ಮಹಲಿಂಗಪುರ

ಶ್ರೀ ವಿಠ್ಠಲ ರುಕ್ಮಿಣಿಯರ ವೈಭವದ ರಥೋತ್ಸವ.

ಶ್ರೀ ವಿಠ್ಠಲ ರುಕ್ಮಿಣಿಯರ ವೈಭವದ ರಥೋತ್ಸವ.

ಮಹಾಲಿಂಗಪುರ 26 : ಸ್ಥಳೀಯ ಬುದ್ನಿ ಪಿ ಡಿ  ಬಡಾವಣೆಯಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿಯರ ರಥೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತ್ಯಂತ ವಿಜ್ರಂಭಣೆಯಿಂದ ಜರುಗುತ್ತಾ ಬಂದಿರುತ್ತದೆ. ಪ್ರತಿವರ್ಷ ಗೌರಿ ಹುಣ್ಣಿಮೆಯ ದಿನದಂದು ನಡೆಯುವ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿ ದರ್ಶನಾಶಿರ್ವಾದ ಪಡೆದು ಪುನೀತರಾಗುತ್ತಾರೆ.ಜಾತ್ರೆಯ ಮುನ್ನ ಐದು ದಿನಗಳ ಕಾಲ ಸಂತರ ನೇತೃತ್ವದಲ್ಲಿ ಅಖಂಡ ಭಜನಾ ನಾಮಜಪ ಸಂಕೀರ್ತನ ಹಾಗೂ ಹೋಮ ಹವನ ಕಾರ್ಯಕ್ರಮವು ಜರುಗುತ್ತಾ ಬಂದಿರುತ್ತದೆ. 

ಹೊಸ ರಥ ಲೋಕಾರೆ​‍್ಣ : ಶ್ರೀ ವಿಠ್ಠಲ ರುಕ್ಮಿಣಿ ದೇವರ ರಥವು ಶಿಥಿಲಾವಸ್ಥೆಯಲ್ಲಿರುವುದನ್ನು ಕಂಡು ಭಕ್ತರು ಸಂತರ ನೇತೃತ್ವದಲ್ಲಿ ದೇಣಿಗೆಯನ್ನು ಸಂಗ್ರಹಿಸಿ ಹಲವು ವರ್ಷಗಳ ಪ್ರಯತ್ನವಾಗಿ ನೂತನ ರಥ ಸಿದ್ಧವಾಗಿದೆ. ಗೌರಿ ಹುಣ್ಣಿಮೆಯ ದಿನದಂದು ಶ್ರೀ ವಿಠ್ಠಲ ರುಕ್ಮಿಣಿ ದೇವರ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಅಖಂಡ ಸಂಕೀರ್ತನೆ ನಾಮಜಪದಲ್ಲಿ ಸಂತರು ಹಾಗೂ ಭಕ್ತರು ಕೂಡಿಕೊಂಡು ತೇರನ್ನು ಎಳೆಯುವ ಮೂಲಕ ತಮ್ಮ ಜನ್ಮವನ್ನು ಪಾವನ ಮಾಡಿಕೊಳ್ಳಲು ಆಗಮಿಸುತ್ತಾರೆ. 

 ಪ್ರಾತಃಕಾಲ ಮತ್ತು ಸಂಧ್ಯಾಕಾಲದಲ್ಲಿ ಸಂಕೀರ್ತನೆ : ಗೌರಿ ಹುಣ್ಣಿಮೆಯ ಹಿಂದಿನ ಐದು ದಿನಗಳ ಕಾಲ ಹಲವು ಗ್ರಾಮಗಳಿಂದ ಆಗಮಿಸಿದ ಸಂತರಿಂದ ಪ್ರಾತಃಕಾಲ 4 ಗಂಟೆಗೆ ದೇವರಿಗೆ ಕಾಕಡಾರತಿ ತುಳಸಿ ಪೂಜಾ ನಾಮಜಪವನ್ನು ಅಭಂಗ ಭಜನಾ ಕೀರ್ತನ ಹಾಗೂ ಸಾಯಂಕಾಲ 5 ಗಂಟೆಗೆ ಗ್ರಂಥ ಪಾರಾಯಣ ಹಾಗೂ ಕೀರ್ತನ ಪ್ರವಚನ ಹರಿ ಭಜನಾ ಕಾರ್ಯಕ್ರಮವು ಸಾಗಿ ಬಂದಿರುತ್ತದೆ. 

