ಪ್ರಧಾನ ಕಾರ್ಯದರ್ಶಿ ಮಹಾಂತೇಶಗೆ ಶ್ರದ್ಧಾಂಜಲಿ
ಮಹಾಲಿಂಗಪುರ07: ಶ್ರೀರಾಮಸೇನಾ ಹಿಂದೂಸ್ತಾನ ಸಂಘಟನೆಯ ಮಹಾಲಿಂಗಪುರ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಭಜಂತ್ರಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದು, ಇವರಿಗೆ ಸ್ಥಳೀಯ ಹಿಂದೂ ಸಂಘಟನೆಗಳ ವತಿಯಿಂದ ರಾಣಿ ಚೆನ್ನಮ್ಮ ವೃತ್ತದಲ್ಲಿ ಶುಕ್ರವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀರಾಮ ಸೇನಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾವಿ ಮಾತನಾಡಿ, ಮಹಾಂತೇಶ ತುಂಬಾ ಕ್ರಿಯಾಶೀಲ ಯುವಕ, ಇವರ ಅಗಲಿಕೆಯಿಂದ ಸಂಘಟನೆಗೆ ದೊಡ್ಡ ನಷ್ಟವೇ ಆಗಿದೆ, ಪರಿವಾರದ ಎಲ್ಲರಿಗೂ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಾರೈಸಿದರು.
ಶ್ರೀರಾಮಸೇನಾ ಹಿಂದೂಸ್ತಾನ ಸಂಘಟನೆಯ ಅಧ್ಯಕ್ಷ ನಾಗರಾಜ ಭಜಂತ್ರಿ ಮಾತನಾಡಿ ಸಹೋದರನ ಅಗಲಿಕೆ ನಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲದೆ ಸಂಘಟನೆಯ ಸದಸ್ಯರಿಗೆಲ್ಲರಿಗೂ ನೋವಾಗಿದೆ. ಸಂಘಕ್ಕೆ ಅವರ ಕೌಶಲ್ಯ ಮತ್ತು ಸೇವೆ ಅನನ್ಯವಾಗಿದೆ ಎಂದರು.
ಸಂಘಟನೆಯ ಮಹಾಂತೇಶ ಗುಡೇಜಾಡರ , ಧರ್ಮರಾಜ ಪೂಜಾರಿ, ಶಿವು ನೇಗಿನಾಳ, ಚಂದ್ರು ಭಜಂತ್ರಿ, ಅನಿಲ ಕಿರಿಕಿರಿ, ಲಕ್ಕಪ್ಪ ಭಜಂತ್ರಿ, ಹನಮಂತ ಭಜಂತ್ರಿ, ರಾಹುಲ ಸಿಕ್ಕಲಗಾರ, ನಾಗೇಶ ಭಜಂತ್ರಿ, ದಶರಥ ಕಬಾಡಿ, ಅಕ್ಷಯ ಹಾಸೀಲಕರ, ಸಾಗರ ಭಜಂತ್ರಿ, ಸಂಪತ ಭಜಂತ್ರಿ, ತಿಮ್ಮಣ್ಣ ಭಜಂತ್ರಿ, ಮಹಾಲಿಂಗಪ್ಪ ಭಜಂತ್ರಿ ಇತರರು ಜ್ಯೋತಿ ಬೆಳಗಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.