ಹರಪನಹಳ್ಳಿ

"ಆರ್ಯ ಈಡಿಗ ಟ್ರಸ್ಟ್" ವತಿಯಿಂದ ಶಿವುಕುಮಾರ್ ಸ್ವಾಮೀಜಿ ಗುಣಮುಖರಾಗಲೇಂದು ಪ್ರಾಥರ್ಿನೆ

"ಆರ್ಯ ಈಡಿಗ ಟ್ರಸ್ಟ್"  ವತಿಯಿಂದ ಶಿವುಕುಮಾರ್ ಸ್ವಾಮೀಜಿ ಗುಣಮುಖರಾಗಲೇಂದು ಪ್ರಾಥರ್ಿನೆ

ಲೋಕದರ್ಶನ ವರದಿ

ಹರಪ್ಪನಹಳ್ಳಿ 20:ಶತಾಯುಶಿ ಡಾ||ಶಿವುಕುಮಾರ್ ಸ್ವಾಮೀಜಿ ಶೀಘ್ರ ಗುಣಮುಖರಾಗಲೇಂದು ಪ್ರಾಥರ್ಿಸಿ "ಆರ್ಯ ಈಡಿಗ ಟ್ರಸ್ಟ್" ವತಿಯಿಂದ ನಗರದ ಪಂಚಮುಖಿ ಆಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಕೈಗೊಳ್ಳಲಾಯಿತು. ಟ್ರಸ್ಟ್ನ ಅಧ್ಯಕ್ಷರಾದ ಕೆ.ರಾಘವೇಂದ್ರ ಗೌಡ, ಉಪಾಧ್ಯಕ್ಷರಾದ ಈ.ಕೃಷ್ಣಪ್ಪ ಇವರ ನೇತೃತ್ವದಲ್ಲಿ ಟ್ರಸ್ಟ್ನ ಸರ್ವ ಸದಸ್ಯರು ಹಾಗೂ ಸಮಾಜದ ಬಂದುಗಳು ಸ್ವಾಮೀಜಿಯವರು ಶೀಘ್ರ ಗುಣಮುಖರಾಗಲೆಂದು ಪ್ರಾಥರ್ಿಸಿ ವಿಶೇಷ ಪೂಜೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು "ಗುರುಗಳು ಸರ್ವಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದಂತ ಮಹಾನ್ಚೇತನರಾಗಿದ್ದು ಇಂತಹ ಪರಮಪೂಜ್ಯರು ಬೇಗ ಗುಣಮುಖರಾಗಿ ಈ ನಾಡಿನ ಸೇವೆಗಾಗಿ ಮತ್ತೊಮ್ಮೆ ಹಿಂದಿನಂತೆ ಕಾಯರ್ೋನ್ಮುಖರಾಗಲಿ ಎಂದು ಹಾರೈಸಿದರು. ಹಾಗೂ ಶ್ರೀ ಮಧುಸೂದನ್ರವರು ಮಾತನಾಡಿ" ಗುರುಗಳು ಜಾತಿ ಮತಕ್ಕೆ ಅತೀತವಾಗಿ ಇಡೀ ಮಾನವ ಕುಲಕ್ಕೆ ಸೇವೆ ಸಲ್ಲಿಸಿದ ಮಹಾನ್ಚೇತನರಾಗಿದ್ದಾರೆಂದು ನುಡಿದರು. ಈ ಸಂದರ್ಭದಲ್ಲಿ ಕಾರ್ಯದಶರ್ಿಗಳಾದ ಶ್ರೀ ಕುಮಾರಸ್ವಾಮಿ ಮಾತನಾಡಿ ನಾಡಿನ ಜನತೆಗೆ ವಿದ್ಯಾದಾನ ನೀಡಿದಂತ ಪರಮಪೂಜ್ಯರು ಶೀಘ್ರ ಗುಣಮುಖರಾಗಲಿ ಎಂದರು ಶ್ರೀ ಎರ್ರಿಸ್ವಾಮಿ ಹಾಗೂ ಶ್ರೀ ಪ್ರಸಾದ್ರವರು ಮಾತನಾಡಿ ಪೂಜ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಸದಸ್ಯರುಗಳಾದ ಶ್ರೀ ಅಶೋಕ್ ಪೂಜಾರಿ, ಶ್ರೀಕಾಂತ್, ರವಿಕುಮಾರ್, ವಾಸುದೇವ, ರಂಗನಗೌಡ, ಪರುಶುರಾಮ, ಗೋವಿಂದರಾಜು ಮತ್ತು ಟ್ರಸ್ಟ್ನ ಸದಸ್ಯರುಗಳು ಹಾಗೂ ಸಮಾಜದ ಬಂದುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