ಮಹಲಿಂಗಪುರ

ಸ್ಪಿನ್ ಮಾಂತ್ರಿಕನಿಗೆ ಪಟ್ಟಣದ ಕ್ರಿಕೆಟ್ ಆಟಗಾರ ರಿಂದ ಶ್ರದ್ಧಾಂಜಲಿ

ಸ್ಪಿನ್ ಮಾಂತ್ರಿಕನಿಗೆ ಪಟ್ಟಣದ ಕ್ರಿಕೆಟ್ ಆಟಗಾರ ರಿಂದ ಶ್ರದ್ಧಾಂಜಲಿ

ಮಹಾಲಿಂಗಪುರ 06: ಕ್ರೀಡಾ ಪ್ರಪಂಚಕ್ಕೆ ಸೀಮಿತವಾದ ಗಡಿ ಮತ್ತು ಜಾತಿ-ಮತ-ಪಂಥ ಯಾವ ಭೇದಭಾವ ಇರುವುದಿಲ್ಲ ಎನ್ನುವುದಕ್ಕೆ ನಗರದ ಕ್ರಿಕೆಟ್ ಆಟಗಾರರು ಕ್ರಿಕೆಟ್ ಲೋಕದ ಸ್ಪಿನ್ ಮಾಂತ್ರಿಕ ಆಸ್ಟ್ರೇಲಿಯಾ ದೇಶದ ಶೇನ್ ವಾರ್ನ್‌ ನಿಧನಕ್ಕೆ ಶ್ರದ್ಧಾಂಜಲಿ ಅರ​‍್ಿಸಿ ಶಾಂತಿ ಕೋರಿದರು. 

ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಮುಂಜಾನೆ ವಿವಿಧ ತಂಡಗಳ ಆಟಗಾರರು ತಮ್ಮ ಆಟವನ್ನು ತ್ಯಜಿಸಿ ಒಂದು ನಿಮಿಷದ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ​‍್ಿಸಿದರು. ಈ ಸಂದರ್ಭದಲ್ಲಿ ಮಾಜಿ ಪುರಸಭಾಧ್ಯಕ್ಷ ಹಾಗೂ ಕ್ರಿಕೆಟ್ ಪ್ರೇಮಿಯೂ ಆಗಿರುವ ಬಸವರಾಜ ರಾಯರ ಮಾತನಾಡಿ ಕ್ರೀಡೆ ಎಂಬುವುದು ಎಲ್ಲರ ಮನಸ್ಸನ್ನು ಗೆಲ್ಲುವ ಒಂದು ಮಾಧ್ಯಮವಾಗಿದೆ. ಇದಕ್ಕೆ ಯಾವುದೇ ಭಾಷೆ, ಗಡಿ ಸೀಮಿತತೆಯಾಗಲಿ ಅಥವಾ ಮತಬೇಧವಾಗಲಿ ಇರುವುದಿಲ್ಲ. ಕ್ರಿಕೆಟ್ ದಂತಕಥೆ ಸಚಿನ ತೆಂಡೂಲ್ಕರ ಇನ್ನಿತರರು ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿಗಳನ್ನು ಹೊಂದಿದ್ದಾರೆ. ಅದೇ ತೆರನಾಗಿ ಸ್ಪಿನ್ ಬೌಲಿಂಗ್ ಮೋಡಿಯಿಂದ ವಾರ್ನ್‌ ಕೂಡ ಅದೇ ಸಾಲಿಗೆ ಸೇರುತ್ತಾರೆ. ವಾರ್ನ್‌ ಮಾಡಿರುವ ಅಸಮಾನ್ಯ ಸಾಧನೆಗಳಿಂದ ಕ್ರಿಕೆಟ್ ಜಗತ್ತಿನಲ್ಲಿ ಅಮರರಾಗಿದ್ದಾರೆ ಎಂದರು. 

ಶಿವಶಂಕರ ಗುಜ್ಜರ, ಮಹಾದೇವ ಕಡಬಲ್ಲವರ, ಷಣ್ಮುಖ ಶಿರೋಳ, ರಾಜು ಶೆಟ್ಟರ, ಹಾಜಿ.ಸಿರಾಜ ಬನಹಟ್ಟಿ, ಯಾಸೀನ ಪಾಂಡು, ವಿಶಾಲ, ಯಾಸೀನ ಸೌದಾಗರ, ಲಿಯಾಕತ ಪಕಾಲಿ, ಬಲರಾಮ ಉಸಳಿ, ಆದಮ್, ಮಲ್ಲು ,ವಿನಾಯಕ ಪಾಶ್ಚಾಪುರ, ಕುಮಾರ ನಾಯಕ, ಲಕನ ಸಿಕ್ಕಲಗಾರ, ಮಂಜು ಕಲಾಲ, ಅನಿಲ, ವಿನೋದ ಶಿಂಪಿ, ಲೋಕೇಶ ಹುಕಮ್ಮನವರ, ರವಿ ನಿಲಾರಿ, ತರುಣ ಸಿಕ್ಕಲಗಾರ, ಇಮ್ರಾನ ಪಾಂಡು ಮುಂತಾದವರಿದ್ದರು. 


ಸುದ್ದಿ ಓದಿ