ಮಹಲಿಂಗಪುರ

ಶ್ರಾವಣ ಭಕ್ತಿ, ಭಾವೈಕ್ಯತೆ ಮಾಸ

ಶ್ರಾವಣ ಭಕ್ತಿ, ಭಾವೈಕ್ಯತೆ ಮಾಸ

ಮಹಾಲಿಂಗಪುರ 11: ವರ್ಷದ 12 ತಿಂಗಳಲ್ಲಿ ಶ್ರಾವಣ ಮಾಸದ ಒಂದು ತಿಂಗಳು ಭಕ್ತಿ ಭಾವೈಕ್ಯತೆಯಿಂದ ಕೂಡಿರುತ್ತದೆ. ಭಗವಂತನಲ್ಲಿ ಪ್ರಾರ್ಥಿಸಲು ಒಳ್ಳೆಯ ಸಂದರ್ಭ ಇದಾಗಿದೆ ಎಂದು ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ ಹೇಳಿದರು. 

ಸಮೀಪದ ಚಿಮ್ಮಡ ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರ ಹಮ್ಮಿಕೊಂಡ ನಂದಿಕೋಲು ಹಾಗೂ ಪಲ್ಲಕ್ಕಿ ಉತ್ಸವದಲ್ಲಿ ಮಾತನಾಡಿದರು. 

ಮಾನವ ಕುಲಕ್ಕೆ ತಗುಲಿರುವ ಮಹಾಮಾರಿ ಕೊರೊನಾ ತೊಲಗಲಿ ಎಂದು ಪ್ರಭುಲಿಂಗೇಶ್ವರನಲ್ಲಿ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸೋಣ. ಶ್ರಾವಣ ಮಾಸದ ನಿಮಿತ್ಯ ಎಲ್ಲ ದೇವಸ್ಥಾನಗಳಲ್ಲಿ ಪೂಜಾದಿ ಕಾರ್ಯಕ್ರಮಗಳು ನಡೆಯುತ್ತವೆ. ಒಳ್ಳೆಯ ಮನಸ್ಸು, ಒಳ್ಳೆಯ ಭಾವನೆಯನ್ನು ಇಟ್ಟುಕೊಂಡು ಮುನ್ನಡೆಯೋಣ. ಅಲ್ಲಮಪ್ರಭು ದೇವರನ್ನು ಸ್ಮರಿಸಿಕೊಳ್ಳುವ ಈ ಪಲ್ಲಕ್ಕಿ ಉತ್ಸವವನ್ನು ಪ್ರತಿ ಸೋಮವಾರ ಎಲ್ಲ ಭಕ್ತಾದಿಗಳು ಪಾಲ್ಗೊಂಡು ನಿರಂತರವಾಗಿ ನಡೆಸಲು ಎಲ್ಲರೂ ಸಹಕರಿಸೋಣವೆಂದರು.  

ಚಿಮ್ಮಡ ಗ್ರಾ.ಪಂ ಅಧ್ಯಕ್ಷ ಗುರುಲಿಂಗಪ್ಪ ಪೂಜಾರಿ, ಬಸಪ್ಪ ಪಾಟೀಲ, ಮಹಾದೇವ ಕುಂಬಾರ, ಪರ​‍್ಪ ಮಳೆಪ್ಪ ಕುಂಬಾರ, ಯಮನಪ್ಪ ಕುಂಬಾರ, ಪ್ರಕಾಶ ಮಠಪತಿ ಇತರರು ಇದ್ದರು. 


ಸುದ್ದಿ ಓದಿ