ಮಹಲಿಂಗಪುರ

ಕಿರು ಚಿತ್ರ ಸ್ಪರ್ಧೆ ; ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಮಹಾವಿದ್ಯಾಲಯಕ್ಕೆ ದ್ವಿತೀಯ ಸ್ಥಾನ

ಕಿರು ಚಿತ್ರ ಸ್ಪರ್ಧೆ ; ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಮಹಾವಿದ್ಯಾಲಯಕ್ಕೆ ದ್ವಿತೀಯ ಸ್ಥಾನ
ಮಹಾಲಿಂಗಪುರ: ಪ್ರಶಸ್ತಿ ಪತ್ರಗಳನ್ನು ಪ್ರದರ್ಶಿಸುತ್ತಿರುವ ವಿಧ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಅಭಿನಂದಿಸಿದರು

ಮಹಾಲಿಂಗಪುರ : ರಾಷ್ಟ್ರೀಯ ಯುವ ದಿನಾಚಾರಣೆ 2023ರ ಅಂಗವಾಗಿ ಬಾಗಲಕೋಟೆಯಲ್ಲಿ ರಕ್ತದಾನದ ಮಹತ್ವ ಕುರಿತು ಆಯೋಜಿಸಿದ ಅಂತರ ಕಾಲೇಜು ಮಟ್ಟದ ಕಿರು ಚಿತ್ರ ಸ್ಪರ್ಧೆಯಲ್ಲಿ ಸ್ಥಳಿಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪದವಿ ಮಹಾವಿದ್ಯಾಲಯದ ಯುಥ್ ರೆಡ್ ಕ್ರಾಸ್ ವಿಂಗ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತಿಯ ಸ್ಥಾನ ಪಡೆದರು. 

 ಈ ಕಾರ್ಯಕ್ರಮ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಸಹಯೋಗದಲ್ಲಿ ನಡೆಯಿತು. 

ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಮ್.ಅವರಾದಿ, ಯುಥ್ ರೆಡ್ ಕ್ರಾಸ್ ವಿಂಗ್ ಸಂಯೋಜಕರಾದ ಆರ್.ಎಸ್.ಪೂಜಾರಿ ಹಾಗೂ ವಿ.ಎಸ್.ಅಂಗಡಿ ಅಭಿನಂದನೆ ಸಲ್ಲಿಸಿದರು.


ಸುದ್ದಿ ಓದಿ