ಇಬ್ರಾಹಿಂ ಸುತಾರ್, ಲತಾ ಮಂಗೇಶ್ಕರ್ಗೆ ಶ್ರದ್ಧಾಂಜಲಿ
ಮಹಾಲಿಂಗಪುರ: ಸಮೀಪದ ರನ್ನಬೆಳಗಲಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು (ವಲಯ ಘಟಕ) ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಒಕ್ಕೂಟ ಸೇರಿ ಗಾನಕೋಗಿಲೆ ಭಾರತ ರತ್ನ ಲತಾ ಮಂಗೇಶ್ಕರ್ ಹಾಗೂ ಪದ್ಮ ಶ್ರೀ ಇಬ್ರಾಹಿಂ ಸುತಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಪ್ರಾಸ್ತಾವಿಕವಾಗಿ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಮಾತನಾಡಿದರು. ಕಸಾಪ ವಲಯದ ರಮೇಶ ಕಂಕನವಾಡಿ, ಶಿಕ್ಷಕರಾದ ರಾಮಪ್ಪ ಹಾರೂಗೇರಿ, ಸದಾಶಿವ ಪುರಾಣಿಕ, ನಾಗೇಶ ಬಟಾಟೆಪ್ಪಗೋಳ,ಹಾಗೂ ಯಮನಪ್ಪ ಆಲಗೂರ, ಬಸವರಾಜ ಗೌರಣ್ಣವರ, ಧನಪಾಲ ಹವಾಲ್ದಾರ, ಸಂತೋಷ ಮಲಾವಾಡಿ, ಅನಂತ ಆಲಗೂರ, ರಜಾಕ ಅತ್ತಾರ, ಕರಿಯಪ್ಪ ಚನ್ನಾಳ, ಬಸವರಾಜ ಮಂಡಿ, ದರ್ಶನ ಕಾಳವ್ವಗೋಳ, ಮಹಿಳಾ ಸಂಘದ ಸಾವಿತ್ರಿ ತೋಳನೂರ, ಅನ್ನಪೂರ್ಣೇಶ್ವರಿ ಮಂಡಿ, ದಾನಮ್ಮ ಧಡೂತಿ, ಸುನಂದಾ ಮಂಟೂರ ಮುಂತಾದವರು ಉಪಸ್ಥಿತರಿದ್ದರು.