2013ರಲ್ಲಿ ಇದ್ದ ಹಾಗೆ ಸಿದ್ದರಾಮಯ್ಯ 2023ರಲ್ಲಿ ಕಾಣತಾ ಇಲ್ಲ : ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆ : ರಮೇಶ ಜಾರಕಿಹೊಳಿ

2013ರಲ್ಲಿ ಇದ್ದ ಹಾಗೆ ಸಿದ್ದರಾಮಯ್ಯ 2023ರಲ್ಲಿ ಕಾಣತಾ ಇಲ್ಲ : ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆ : ರಮೇಶ ಜಾರಕಿಹೊಳಿ

ಬೆಳಗಾವಿ : 2013ರಿಂದ 2018ರಲ್ಲಿ ನಾನು ಅವರ ಜೊತೆಗೆ ಸಚಿವನಾಗಿದ್ದಾಗ ನೋಡಿದ ಸಿದ್ದರಾಮಯ್ಯ ಇವಾಗ ಕಾಣುತ್ತಿಲ್ಲ. ಅವರಿಗೆ ಸ್ವತಂತ್ರ ಆಗಿ ಕೆಲಸ ಮಾಡವಂತೆ ಇದ್ದಿದ್ದು ಕಾಣುತ್ತಿಲ್ಲ, ಸಿದ್ದರಾಮಯ್ಯ ಮುಖದಲ್ಲಿ ಸದ್ಯ ಖುಷಿನೇ ಕಾಣುತ್ತಿಲ್ಲ. ಅದರಿಂದ 2013ರಲ್ಲಿ ನೋಡಿದ ಸಿದ್ದರಾಮಯ್ಯರಲ್ಲಿ 2023ರಲ್ಲಿ ನೋಡಲಾಗುತ್ತಿಲ್ಲ ಎಂದು ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಸಿಎಂ ಸಿದ್ದರಾಮಯ್ಯ ಬಗ್ಗೆ ರಮೇಶ ಜಾರಕಿಹೊಳಿ ಸಾಫ್ಟ್ ಕಾರ್ನರ್ ಆಗಿ ಬಿಟ್ಟರು.

   ಅಥಣಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್, ಲಕ್ಷö್ಮಣ್ ಸವದಿಗೆ ಶೋಭಾ ಕರಂದ್ಲಾಜೆ ಪರೋಕ್ಷ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ಅವರೆಲ್ಲ ಸ್ವಯಂಘೋಷಿತ ಲೀಡರ್‌ಗಳು, ತಾವು ತಾವೇ ಮಾಧ್ಯಮಗಳಲ್ಲಿ ಹಾಕಿಸುತ್ತಾರೆ. ನಮಗೇನೂ ಅವಶಕತೆ ಇಲ್ಲ, ಇಂತಹ ಪ್ರಮಾಣದಲ್ಲಿ ಅಸಹ್ಯ ಮಾಡಿದವರನ್ನ ತಗೋಂದ್ರೆ ಅದು ನಾಯಕರಿಗೆ ಬಿಟ್ಟ ವಿಚಾರ. ಪಕ್ಷಕ್ಕೆ ತಗೊಂಡ್ರೆ ಸ್ವಾಗತ ಎಂದು ರಮೇಶ್ ಜಾರಕಿಹೊಳಿ ನುಡಿದರು.

ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆಯಾಗಲಿದೆ :

   ನನ್ನ ರುಂಡ ಸಹ ಹೋಗಲ್ಲ ಕಾಂಗ್ರೆಸ್ ಕಡೆಗೆ ಹೋಗಲ್ಲ. ನಾವು ಇಲ್ಲೇ ಬಿಜೆಪಿಲ್ಲೇ ಉಳಿಯೋದು. ಬಿಜೆಪಿಯಲ್ಲೇ ನನ್ನ ರಾಜಕಾರಣ ಕೊನೆಯಾಗಲಿದೆ ಎಂದು ಗೋಕಾಕ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಸಹೋದರ, ಸಚಿವ ಸತೀಶ್ ಜಾರಕಿಹೊಳಿ ಅವರ ಮಗಳಿಗೆ ಲೋಕಸಭೆ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ನೀವು ಸ್ಪರ್ಧೆ ಮಾಡ್ತೀರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, ನಾನು ಲೋಕಸಭೆ ಚುನಾವಣೆಗೆ ನಿಲ್ಲಲ್ಲ. ನನ್ನ ಮಗಳಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಪರ ಕೆಲಸ ಮಾಡುವೆ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

   ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ನೀವು ಮರಳಿ ಹೋಗುತ್ತಿರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬರಗಾಲ ಘೋಷಣೆಗೆ ರಾಜ್ಯ ಸರ್ಕಾರ ಹಿಂದೇಟು ವಿಚಾರವಾಗಿ ಮಾತನಾಡಿ, ಸರ್ಕಾರಕ್ಕೆ ಅವರದ್ದೇ ಆದ ವಿಚಾರ ಇರುತ್ತೆ. ಸಿದ್ದರಾಮಯ್ಯರವರ ಬಗ್ಗೆ ನನಗೆ ಗೌರವ ಇದೆ, ಒಳ್ಳೆಯ ನಿರ್ಣಯ ತಗೆದುಕೊಳ್ಳುವ ಆಸೆ ಇದೆ ಎಂದರು.

ಸುದ್ದಿ ಓದಿ