ಕೃಷಿಯಲ್ಲಿ ಕೂಲಿ ಕಾರ್ಮಿಕರ ಕೊರತೆ : ಆಧುನಿಕ ತಂತ್ರಜ್ಞಾನಕ್ಕೆ ಅನ್ನದಾತರ ಲಗ್ಗೆ : ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆ
ಬೆಳೆಗಳಿಗೆ ಔಷಧಿ ಸಿಂಪರಣೆಗೆ ಡ್ರೋನ್ ನೀಡಿ ರೈತರ ನೆರವಿಗೆ ಧಾವಿಸಿದ ಕಂಪನಿಗಳು : ಕಡೋಲಿಯಲ್ಲಿ ಪ್ರಾತ್ಯಕ್ಷಿಕೆ
ಪಾರೇಶ ಭೋಸಲೆ
ಬೆಳಗಾವಿ : ಒಂದು ಕಡೆ ಮಳೆರಾಯ ಮುನಿಸಿಕೊಂಡ ಹಿನ್ನೆಲೆಯಲ್ಲಿ ಮಳೆ ಬಾರದೆ ಬಿತ್ತನೆ ಮಾಡದೆ ಅನ್ನದಾತರು ಸಂಕಷ್ಟಕ್ಕೆ ಒಳಗಾಗಿದ್ದರೆ, ಇನ್ನೊಂದು ಕಡೆ ರೈತನ ಮಕ್ಕಳಿಗೆ ಹೆಣ್ಣು ನೀಡಲು ಯಾರು ಮುಂದೆ ಬರುತ್ತಿಲ್ಲ ಎನ್ನುವ ನೋವು ರೈತರನ್ನು ಕಾಡುತ್ತಿದೆ. ಇವೆಲ್ಲದರ ನಡುವೆಯೂ ಜಮೀನುಗಳಲ್ಲಿ ಕೆಲಸ ಮಾಡಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ ಎನ್ನುವ ಚಿಂತೆ ಕೃಷಿಕರಿಗೆ ಚಿಂತೇಗಿಡು ಮಾಡಿದೆ. ಈ ಎಲ್ಲ ಸಮಸ್ಯೆಗಳ ನಡುವೆ ಅನ್ನದಾತರು ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಲು ಆಧುನಿಕ ಕೃಷಿ ತಂತ್ರಜ್ಞಾನಕ್ಕೆ ಮುಂದಾಗಿದ್ದು, ಈ ಬಗ್ಗೆ ರೈತರ ಏಳ್ಗೆಗೆ ಕೆಲವು ಕಂಪನಿಗಳು ಮುಂದಾಗಿರುವದು ಸಂತಸದ ಸಂಗತಿಯಾಗಿದೆ.

ಹೌದು ಓದುಗರೇ ರೈತರ ಪಾಡು ಹೇಳತೀರದು. ಮಳೆಗಾಲ ಹೆಚ್ಚಾದರೂ ಅಥವಾ ಮಳೆಗಾಲ ಕಡಿಮೆಯಾದರೂ ರೈತರ ಭವನೆ ಮಾತ್ರ ತಪ್ಪಿದ್ದಲ್ಲ. ಇವೆಲ್ಲವುಗಳ ಮಧ್ಯೆ ರೈತರಿಗೆ ಕೃಷಿ ಕೆಲಸಗಳಲ್ಲಿ ಕೂಲಿ ಕಾರ್ಮಿಕರು ಸಿಗದೆ ಕಾರ್ಮಿಕರ ಹುಡುಕಾಟಕ್ಕಾಗಿ ಅಲೆದಾಟ ನಡೆಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಅಂಶಗಳನ್ನು ಮನಗಂಡು ಕೆಲ ರಸಗೊಬ್ಬರ ತಯಾರಿಕಾ ಕಂಪನಿಗಳು ರೈತರ ನೆರವಿಗೆ ಬಂದಿವೆ. ರೈತರು ತಮ್ಮ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡಲು ಕೂಲಿ ಕಾರ್ಮಿಕರ ಅವಶ್ಯಕತೆ ಇಲ್ಲ. ಕೂಲಿ ಕೆಲಸಗಾರರು ಮಾಡುವ ಕೆಲಸವನ್ನು ಈಗ ಕೃಷಿಯಲ್ಲಿ ಡ್ರೋನ್‍ಗಳು ಮಾಡಲು ಪ್ರಾರಂಭಿಸಿವೆ.
