ಹಗರಿಬೊಮ್ಮನಹಳ್ಳಿ

ಹಗರಿಬೊಮ್ಮನಹಳ್ಳಿಗೆ ದಿ. 13ರಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗಮನ

ಹಗರಿಬೊಮ್ಮನಹಳ್ಳಿಗೆ ದಿ. 13ರಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗಮನ

ಹಗರಿಬೊಮ್ಮನಹಳ್ಳಿ 12: ಪಟ್ಟಣಕ್ಕೆ ದಿ. 13ರಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಗಮಿಸಲಿದ್ದಾರೆ ಎಂದು ವಿಜಯನಗರ, ಬಳ್ಳಾರಿ, ಕೊಪ್ಪಳ ಜಿಲ್ಲೆಯ ಶ್ರೀರಾಮ ಸೇನೆಯ ವಿಭಾಗಿಯ ಅಧ್ಯಕ್ಷ ಸಂಜೀವ ಮರಡಿ ಅವರು ತಿಳಿಸಿದರು. 

ಪಟ್ಟಣದ ಸರ್ಕ್ಯೂಟ್ ಹೌಸ್‌ನಲ್ಲಿ ಮಂಗಳವಾರ ಏರಿ​‍್ಡಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ ಹಿಂದು ಧರ್ಮಕ್ಕಾಗಿ ಅವಿರತ ಶ್ರಮಿಸುತ್ತಿರುವ, ಹಿಂದೂಗಳ ರಕ್ಷಣೆ ಜೊತೆ ಏಳ್ಗೆಯಲ್ಲಿ ಮೂಂಚೂಣಿಯಲ್ಲಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಬುಧವಾರ ಹಗರಿಬೊಮ್ಮನಹಳ್ಳಿ ಪಟ್ಟಣಕ್ಕೆ ಆಗಮಿಸಿ ನೀರಾವರಿ ಇಲಾಖೆ ಬಳಿಯಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೂಡ್ಲಗಿ ವೃತ್ತದಲ್ಲಿರುವ ಮಂಗನಹಳ್ಳಿ ಸುಬ್ಬಣ್ಣ ಮತ್ತು ಸಂಜೀವ ಮೂರ್ತಿ ಇವರ ಬಯಲು ಜಗದಲ್ಲಿ ಸಂಜೆ 5ಗಂಟೆಗೆ ತುಲಾಭಾರ ಕಾರ್ಯಕ್ರಮ ಹಾಗೂ ದಿಕ್ಸೂಚಿ ಭಾಷಣ ಮತ್ತು ಶ್ರೀ ಸ್ವಾಮಿಗಳಿಂದ ಆಶಿರ್ವಚನ ಕಾರ್ಯಕ್ರಮವನ್ನು ಗುರುಪೌರ್ಣಮಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮಕ್ಕೆ ಸರ್ವ ಹಿಂದೂ ಬಾಂಧವರು ಭಾಗವಹಿಸುವಂತೆ ಕೋರಿದರು. 

ಈ ಸಂಧರ್ಭದಲ್ಲಿ ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ರವಿಕುಮಾರ ಬಡಿಗೇರ್, ನಗರ ಘಟಕದ ಅಧ್ಯಕ್ಷ ಕುಲ್ಲಾಳಪ್ಪ, ಸದಸ್ಯರಾದ ಚಿಂತ್ರಪಳ್ಳಿ ನಾಗರಾಜ, ಈಶ ಇದ್ದರು. 


ಸುದ್ದಿ ಓದಿ