾಗುತ್ತವೆ: ಅಕ್ಕಲಕೋಟೆ ಶ್ರೀಗಳು

ದೇವರ ನಾಮಸ್ಮರಣೆಯಿಂದ ಪುಣ್ಯ ಲಭಿಸಿ, ಜೀವನದ ಕಷ್ಟಕಾರ​‍್ಪಣಯಗಳು ದೂರಾಗುತ್ತವೆ: ಅಕ್ಕಲಕೋಟೆ ಶ್ರೀಗಳು

ಮಹಾಲಿಂಗಪುರ : ಕಡೆ ಜನ್ಮವಾದ ಮಾನವ ಜನ್ಮವನ್ನು ಪಾವನಗೊಳಿಸಿಕೊಳ್ಳಲು ನುಡಿದಂತೆ ನಡೆಯಬೇಕು ಎಂದು ಅಕ್ಕಲಕೋಟದ ಚಿಕ್ಕ ರೇವಣಸಿದ್ದೇಶ್ವರ ಶ್ರೀಗಳು ಹೇಳಿದರು. 

ಪಟ್ಟಣದ ಭಾವಿಕಟ್ಟಿ ಕುಟುಂಬ ಹಮ್ಮಿಕೊಂಡ ಸಿದ್ದರೂಢರ 50ನೇ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ಸಿದ್ಧಾರೂಢರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ದಿನದ ಕೆಲಕಾಲ ದೇವರ ನಾಮಸ್ಮರಣೆ ಮಾಡಬೇಕು. ಇದರಿಂದ ಪುಣ್ಯ ಪ್ರಾಪ್ತವಾಗಿ, ಕಷ್ಟ ಕಾರ​‍್ಪಣಯಗಳೂ ದೂರಾಗಿ ನೆಮ್ಮದಿಯ ಬದುಕು ಲಭಿಸುತ್ತದೆ ಎಂದರು. 

 ನಂತರ ಸಾನಿಧ್ಯವಹಿಸಿ ಮಾತನಾಡಿದ ಜೋಡಕುರುಳಿಯ ಚಿದ್ಘಣಾನಂದ ಶ್ರೀಗಳು ಸದ್ಭಾವನೆಯಿಂದ ಗುರುವಿನ ಸೇವೆಯಲ್ಲಿ ತೊಡಗಿಕೊಂಡಾಗ ಮುಕ್ತಿ ದೊರೆಯುತ್ತದೆ. ಆದ್ದರಿಂದ ಸಿದ್ಧಾರೂಢರ ಬಾಲ್ಯ ಹಾಗೂ ಅವರ ಜನೋಪಕಾರಿ ಕಾರ್ಯಗಳನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಳ್ಳಬೇಕು. ಯುವಕರಾದಿಯಾಗಿ ಎಲ್ಲರೂ ಸತ್ಸಂಗಗಳು ಹಾಗೂ ಪುಣ್ಯ ಪ್ರವಚನಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಜೀವನದಲ್ಲಿ ಶಾಂತಿ, ನೆಮ್ಮದಿ ಲಭಿಸಿ ಸಮಾಜ ಸುಭಿಕ್ಷವಾಗಿರುತ್ತದೆ ಎಂದು ಭಕ್ತ ಸಮೂಹಕ್ಕೆ ತಿಳಿಸಿದರು. 

ಆಶೀರ್ವಚನ ನೀಡಿದ ಸಹಜಾನಂದ ಶ್ರೀಗಳು ಸಿದ್ದಾರೂಢರು ಯಾವುದೇ ಜಾತಿ, ಮತ, ಪಂಥ, ಸಮೂದಾಯಗಳಿಗೆ ಸೇರಿದವರಲ್ಲ ಮತ್ತು ಅವರನ್ನು ನಂಬಿ ಬಂದವರಿಗೆ ಮುಕ್ತಿ ಮಾರ್ಗವನ್ನು ಅನುಗ್ರಹಿಸಿದ್ದಾರೆ. ಇಂತಹ ಸತ್ಸಂಗಗಳು ಮತ್ತು ಸಿದ್ಧಾರೂಢರ ಚರಿತ್ರೆ ದೇಶವಿದೇಶಗಳ ಜನರಿಗೆ ತಲುಪಿ ಅವರಲ್ಲಿಯೂ ದೈವಭಕ್ತಿ ಹೆಚ್ಚಿ ಅವರ ಬದುಕು ಹಸನಾಗಲಿ ಎಂದರು.  

ಈ ಸಂದರ್ಭದಲ್ಲಿ ಬೀದರ ಶಂಕರಗೌಡ ಶ್ರೀಗಳು, ಪದ್ಮಶ್ರೀ ಇಬ್ರಾಹಿಂ ಸುತಾರ, ಕಲಬುರ್ಗಿ ಮಾತೋಶ್ರೀ ವಿದ್ಯಾವತಿದೇವಿ, ಕಂಕಣವಾಡಿಯ ಮಾರುತಿ ಶರಣರು ತಮ್ಮ ಅನುಭಾವ ನೀಡಿದರೆ,  ಸೋರಗಾಂವಿ ಸಿದ್ದಾರೂಢರ ಚರಿತ್ರಾಮೃತ ಓದಿದರು.  

ಮಲ್ಲಪ್ಪ ಬಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಡಾ. ಬಿ.ಡಿ ಸೋರಗಾಂವಿ, ಸುಭಾಸ ಭಾವಿಕಟ್ಟಿ, ವರದಾನೆಪ್ಪ ಭಾವಿಕಟ್ಟಿ, ರಾಜೇಶ ಭಾವಿಕಟ್ಟಿ, ಮಲ್ಲಪ್ಪ ಕಟಗಿ, ಪ್ರಭು ಕುಳ್ಳೋಳ್ಳಿ, ಬಿ.ಎಂ ಢಪಳಾಪುರ, ಮಹಾಲಿಂಗಪ್ಪ ನುಚ್ಚಿ, ರಮೇಶ ಭಾವಿಕಟ್ಟಿ, ಈಶ್ವರ ಚಮಕೇರಿ, ಮಹಾಲಿಂಗಪ್ಪ ಜಿಟ್ಟಿ, ನಾರಾಯಣ ಕಿರಗಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಅರವಿಂದ ಮಾಲಬಸರಿ, ಪ್ರಕಾಶ ತಟ್ಟಿಮನಿ, ಸಿದ್ದು ಶಿರೋಳ, ಸತೀಶ ಸೊರಗಾಂವಿ, ಶ್ರೀಶೈಲಪ್ಪ ಬಾಡನವರ, ಮಹಾದೇವಪ್ಪ ಬಂಡಿ, ಜಯಪ್ಪ ಮುರಗೋಡ, ಪ್ರಕಾಶ ಭಾವಿಕಟ್ಟಿ, ಅಲ್ಲಪ್ಪ ಹುನ್ನೂರ, ಡಾ.ಎಂ.ಎಸ್ ಕದ್ದಿಮನಿ, ನಿವೃತ್ತ ಶಿಕ್ಷಕರಾದ ಎಸ್‌.ಕೆ ಗಿಂಡೆ ಸೇರಿದಂತೆ ಹಲವರು ಇದ್ದರು.  

ಸುದ್ದಿ ಓದಿ