ಜಿ.ಪಂ ಸದಸ್ಯರಾಗಿದ್ದ ದಿ.ಮಹಾಂತೇಶ ಉದುಪುಡಿ ಶ್ರದ್ಧಾಂಜಲಿ
ಮಹಾಲಿಂಗಪುರ 26: ಹಾಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ದಿವಂಗತ ಮಹಾಂತೇಶ ಉದುಪುಡಿ ಅವರು ಒಬ್ಬ ಹೆಸರಾಂತ ಉದ್ಯಮಿ, ರಾಜಕಾರಣಿಯಾಗಿ ಧಾರ್ಮಿಕ, ಕ್ರೀಡೆ ಇನ್ನೀತರ ಎಲ್ಲ ರಂಗಗಳಲ್ಲಿಯೂ ತಮ್ಮ ಸಹಾಯ ಹಸ್ತವನ್ನು ಚಾಚಿ, ಎಲ್ಲರ ಜೊತೆಯಲ್ಲಿಯೂ ಪಾದರಸದಂತೆ ಬೆರೆತು, ಬಾಳಿದ, ಸ್ನೇಹ ಜೀವಿಯಾಗಿದ್ದರು ಎಂದು ಮಾಜಿ ಪುರಸಭಾಧ್ಯಕ್ಷ ಬಸವರಾಜ ರಾಯರ್ ಹೇಳಿದರು.
ಇತ್ತೀಚೆಗೆ ನಿಧನರಾದ ಮಹಾಂತೇಶ ಉದುಪುಡಿಯವರಿಗೆ ಶನಿವಾರ ಮುಂಜಾನೆ ಗಾಂಧಿ ಕ್ರೀಡಾಂಗಣದಲ್ಲಿ ಪಟ್ಟಣದ ಕ್ರಿಕೆಟ್ ಆಟಗಾರರು ಗೌರವ ದ್ಯೋತಕವಾಗಿ, ಮೊಂಬತ್ತಿ ಬೆಳಗಿಸಿ, ಒಂದು ನಿಮಿಷದ ಮೌನ ಆಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ಮಾತನಾಡಿದರು. ಕ್ರಿಕೆಟ್ ಆಡುವ ಉತ್ಸಾಹಕರಿಗೆ ಬೆಂಬಲಿಸಿ ಅವರ ಪ್ರತಿಭೆಯನ್ನು ರಾಜ್ಯ, ರಾಷ್ಟ್ರಮಟ್ಟದಲ್ಲಿ ಕಾಣುವ ಹೆಬ್ಬಯಕೆಯನ್ನು ಮಹಾಂತೇಶ್ ಅವರು ಹೊಂದಿದ್ದರು. ಈ ಕಾರಣದಿಂದಲೇ ಮಹಾಲಿಂಗಪುರ ಹಾಗೂ ಲೋಕಾಪುರ ಭಾಗಗಳಲ್ಲಿ ಅನೇಕ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ತಮ್ಮ ಇಚ್ಛೆಯನ್ನು ಪ್ರಕಟಿಸಿದ್ದ ಅವರನ್ನು ಕಳೆದುಕೊಂಡು ನಾವೆಲ್ಲಾ ಬಡವಾಗಿದ್ದೇವೆ, ಈ ಸಾವು ನ್ಯಾಯವಲ್ಲವೆಂದು ವಿಷಾದ ವ್ಯಕ್ತ ಪಡಿಸುತ್ತಾ, ಪ್ರತಿವರ್ಷವೂ ಅವರ ಸ್ಮರಣೆಯಲ್ಲಿ ಪಂದ್ಯಾವಳಿಯನ್ನು ಸಹ ಆಯೋಜಿಸಲಿದ್ದೇವೆ ಎಂದರು.
ಹಿರಿಯ ಆಟಗಾರ ಶಿವಶಂಕರ್ ಗುಜ್ಜರ್ ಹಾಗೂ ಡೇವಿಡ್ ಕಡಬಲ್ಲವರ್ ಮಾತನಾಡುತ್ತಾ ಅವರ ಅಕಾಲಿಕ ಮರಣ ರಾಜಕೀಯ, ಧಾರ್ಮಿಕ, ಕ್ರೀಡೆ, ಸಾಮಾಜಿಕವಾಗಿಯೂ ತುಂಬಲಾರದ ನಷ್ಟವಾಗಿದೆ. ಅಲ್ಲದೆ ಅವರ ಕುಟುಂಬಕ್ಕಾಗಿರುವ ಅಪಾರ ದುಃಖದಲ್ಲಿ ನಾವು ಕೂಡ ಭಾಗಿಯಾಗಿದ್ದೇವೆ ಎಂದರು. ಅವರ ಸ್ಮರಣಾರ್ಥ ಒಂದು ದಿವಸದ ಸೌಹಾರ್ದ ಪಂದ್ಯವನ್ನು ಕೂಡ ಏರಿ್ಡಸಲಾಗಿತ್ತು.
ಕಳೆದ ಬೇಸಿಗೆ ಮಾಸದಲ್ಲಿ, ಇದೇ ಗಾಂಧಿ ಕ್ರೀಡಾಂಗಣದಲ್ಲಿ, ಜರುಗಿದ ಎಂಪಿಎಲ್ ಟೂರ್ನಿಯ ಉದುಪುಡಿ ತಂಡದ ಮಾಲೀಕರಾಗಿ, ಪಂದ್ಯಾವಳಿಯಲ್ಲಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಲು, ಆಟಗಾರರಿಗೆ ಹೆಚ್ಚಿನ ಬೆಂಬಲ ನೀಡಿ, ಆ ಪಂದ್ಯಾವಳಿಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಯಾಸಿನ್ ಪಾಂಡು, ರಾಜು ಶೆಟ್ಟರ್, ಮಲ್ಲು ಪಾಚಾಪುರ, ಹುಮಾಯುನ್ ಪಕಾಲಿ, ವಿನೋದ್ ಸಿಂಪಿ, ಹಾಜಿ ಶಿರಾಜ್ ಬನಹಟ್ಟಿ, ಮೇಹಬೂಬ್ ಪೀರಜಾದೆ, ರವಿ ನಿಲಾರಿ, ಸುರೇಶ್ ಆಸಂಗಿ, ಅವನೇಶ್ ಜಾಧವ್, ಶ್ರೀಶೈಲ್ ನಿಂಬರಗಿ, ಆದಮ್ ಮುಜಾವರ, ಸಮೀರ್ ಭಾಗವಾನ್,ಲಖನ ಶಿಕ್ಕಲಗಾರ, ವಿಶಾಲ ಸವಸುದ್ದಿ,ಕಿರಣ ಭಜಂತ್ರಿ, ಶಾರೂಖ್ ಪಾಂಡು ಇನ್ನಿತರರಿದ್ದರು.