ಎಲ್ಲರನ್ನೂ ಕೃತಾರ್ಥ: 

ಪಲ್ಲಕ್ಕಿ ಸೇವೆ : ಜಾತ್ರೆಯ ನಿಮಿತ್ಯ ಶ್ರೀ ವಿಠ್ಠಲ ರುಕ್ಮಿಣಿ ದೇವರ ಪಲ್ಲಕ್ಕಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಆಗಮಿಸುತ್ತದೆ ದಾರಿಯುದ್ದಕ್ಕೂ ಸಂತರ ನಾಮಜಪ ಹಾಗೂ ಸಂಕೀರ್ತನೆಯು ಗಮನ ಸೆಳೆಯುತ್ತದೆ ಶ್ರೀ ವಿಠ್ಠಲ ರುಕುಮಾಯಿ ಹರಿಹರಿ ಎಂಬ ದೇವರನಾಮವು ಎಲ್ಲ ಭಕ್ತರ ನಾಲಿಗೆ ಮೇಲೆ ನಲಿದಾಡುತ್ತದೆ. ಬೋಲಾ ಪುಂಡಲಿಕ ವರದರಿ ಶ್ರೀ ವಿಠ್ಠಲ ಶ್ರೀ ಜ್ಞಾನದೇವ ತುಕಾರಾಮ್ ಎಂಬ ದೇವರ ಮಂತ್ರ ಸರ್ವರ ಮನದಲ್ಲಿ ಅಚ್ಚಳಿಯದೆ ಉಳಿದು ನಿರಂತರವಾಗಿ ಮನನ ಮಾಡುತ್ತಾ ಭಕ್ತಿ ರಸದಲ್ಲಿ ಎಲ್ಲ ಭಕ್ತರು ಆ ಪಂಡರಿನಾಥನ ಕೃಪೆಗೆ ಪಾತ್ರರಾಗುತ್ತಾರೆ.  

ಹರಿನಾಮ ಸಪ್ತಾಹ : ಶಿವುರಕರ ಶಾಖೆ ಶ್ರೀಕ್ಷೇತ್ರ ಪಂಢರಪುರದ ಶ್ರೀ ಕೃಷ್ಣಾ ಮಹಾರಾಜ ಮಹಾಸ್ವಾಮಿಗಳು ಇವರ ಧೀವ್ಯ ಸಾನಿಧ್ಯದಲ್ಲಿ ಶ್ರೀ ವಿಠಲ ರುಕ್ಮಿಣಿ ಅಖಂಡ ಹರೀನಾಮ ಸಪ್ತಾಹ ಕಾರ್ತೀಕ ಶುದ್ಧ ದಶಮಿ ಬುಧವಾರದಿಂದ ಕಾರ್ತೀಕ ಶುದ್ಧ ಚತುರ್ದಶಿ ರವಿವಾರದ ವರೆಗೆ ಪ್ರತಿ ದಿನ ಬೆಳ್ಳಿಗೆ 5 ರಿಂದ 6 ಕಾಖಢಾರತಿ ಬೆಳ್ಳಿಗೆ 7 ಗಂಟೆಯಿಂದ 1 ಗಂಟೆಯವರೆಗೆ ಭಜನೆ ಕೀರ್ತನೆ ನೆರವೇರುವುದು 4 ರಿಂದ 6 ಗಂಟೆಯವರೆಗೆ ಹರಿಪಾಠ, ರಾತ್ರಿ 7 ರಿಂದ 9 ಗಂಟೆಯವರೆಗೆ ಕೀರ್ತನೆ ರಾತ್ರಿ 9 ಗಂಟೆಯಿಂದ ಜಾಗರಣೆ ಜರುಗುವವು. 

ಅದ್ದೂರಿ ರಥೋತ್ಸವ :  ಈ ಬಾರಿ ದಿನಾಂಕ 27 ರಂದು ಕಾರ್ತೀಕ ಶುದ್ಧ ಗೌರಿಹುಣಿಮೆಯಂದು (ಪೌರ್ಣಿಮೆ ) ಮುಂಜಾನೆ 5 ಗಂಟೆಗೆ ಕಾಕಢಾರತಿ 8 ಗಂಟೆಗೆ ಶ್ರೀ ಹರಿ ವಿಠಲನ ಸೋಹಳಾ ಡಿಂಡಿ ನಗರ ಪ್ರದಕ್ಷಿಣೆ ಹಾಗೂ ಭಾರೂಢ ಕಾರ್ಯಕ್ರಮಗಳು ಮೆರವಣಿಗೆಯೊಂದಿಗೆ ನೆರವೇರುವದು. ಸಾಯಂಕಾಲ 5 ಗಂಟೆಗೆ ಪಾಂಡುರಂಗ ವಿಠಲ ರುಕ್ಮಿಣಿ ಮಂದಿರದಿಂದ ಸಕಲ ಮಂಗಳವಾದ್ಯದೊಂದಿಗೆ ಬುದ್ನಿ ಪಿ ಡಿ ಯಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ನೆರೆದ ಅಪಾರ ಭಕ್ತರು ಉತ್ಸಾಹದಿಂದ ತೇರು ಎಳೆದು ಪಾಂಡುರಂಗನ ಕೃಪೆಗೆ ಪಾತ್ರರಾದರು. 


ಸುದ್ದಿ ಓದಿ