ಬಳ್ಳಾರಿ

ಕುರುಗೋಡಿನಲ್ಲಿ ಅಂಗಡಿ,ಮಳಿಗೆಗಳ ಕಳ್ಳರ ಬಂಧನ

ಕುರುಗೋಡಿನಲ್ಲಿ ಅಂಗಡಿ,ಮಳಿಗೆಗಳ ಕಳ್ಳರ ಬಂಧನ

ಬಳ್ಳಾರಿ 09: ಪುರಸಭೆಯ ಅಂಗಡಿ ಮುಂಗಟ್ಟುಗಳಲ್ಲಿ ಕಳ್ಳತನ ಮಾಡಿದ ಪ್ರಕರಣದ ಒಬ್ಬ ಆರೋಪಿಯನ್ನು ಕುರಗೋಡು ಪಟ್ಟಣದ ಪೊಲೀಸರು ಬಂಧಿಸಿ ಲ್ಯಾಪ್ ಟೊಪ್,  ಮೊಬೈಲ್,ಕ್ಯಾಮರಾ ಸೇರಿದಂತೆ ಒಟ್ಟು ಸುಮಾರು 1 ಲಕ್ಷದ 38 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. 

ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ನಿವಾಸಿಯಾದ, ಎಂ,ಡಿ ತೈಯಬ್,(21)ಬಂಧಿತ ಆರೋಪಿ.ಕುರುಗೋಡು ಪಟ್ಟಣದ,ಅಂಗಡಿ ಮಾಲೀಕರಾದ ವೀರಭದ್ರಗೌಡ ತಂದೆ ಈಶ್ವರಗೌಡ ಸ್ವಾಮಿ ಜು. 30ರಂದು ಕೊಟ್ಟ ದೂರಿನ ಅನ್ವಯ.ದುಷ್ಕರ್ಮಿಗಳ ತಂಡವನ್ನು ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ.ಶೋಭಾ ರಾಣಿ, ಐ.ಪಿ.ಎಸ್‌.ರವರ ಮಾರ್ಗದರ್ಶನದಲ್ಲಿ ಕೆ.ವಿ.ರವಿಕುಮಾರ್ ಹೆಚ್ಚುವರಿ ಎಸ್‌.ಪಿ-01 ಮತ್ತು ನವೀನ್ ಕುಮಾರ್ ಹೆಚ್ಚುವರಿ ಎಸ್‌.ಪಿ.-02 ಬಳ್ಳಾರಿ, ತೋರಣಗಲ್ಲು ಡಿವೈಎಸ್ಪಿ,  ಪ್ರಸಾದ್, ಕೆ.ಗೋಖಲೆ ರವರ ನೇತೃತ್ವದಲ್ಲಿ , ಈ ಪ್ರಕರಣಗಳ ಪತ್ತೆಗಾಗಿ ಸೂಕ್ತ ಮಾರ್ಗದರ್ಶನ ಮಾಡಿದ ಮೇರೆಗೆ ಬಳ್ಳಾರಿ ಜಿಲ್ಲಾ ಕುರುಗೋಡು ಸರ್ಕಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್  ವಿಶ್ವನಾಥ ಕೆ. ಹಿರೇಗೌಡರ್ ರವರ ಮಾರ್ಗದರ್ಶನದಲ್ಲಿ ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಸುಪ್ರೀತ್‌.ವಿ. ಪಿ.ಎಸ್‌.ಐ. (ಕಾ ್ಘ ಸು) ಕುರುಗೋಡು ಹಾಗೂ ಕುರುಗೋಡು ಠಾಣೆಯ ಸಿಬ್ಬಂದಿಯವರಾದ  ಶಕ್ಷಾವಲಿ ಎ.ಸ್‌.ಐ. ಮತ್ತು  ರಾಜಶೇಖರ ಪಿ.ಸಿ.896, ರೇವಣ ಸಿದ್ದೇಶ್ವರ ಮತ್ತು ಇತರೆ ಸಿಬ್ಬಂದಿರವರುಗಳನ್ನು ರಚನೆ ಮತ್ತು ಪತ್ತೆ ಕಾರ್ಯ ಚುರುಕುಗೊಳಿಸಿ ಸದರಿರವರು ಸತತ ಶ್ರಮವಹಿಸಿ ಚಾಣಾಕ್ಷತನದಿಂದ ಕಾರ್ಯನಿರ್ವಹಿಸಿ, ಬುಧವಾರ ಆಗಸ್ಟ್‌ 07 ರಂದು ಕುರುಗೋಡು ಪಿ.ಎಸ್‌.ಐ.ರವರು ತಮ್ಮ ಸಿಬ್ಬಂದಿಯವರೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ. 


ಸುದ್ದಿ ಓದಿ