ಬೆಳಗಾವಿಯ ನಾಲ್ವರು ಉದ್ಯಮಿಗಳಿಗೆ ತೆರಿಗೆ ಅಧಿಕಾರಿಗಳಿಂದ ಶಾಕ್ : ಮನೆ ಕಚೇರಿಗಳ ಮೇಲೆ ದಾಳಿ

ಬೆಳಗಾವಿಯ ನಾಲ್ವರು ಉದ್ಯಮಿಗಳಿಗೆ ತೆರಿಗೆ ಅಧಿಕಾರಿಗಳಿಂದ ಶಾಕ್ : ಮನೆ ಕಚೇರಿಗಳ ಮೇಲೆ ದಾಳಿ

ಬೆಳಗಾವಿ : ಬೆಳಗಾವಿಯ ಒಟ್ಟು ನಾಲ್ವರು ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ‌ ಮಾಡುವ ಮೂಲಕ ಮಂಗಳವಾರ ಬೆಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.

    ಬೆಳಗಾವಿಯ ಇಬ್ಬರ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಅವರಗಳ ಮನೆ, ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಗೋವಾ, ಬೆಂಗಳೂರು ಅಧಿಕಾರಿಗಳಿಂದ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

   ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರೈನೆಟ್ ಉದ್ಯಮಿ ಆಗಿರುವ ದೊಡ್ಡಣ್ಣವರ ಕುಟುಂಬವು ಈ ದಾಳಿಯಿಂದ ಶಾಕ್ ಆಗಿದೆ.

   ಬೆಳಗಾವಿಯ ಖ್ಯಾತ ಉದ್ಯಮಿ ಅನಿಸಿಕೊಂಡಿರುವ ದೊಡ್ಡಣ್ಣವರ ಕುಟುಂಬವು ಐರಾನ್ ಹಾಗೂ ಗ್ರೈನೆಟ್ ದೇಶ- ವಿದೇಶಗಳಿಗೆ ರಫ್ತು ಮಾಡ್ತಿದ್ದ ಉದ್ಯಮಿಗಳು. 

   ಅಲ್ಲದೇ ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆ ಹೊಂದಿರುವ ಈ ಕುಟುಂಬವು ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಇಬ್ಬರು ಉದ್ಯಮಿಗಳ ಮನೆ ಇದೆ.

   ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್, ಗಣೇಶ ಪುರದಲ್ಲಿರುವ ಅಶೋಕ ಐರಾನ್ ಮಾಲೀಕ ಅಶೋಕ ಹುಂಬರವಾಡಿ ಮನೆ ಮೇಲೂ ದಾಳಿ ಮಾಡಲಾಗಿದೆ.

ಸುದ್ದಿ ಓದಿ