ಸದ್ಯ ಅಗ್ರಿ ಕಿಸಾನ್ ಡ್ರೋನ್‍ನ’ ಸ್ಪ್ರೇಗಳು ಬೆಳಗಾವಿಯ ಕೃಷಿ ಭೂಮಿಗೆ ಪ್ರವೇಶಿಸಿದ್ದು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಬೆಳಗಾವಿ ತಾಲೂಕಿನ ರೈತರು ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಸಿಂಪಡಿಸಲು ಡ್ರೋನ್‍ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಪ್ರಾರಂಭಿಕ ಪ್ರಾತ್ಯಕ್ಷಿಕೆಯಾಗಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ರೈತರು ಡ್ರೋನ್ ಸ್ಪ್ರೇಗಳನ್ನು ಬಳಸಿದ್ದಾರೆ. ’ಅಗ್ರಿ ಕಿಸಾನ್ ಡ್ರೋನ್’ ತಯಾರಿಕೆಯಲ್ಲಿ ತೊಡಗಿರುವ ಗರುಡಾ ಏರೋಸ್ಪೇಸ್, ರಸಗೊಬ್ಬರ ತಯಾರಿಕಾ ಕಂಪನಿಯಾದ ಇಪ್ಕೋ ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ರೈತರಲ್ಲಿ ಡ್ರೋನ್ ಸ್ಪ್ರೇಗಳನ್ನು ಪರಿಚಯಿಸುವ ಪ್ರಾಯೋಗಿಕ ಯೋಜನೆಯನ್ನು ಪ್ರಾರಂಭಿಸಿದೆ.
ಈ ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಗೆ ಡ್ರೋನ್ ಮೂಲಕ ಬೆಳೆಗಳಿಗೆ ಔಷಧಿ ಸಿಂಪರಣೆ ಮಾಡುವದರಿಂದ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಸಮಯದ ಉಳಿತಾಯದ ಜೊತೆಗೆ ಈ ಕಾರ್ಯಕ್ಕೆ ಕೂಲಿ ಕಾರ್ಮೀಕರು ಅವಶ್ಯಕತೆ ಇಲ್ಲ ಎನ್ನುವ ಮಾತು ಕೇಳಿಬಂದಿದೆ. ಅಲ್ಲದೆ ಈ ಡ್ರೋನ್ ತಂತ್ರಜ್ಞಾನದಿಂದ ಬೆಳೆಗಳಿಗೆ ಔಷಧಿ ಸಿಂಪರಣೆ ಸಲಿಸಾಗಿ ಹಾಗೂ ಔಷಧಿ ಹೆಚ್ಚಾಗಿ ವ್ಯರ್ಥವಾಗದೆ ಎಷ್ಟು ಅವಶಕತೆ ಇದೆ ಅಷ್ಟು ಬಳಸಬಹುದಾಗಿದೆ. ಈ ಡ್ರೋನ್‍ಗಳನ್ನು ಕೆಲ ಕಂಪನಿಗಳು ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆಯಿಂದ ನೀಡಿ ರೈತರ ಏಳ್ಗೆಗೆ ಧಾವಿಸಿವೆ.
