ಮಹಲಿಂಗಪುರ

ಸಿಧ್ಧರಾಮಯ್ಯ ಅವರ ಭಾವಚಿತ್ರ ರಚಿಸಿದ ಕೊಟ್ಟ ಕಲಾವಿದ ರಂಗನಾಥ

ಸಿಧ್ಧರಾಮಯ್ಯ ಅವರ ಭಾವಚಿತ್ರ ರಚಿಸಿದ ಕೊಟ್ಟ ಕಲಾವಿದ ರಂಗನಾಥ

ಮಹಾಲಿಂಗಪುರ 28: ಪ್ರಜಾಪ್ರಭುತ್ವದ ಮಹತ್ವ ಬಗ್ಗೆ ರಾಜ್ಯ ನಾಗರಿಕರಲ್ಲಿ ಅರಿವು ಮೂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ಕೆ ಮನಸೋತ ಸ್ಥಳೀಯ ಸಿಂಡಿಕೇಟ್ ಕಲಾವಿದ ಡಿ ಕೆ.ರಂಗನಾಥ ಮುಖ್ಯಮಂತ್ರಿಗಳ ಭಾವಚಿತ್ರವನ್ನು ಬಿಡಿಸಿ, ಅರ​‍್ಿಸಿ ಅವರ ಮೆಚ್ಚುಗೆಗೆ ಪಾತ್ರರಾಗುವ ಮೂಲಕ ಮಹಾಲಿಂಗಪುರ ಪಟ್ಟಣದ ಹೆಮ್ಮೆ ಮೆರೆದಿದ್ದಾರೆ. 

ಶುಕ್ರವಾರ ಮಧ್ಯಾಹ್ನ ಸಿ ಎಂ. ಮಳೆಗಾಲ ಅಧಿವೇಶನಕ್ಕೆ ತೆರಳುವ ಮುನ್ನವೆ ಕಲಾವಿದ ಡಿ ಕೆ.ರಂಗನಾಥ ಚೇಂಬರ್‌ಗೆ ತೆರಳಿ ಪ್ರಜಾಪ್ರಭುತ್ವ ಫಲಕದ ಮುಂದೆ ಗಂಭೀರವಾಗಿ ಪಾಠ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವ ಚಿತ್ರ ಪ್ರದರ್ಶಿಸಿ ಮುಖ್ಯಮಂತ್ರಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ಮತ್ತು ಮಾಜಿ ಸಚಿವರಾದ ಎಚ್ ಆಂಜನೇಯ ಮತ್ತು ಮಾಯಕೊಂಡ ಕ್ಷೇತ್ರದ ಶಾಸಕ ಬಸವಂತೆಪ್ಪ ಉಪಸ್ಥಿತರಿದ್ದರು. 

ರಂಗನಾಥ ಕುಂಚ ಕಲೆಯಲ್ಲಿ ಅರಳಿದ ಕಲಾ ಕೃತಿಗಳು ದೇಶ ವಿದೇಶಗಳಲ್ಲಿ ರಾರಾಜಿಸುತ್ತಿವೆ. ಅಲ್ಲದೆ ಮೈಸೂರು ದಶಹರಾ ಹಾಗೂ ಇನ್ನಿತರ ಪ್ರದರ್ಶನಗಳಲ್ಲಿ ಡಿಕೆ ರಚಿಸಿದ ಹಲವಾರು ಸ್ತಬ್ಧಚಿತ್ರಗಳು, ಫೋಟೋ ಫ್ರೇಮ್ ಕಲಾಕೃತಿಗಳು ಜನಮನ ಸೂರೆಗೊಂಡಿವೆ ಮತ್ತು ಹಲವಾರು ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ. ಈಗ ಬೆಂಗಳೂರಿನಲ್ಲಿ ಮಹಾಲಿಂಗಪುರ ಕಲಾ ಸಂಸ್ಕೃತಿಕ ಶಾಲೆ ಆರಂಭಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಕಲಾ ಸೇವೆ ಮಾಡುತ್ತ ಮಹಾಲಿಂಗಪುರ ಪಟ್ಟಣದ ಹಿರಿಮೆ ಹೆಚ್ಚಿಸಿದ್ದಾರೆ. 


ಸುದ್ದಿ ಓದಿ