ಐತಿಹಾಸಿಕ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ

ಹರಪನಹಳ್ಳಿ 06: ಐತಿಹಾಸಿಕ ಕೋಟೆ ಆಂಜನೇಯ ಸ್ವಾಮಿ ರಥೋತ್ಸವವು ಇಂದು ವಿಜೃಂಭಣೆಯಿಂದ ನಡೆಯಿತು. ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ರಥೋತ್ಸವ ಕಾರ್ಯಕ್ರಮ ವೈಭವದಿಂದ ಜರುಗಿತು ಪ್ರತಿ ವರ್ಷದಂತೆ ಈ ವರ್ಷವೂ ಸಹ ದವನದ ಹುಣ್ಣಿಮೆಯಂದು ಶ್ರೀ ಹನುಮಜಯಂತಿಯ ಪ್ರಯುಕ್ತ ಸ್ವಾಮಿಯ ರಥೋತ್ಸವವನ್ನು ಆಚರಿಸಲಾಗುವುದು ಅದರಂತೆ ಗುರುವಾರ ಸಾಯಂಕಾಲ 6:00 ಗಂಟೆಗೆ ಸಮಯದಲ್ಲಿ ರಥೋತ್ಸವಕ್ಕಿಂತ ಮುಂಚೆ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು ದ್ಯಾಮಜ್ಜಿ ರೊಕ್ಕಪ್ಪ 52 ಸಾವಿರ ರೂಪಾಯಿಗಳಿಗೆ ಹರಾಜು ಮಾಡಿಕೊಂಡರೆ ಗಂಧದ ಹಾರವನ್ನು ನಿಟ್ಟೂರು ತಿಮ್ಮಣ್ಣ ನು 21 ಸಾವಿರ ರೂಪಾಯಿಗಳಿಗೆ , ಹೂವಿನ ಹಾರ ವನ್ನು ಮಾಜಿ ಸೈನಿಕ  ಪೂಜಾರ್ ರಾಜ  ರವರುಗಳು ಹಾರಜಿನಲ್ಲಿ ಕೂಗಿಕೊಂಡರು.

ನೂರಾರು ಜನರ ಭಕ್ತರ ಸಮ್ಮುಖದಲ್ಲಿ ನಂದಿಕೋಲು ಸಮಾಳ ರಥೋತ್ಸವಕ್ಕೆ ಮೆರುಗು ತಂದವು ರಥಕ್ಕೆ ನೆರೆದಿದ್ದ ಭಕ್ತರು ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೆಚ್ ಕೆ ಹಾಲೇಶ್, ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಮುಖಂಡರಾದ ಚಿಕ್ಕೇರಿ ವೆಂಕಟೇಶ್, ದ್ಯಾಮಜ್ಜಿ ದಂಡೆಪ್ಪ , ಮಂಡಕ್ಕಿ ಸುರೇಶ್, ಹೆಚ್ ಎ.ವೇಣುಗೋಪಾಲ್ ,ಮ್ಯಾಕಿ ದೊಡ್ಡ ದುರುಗಪ್ಪ,ರಾಜು ಪೂಜಾರ್,ಕಮ್ಮಾರ ಸಣ್ಣಹಾಲಪ್ಪ,ಜಂಗ್ಲಿ ಅಂಜಿನಪ್ಪ,ದಾಸಪ್ಪ,ಬಾಣದ ಗಂಗಪ್ಪ, ನಿಟ್ಟೂರು ತಿಮ್ಮಣ್ಣ, ಪ್ರಧಾನ ಅರ್ಚಕ ಮಾರುತಿ ಭಟ್ ಪೂಜಾರ್, ಪಟ್ನಾಮದ ಪರಶುರಾಮ,ದರ್ಮಕರ್ತರಾದ ಕಟ್ಟಿ ಹರ್ಷ,ದಂಡಿನ ಹರೀಶ್, ರೈತ ಸಂಘದ ಮುಖಂಡ ದ್ಯಾಮಜ್ಜಿ ಹನುಮಂತಪ್ಪ, ಹೆಚ್ ಎ ಸುರೇಂದ್ರ ಬಾಬು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೆಚ್ ಬಿ ಪರಶುರಾಮಪ್ಪ, ಪುರಸಭೆ ಸದಸ್ಯ ಭರತೇಶ , ಟಿ.ಹನುಮಂತಪ್ಪ ,ಗಿಡ್ಡಳ್ಳಿ ನಾಗರಾಜ್, ಪಟ್ನಾಮದ ವೆಂಕಟೇಶ್,ರಾರ್ಯದುರ್ಗದ ಮರಿಯಪ್ಪ ಬಸವರಾಜಪ್ಪ  ಎನ್  ಧೀರಾಜ್   ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು