ಸಿದ್ದರಾಮೇಶ್ವರರ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಮನ್ನಿಕೇರಿ
ಮೂಡಲಗಿ 16: ಪಟ್ಟಣದ ತಹಶೀಲ್ದಾರ ಸಭಾ ಭವನದಲ್ಲಿ ತಾಲೂಕಾ ಆಡಳಿತ ಹಾಗೂ ಭೋವಿ ವಡ್ಡರ ಸಮಾಜ ಭಾಂದವರ ಆಶ್ರಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.
ಗ್ರೇಡ್-2 ತಹಶೀಲ್ದಾರ ಶಿವಾನಂದ ಬಬಲಿ ಅವರು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಿ.ಇ.ಒ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಶ್ರೇಷ್ಠ ಮಹಾತ್ಮ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯಲ್ಲಿ ಪಾಲ್ಗೋಳುವ ಮೂಲಕ ಅವರ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಸಮಾಜ ಮುಖಿಯಾಗಿ ಬೆಳೆಯಲು ಶ್ರಮಿಸಬೇಕೆಂದರು.
ನಾಗನೂರ ಮುರಾರ್ಜಿ ಶಾಲೆಯ ಉಪನ್ಯಾಸಕ ಶಾನೂರ ಮಾಯನ್ನವರ ಅತಿಥಿ ಉಪನ್ಯಾಸ ನೀಡಿ, ಚಿಕ್ಕ ವಯಸ್ಸಿನಲ್ಲಿಯೇ ಭಕ್ತಿ ಮತ್ತು ಕಠಿಣ ಪರಿಶ್ರಮದಿಂದ ಸಾಕ್ಷಾತ ಶ್ರೀಶೈಲ್ ಮಲ್ಲಿಕಾರ್ಜುನ ದಶರ್ನ ಆಶಿರ್ವಾದಪಡೆದು ಶ್ರೀ ಚನ್ನಬಸವಣನವರಿಂದ ದೀಕ್ಷೆ ಪಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ವಚನಗಳು ಮತ್ತು ತತ್ವಸಿದ್ದಾಂತಗಳು ಪ್ರತಿಯೋಬ್ಬರಿಗೂ ದಾರೀದೀಪಗಳಾಗಿವೆ ಎಂದರು.
ಶರಣ ಕೃಷ್ಣಾ ಬಂಡಿವಡ್ಡರ ಮಾತನಾಡಿ, ವಚನಗಳು ಎಂದರೆ ಅನುಭವ ಮಂಟಪದಲ್ಲಿ ದಿನ ನಿತ್ಯದಲ್ಲಿ ಮಹಾತ್ಮರು ಮಾತನಾಡುವ ಮಾತಗಳೇ ವಚನಗಳು, ಮನುಷ್ಯ ಜನ್ಮ ಮುಕ್ತಿ ಪಡೆಯಬೇಕಾದರೆ ಮಹಾತ್ಮರ ವಾಣಿಯನ್ನು ಆಲಿಸುವದರಿಂದ ಮತ್ತು ಸತ್ಸಂಗದಲ್ಲಿ ಪಾಲ್ಗೋಳುವುದು ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಡಿಪಿಒ ಯಲ್ಲಪ್ಪ ಗದಾಡಿ, ತಾ.ಪಂ ಎಒ ಎಸ್.ಎಸ್.ರೋಡನ್ನವರ, ಕೃಷಿ ಇಲಾಖೆಯ ಪರಸಪ್ಪ ಹುಲಗಬಾಳಿ, ಹೆಸ್ಕಾಂ ಇಲಾಖೆಯ ಆರ್.ಡಿ.ಪಿಡಾಯಿ, ಅರಣ್ಯ ಇಲಾಖೆಯ ಮಹಾಂತೇಶ ಹಿಪ್ಪರಗಿ, ಶಿರೇಸ್ಥೆದಾರ ಪರಶುರಾಮ ನಾಯ್ಕ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲಕರ, ಹನಮಂತ ಗುಡ್ಲಮನಿ, ಎ.ಕೆ.ತಾಂಬೋಳಿ, ಹುಸೇನ ಶೆಖ, ಶಿವಾನಂದ ಸಣ್ಣಕ್ಕಿ, ಪೊಲೀಸ್ ಇಲಾಖೆಯ ಸಹಾಯಕ ಉಪನೀರೀಕ್ಷಕ ಎಮ್.ವಿ.ಮುರನಾಳ, ಅನ್ವರ ನದಾಫ್, ಕಾಶಪ್ಪ ಝಂಢಕುರಬರ, ಭೋವಿ ವಡ್ಡರ ಸಮಾಜ ಮುಖಂಡರಾದ ರಾಜು ಪೂಜೇರಿ, ದಶರಥ ಗಾಡಿವಡ್ಡರ, ಉಮೇಶ ಬಂಡಿವಡ್ಡರ, ಪರಶು ಬಂಡಿವಡ್ಡರ, ಮುತ್ತು ದತವಾಡ, ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಭೋವಿ ವಡ್ಡರ ಸಮಾಜ ಭಾಂದವರು ಉಪಸ್ಥಿತರಿದ್ದರು. ಶಿಕ್ಷಕ ಈರಣ್ಣ ನಿಡಗುಂದಿ ಸ್ವಾಗತಿಸಿ ನಿರೂಪಿಸಿದರು.