ಬೆಳಗಾವಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ : ಓರ್ವನ ಸ್ಥಿತಿ ಗಂಭೀರ

ಬೆಳಗಾವಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ : ಓರ್ವನ ಸ್ಥಿತಿ ಗಂಭೀರ
ಬೆಳಗಾವಿಯಲ್ಲಿ ಯುವಕನ ಮೇಲೆ ಗುಂಡಿನ ದಾಳಿ : ಓರ್ವನ ಸ್ಥಿತಿ ಗಂಭೀರ

ಬೆಳಗಾವಿ : ಮಹಾಂತೇಶ ನಗರದ ನಂದಿನಿ ಡೈರಿ ಬಳಿ ಯುವಕನೋರ್ವನ ಮೇಲೆ ಗುಂಡಿನ ದಾಳಿ ನಡೆದಿದ್ದು ಯುವಕನಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.

     ಬೆಳಗಾವಿ ನಗರದ ಮಹಾಂತೇಶ ನಗರ ಬಳಿಯ ನಂದಿನ ಡೈರಿಯ ಬಳಿ ಶೂಟೌಟ ಕೃತ್ಯ ನಡೆದಿದ್ದು, ಈ ಘಟನೆಯಲ್ಲಿ ತಿಳಕವಾಡಿಯ ನಿವಾಸಿ ಪ್ರಣೀತ್ ಕುಮಾರ್ (31) ಎಂಬ ಯುವಕನ ಗಂಭೀರವಾಗಿ ಗಾಯಗೊಂಡಿದ್ದಾನೆ.

ಕೆಎಂಎಫ್ ಡೈರಿ ಬಳಿ  ಟಿಳಕವಾಡಿಯ ದ್ವಾರಕಾ ನಗರ ಐದನೇ ಕ್ರಾಸ್‌ನ ನಿವಾಸಿ ಪ್ರಣೀತ್ ಕುಮಾರ್ ಮೇಲೆ ವೈಯಕ್ತಿಕ ದ್ವೇಷ ಹಿನ್ನೆಲೆ ದಾಳಿ ನಡೆದಿರುವ ಶಂಕೆ ಇದೆ ಎನ್ನಲಾಗಿದೆ.

  ಸ್ಥಳಕ್ಕೆ ಮಾಳಮಾರುತಿ ಠಾಣೆ ಎಸಿಪಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುದ್ದಿ ಓದಿ