ಮಹಲಿಂಗಪುರ

ಗ್ರಾಮೀಣ ಯುವಕರಿಂದ ಕಿರು ಚಿತ್ರ ನಿರ್ಮಾಣ

ಗ್ರಾಮೀಣ ಯುವಕರಿಂದ ಕಿರು ಚಿತ್ರ ನಿರ್ಮಾಣ
ಮಹಾಲಿಂಗಪುರ ; ಚಿಮ್ಮಡ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ "ಬದುಕು ಮೂರೇದಿನ" ಎಂಬ ಕಿರುಚಿತ್ರದ ಚಿ

ಮಹಾಲಿಂಗಪುರ 21; ಬೆಂಗಳೂರು, ಮುಂಬೈಗಳಂತಹ ಮಹಾನಗರಗಳಿಗೆ ಮಾತ್ರ ಸಿಮಿತವಾಗಿದ್ದ ಸಿನಿಮಾಗಳ ಚಿತ್ರಿಕರಣಗಳು ಇಂದು ಗ್ರಾಮೀಣ ಭಾಗಗಳಿಗೂ ವಿಸ್ತಾರಗೊಂಡು ಕಲಾವಿದರಲ್ಲಿ ಹೆಚ್ಚಿನ ಉತ್ಸಾಹ ತುಂಬಿದೆ. ಇದಕ್ಕೊಂದು ಉತ್ತಮ ಉದಾಹರಣೆ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಹಳ್ಳಿಗಾಡಿನ ಜನಜೀವನ ಆಧಾರಿತ ಕಿರು ಚಿತ್ರ ನಿರ್ಮಿಸಲು ಗ್ರಾಮದ ಕಲಾವಿದರ ತಂಡ ಸಜ್ಜುಗೊಂಡು ಚಿತ್ರೀಕರಣವೂ ಭರದಿಂದ ಸಾಗಿದೆ. 

ಗ್ರಾಮದ ಯುವಕ ಮನೋಜ ಪಾಲಭಾವಿ ನಾಯಕತ್ವದಲ್ಲಿ ಕೊರೊನಾ ಮಹಾಮಾರಿಯ ಅಕ್ರಮಣದಿಂದ ಹಳಸಿದ ಮಾನವ ಸಂಬಂಧಗಳ ಕುರಿತು "ಬದುಕು ಮೂರೇದಿನ" ಮತ್ತು 'ಸಂಬಂದಗಳು ಕಡಿದೋದವು' ಎಂಬ ಶಿರೋನಾಮೆಯಡಿ ಸ್ಥಳೀಯ ಪ್ರಭುಲಿಂಗೇಶ್ವರ ದೇವಸ್ಥಾನ ಒಳಗೊಂಡಂತೆ ಗ್ರಾಮದ ಸುತ್ತಲೂ ಕಿರು ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು ಶೀಘ್ರದಲ್ಲಿಯೇ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ. 

ಮೀಣಾಕ್ಷಿ ವಿಜಯಪುರ ನಾಯಕಿಯಾಗಿ ನಟಿಸಿ, ಬಾಲೂ ಪವಾರ ಛಾಯಾಗ್ರಹಣ, ಶಂಕರ ಪಾಟೀಲ ಕಥೆ, ಚಿತ್ರಕಥೆ, ನಿರ್ದೇಶನದಲ್ಲಿ ಈ ಕಿರುಚಿತ್ರ ಮೂಡಿಬರಲಿದೆ. 

ಇದೇ ತಂಡದಿಂದ ಈಗಾಗಲೆ ತೊಟ್ಟಿಯ ಚಿನ್ನ, ರುದ್ರಭೂಮಿ, ಹಾಗೂ ಉಪವಾಸ ಎಂಬ ಮೂರು ಕಿರು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಗೊಂಡಿದ್ದು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿವೆ. 

ಸುದ್ದಿ ಓದಿ