ಗುರುವಾರ ಈ ಡ್ರೋನ್ ಸಿಂಪರಣೆ ಕಾರ್ಯವನ್ನು ಬೆಳಗಾವಿ ತಾಲೂಕಿನ ಗಡಿಯ ಕಡೋಲಿ ಗ್ರಾಮದಲ್ಲಿ ಕೆಲ ರೈತರು ಉಪಯೋಗಿಸಿದ್ದು, ಈ ತಂತ್ರಜ್ಞಾನದ ಬಳಕೆಯಿಂದ ಕೃಷಿಗೆ ಅನುಕೂಲವಾಗಲಿದೆ ಎನ್ನುವ ಮಾತು ರೈತರಿಂದ ಕೇಳಿ ಬಂದಿದೆ. ಈ ವೇಳೆ ಡ್ರೋನ್ ಪೈಲಟ್ ಆಶರ್, ನೀರನ್ನು ಒಳಗೊಂಡ ತಂಡವು ರೈತರ ಬೆಳೆಗಳಲ್ಲಿ ಈ ಪ್ರಾಯೋಗಿಕ ಕಾರ್ಯವನ್ನು ನೆರವೇರಿಸಿದೆ. ರೈತರ ಗರುಡ ಏರೋದಿಂದ ತಮ್ಮ ಗುರಿ ಸಾಧಿಸಲಿದ್ದಾರೆ. ಚೆನ್ನೈನ ಬಾಹ್ಯಾಕಾಶದಲ್ಲಿ ನಾವು ಕರ್ನಾಟಕ ರಾಸಾಯನಿಕ ಪ್ರಾತ್ಯಕ್ಷಿಕೆ ಮತ್ತು ರಸಗೊಬ್ಬರ ಸಿಂಪರಣೆಯ ಬಗ್ಗೆ ರೈತರಿಗೆ ಈ ತಂತ್ರಜ್ಞಾನವನ್ನು ಬಳಸಲು ಶಿಕ್ಷಣವನ್ನು ನೀಡುತ್ತೇವೆ. ’ಅಗ್ರಿ ಕಿಸಾನ್ ಡ್ರೋನ್’ ಅನ್ನು ಓಜಿಯಲ್ಲಿ ಬಳಸುತ್ತೇವೆ ಎಂದು ಡ್ರೋನ್ ಪೈಲಟ್ ಆಶ್ವಿನ್ ಈ ವೇಳೆ ಹೇಳಿದರು.
ಈಗ ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಮಳೆರಾಯನ ಮುನಿಸಿನಿಂದ ಬಿತ್ತನೆ ಕಾರ್ಯ ಕುಂಟಿತಗೊಂಡಿದ್ದು, ಮಳೆರಾಯನ ಆಗಮನಕ್ಕಾಗಿ ರೈತರು ಆಗಸದತ್ತ ಮುಖ ಮಾಡಿದ್ದಾರೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕೆಲ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಕಾರ್ಯ ಮುಗಿಸಿದ್ದರೂ ಬೆಳೆಯು ಮೊಳಕೆಯೋಡೆದು ನೀರಿಲ್ಲದೆ ಕಮರಿ ಹೋಗುತ್ತಿದೆ. ಇವೇಲ್ಲರ ನಡುವೆ ರೈತರು ತಮ್ಮ ಬಾವಿ ಅಥವಾ ಕೊಳವೆಬಾವಿ ಮೇಲೆ ಅವಲಂಭಿತರಾಗಿ ಬೆಳೆ ಬೆಳೆದು ಮಾರುಕಟ್ಟೆಗೆ ಸಾಗಿಸಿದರು ಅಲ್ಲಿ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗಿರುವ ಸನ್ನಿವೇಶಗಳು ನೋಡಲು ಸಿಗುತ್ತಿವೆ. ಏನೇ ಆದರು ರೈತರ ಸಂಕಷ್ಟ ಮಾತ್ರ ತಪ್ಪಿದ್ದಲ್ಲ ಎನ್ನುವ ಸತ್ಯವನ್ನು ನಾವೆಲ್ಲರು ಅರಿಯಬೇಕಾಗಿದೆ.